ಅನುವಾದ ಸಂಗಾತಿ

ಹೆಚ್ಚೆಂದರೇನು ಮಾಡಿಯೇನು?

ಕನ್ನಡ ಮೂಲ:ಶೋಭಾ ನಾಯ್ಕ‌ .ಹಿರೇಕೈ ಕಂಡ್ರಾಜಿ.‌

ಇಂಗ್ಲೀಷಿಗೆ:ಸಮತಾ ಆರ್.

ಹೆಚ್ಚೆಂದರೇನು ಮಾಡಿಯೇನು?

A Package of Menstrual Pads Against Pink Background. A package of menstrual pads, sanitary pads, in their wrapper against a pink background stock photography

ಅವರಂತೆ ತಣ್ಣೀರಲ್ಲಿ ಮಿಂದು
ನಲವತ್ತೆಂಟನೆಯ ದಿನದ
‌ವ್ರತ ಮುಗಿಸಿ,
ಆ ಕೋಟೆ ಕೊತ್ತಲಗಳ ದಾಟಿ
ಬೆಟ್ಟವೇರಿ ಗುಡ್ಡವಿಳಿದು, ಕಣ್ಗಾವಲ ತಪ್ಪಿಸಿ
ನಿನ್ನ ಬಳಿ ನಡೆದೇ….
ಬಂದೆನೆಂದು ಇಟ್ಟುಕೋ
ಹೆಚ್ಚೆಂದರೆ ನಾನಲ್ಲಿ
ಏನು ಮಾಡಿಯೇನು?

‘ಬಾಲಕನಾಗಿಹೆ ಅಯ್ಯಪ್ಪ’ ಈ
ಹಾಡು ಹಾಡು ಕೇಳಿ ಕೇಳಿ
ಇತ್ತೀಚೆಗೆ ನಿನ್ನ ಹಳೆಯದೊಂದು
ಪಟ ನೋಡಿದ ಮೇಲೆ
ನನ್ನ ಮಗನಿಗೂ..ನಿನಗೂ..
ಯಾವ ಪರಕ್ಕೂ ..ಉಳಿದಿಲ್ಲ ನೋಡು

ಎಷ್ಟೋ ವರ್ಷ ನಿಂತೇ ಇರುವೆ
ಬಾ ಮಲಗಿಕೋ ಎಂದು
ಮಡಿಲ ಚೆಲ್ಲಿ
ನನ್ನ ಮುಟ್ಟಿನ ಕಥೆಯ
ನಡೆಯುತ್ತಿರುವ ಒಳ ಯುದ್ಧಗಳ ವ್ಯಥೆಯ
ನಿನಗೆ ಹೇಳಿಯೇನು

ಹುಲಿ ಹಾಲನುಂಡ ನಿನಗೆ
ತಾಯ ಹಾಲ ರುಚಿ ನೋಡು
ಹುಳಿಯಾಗಿದೆಯೇನೋ ..
ಎನ್ನುತ್ತಲೇ
ತೇಗಿಸಲು ಬೆನ್ನ ನೀವಿಯೇನು

ದೃಷ್ಟಿ ತೆಗೆದು ನಟಿಗೆ ಮುರಿದು
ಎದೆಗೊತ್ತಿಕೊಂಡು,ತೆ
ಹಣೆಗೊಂದು ಮುತ್ತಿಕ್ಕಿ
ಥೇಟ್ ನನ್ನ ಮಗನಂತೆ ಎನ್ನುತ್ತ
ಹದಿನೆಂಟನೆಯ ಕೊನೆಯ ಮೆಟ್ಟಿಲ ಕೆಳಗಿಳಿದ ಮೇಲೂ….
ಮತ್ತೊಮ್ಮೆ ಮುಗುದೊಮ್ಮೆ ನಿನ್ನ
ತಿರುತಿರುಗಿ ನೋಡಿಯೇನು

ಈಗ ಹೇಳು
ನನ್ನ ಮುಟ್ಟು ನಿನಗೆ ಮೈಲಿಗೆಯೇನು?


What else can I do

I may ,
Just like them
Dipping in cold water
Completing forty eight
Days of abstinence,
Crossing those fortresses
Climbing up and down the hillocks
Escaping all the surveillance
Come trekking to you..
But what else can I do there…

“You are still a child oh Aiyappa”
Listening to this hymn over and over
again and again,later seeing
An old pic of yours
See,there is no difference left
between you and my son.

I may ,
Ask you to rest in my lap
As you are standing still, since ages,
Then I may tell you the stories of
My menstruation pain
And internal conflicts.

I may ,
Breast feed the one
Who has tasted the tiger’s milk
Doubting, it has turned sour
I will massage your back
And make you burp.

I may,
After cracking my knuckles
To rid you off all the ill omen,
Hugging and kissing you on forehead, Descend the eighteen steps,
But will still turn and turn
And keep on looking at you..

Now tell me,
Does my menstruation defile you?

*********************************************************

12 thoughts on “ಅನುವಾದ ಸಂಗಾತಿ

  1. ಇದು ಕನ್ನಡದಲ್ಲಿ ಬಂದ ಶ್ರೇಷ್ಠ ಕವಿತೆಗಳಲ್ಲಿ ಒಂದು.ಕಾರಣ ಸಂಪ್ರದಾಯವನ್ನು ,ಒಂದು ಅಮಾನವೀಯ ಸಂಪ್ರದಾಯವನ್ನು ತಾಯ್ತನದ ಸೆರಗಲ್ಲಿಟ್ಟು ಪ್ರಶ್ನಿಸುತ್ತಾಳೆ ಕವಯಿತ್ರಿ.ಇದು ಶೋಭಾ ನಾಯ್ಕ ಅವರ ಕಾವ್ಯ ಬದುಕಿನ ದಿಕ್ಕು ಸಹ ಆಗಿದೆ.‌ಕಡಿಮೆ ಬರೆಯುವ, ಪ್ರಚಾರದ ಹುಚ್ಚಿಲ್ಲದ ಕವಯಿತ್ರಿ ಪುರೋಹಿತಶಾಹಿ ಮತ್ತು ಅಮಾನವೀಯ ಸಂಪ್ರದಾಯದ ಕಡು ವಿರೋಧಿ. ಕಾಣಲು ಸೌಮ್ಯವಾಗಿದ್ದರೂ ಬಂಡಾಯದ ಕಿಡಿ ಹಾಗೂ ಬೆಳಕು ಎರಡೂ ಕವಯಿತ್ರಿಯಲ್ಲಿದೆ. ಅನುವಾದದ ಮೂಲಕ ಇಂಗ್ಲಿಷ್ ಓದುಗರಿಗೆ ಕನ್ನಡದ ಅತ್ಯುತ್ತಮ ಕವಿತೆ ತಲುಪಿಸುತ್ತಿರುವ ಸಮತಾ. ಆರ್ ಅವರಿಗೂ, ಸಂಗಾತಿಗೂ ಧನ್ಯವಾದಗಳು

  2. ಶೋಭಾ ಮತ್ತು ಸಮತಾ.. ಇಬ್ಬರೂ ಅಭಿನಂದನಾರ್ಹರು.

  3. ಇದು ಕನ್ನಡದ ಶ್ರೇಷ್ಠ ಕವಿತೆಗಳಲ್ಲಿ ಒಂದು. ಕಾರಣ ಅಮಾನವೀಯ ಸಂಪ್ರದಾಯವನ್ನು ತಾಯ್ತನದ ಸೆರಗಿನಲ್ಲಿಟ್ಟು ಸಂಪ್ರದಾಯಸ್ಥರನ್ನು, ಪುರೋಹಿತ ಶಾಹಿಯನ್ನು ಪ್ರಶ್ನಿಸುತ್ತದೆ ಕವಿತೆ. ಈ ಕವಿತೆ ಶೋಭಾ ನಾಯ್ಕ ಅವರ ಕಾವ್ಯದ ಹಾದಿಯ ದಿಕ್ಕನ್ನು ಸಹ ಸೂಚಿಸುತ್ತದೆ . ನೋಡಲು ತುಂಬಾ ಸೌಮ್ಯರಂತೆ ಕಾಣುವ ಶೋಭಾ, ಒಳಗೆ ಅಮಾನವೀಯ ಸಂಪ್ರದಾಯಗಳ ವಿರುದ್ಧ ಆಕ್ರೋಶದ ಕಿಡಿ ಇಟ್ಟುಕೊಂಡವರು. ಅವರು ಬಂಡಾಯದ ಬೆಳಕು ಸಹ ಹೌದು‌.
    ಸಮತಾ .ಆರ್. ಅವರ ಅನುವಾದ ಚೆಂದವಿದೆ. ಈ ಮೂಲಕ ಅವರು ಕನ್ನಡದ ಒಳ್ಳೆಯ ಕವಿತೆಯನ್ನು ಆಂಗ್ಲಭಾಷಾ ಓದುಗರಿಗೆ ನೀಡಿದಂತಾಗುತ್ತದೆ.‌ಪ್ರಕಟಿಸಿದ ಸಂಗಾತಿಗೆ ಅಭಿನಂದನೆಗಳು.

  4. ಸೃಷ್ಟಿಯ ನೈಸರ್ಗಿಕ ಕ್ರಿಯೆ ಹಾಗೂ ಅಸಮಾನತೆ ಕುರಿತ ಅದ್ಭುತ ಕವನ ಸಮತಾ ಅವರ ಅನುವಾದ ಉತ್ತಮವಾ ಗಿದೆ…

  5. ಇದು ಕನ್ನಡದ ಶ್ರೇಷ್ಠ ಕವಿತೆಗಳಲ್ಲಿ ಒಂದು. ಕಾರಣ ಅಮಾನವೀಯ ಸಂಪ್ರದಾಯವನ್ನು ತಾಯ್ತನದ ಸೆರಗಿನಲ್ಲಿಟ್ಟು ಸಂಪ್ರದಾಯಸ್ಥರನ್ನು, ಪುರೋಹಿತ ಶಾಹಿಯನ್ನು ಪ್ರಶ್ನಿಸುತ್ತದೆ ಕವಿತೆ.
    ಸಮತಾ .ಆರ್. ಅವರ ಅನುವಾದ ಚೆಂದವಿದೆ. ಈ ಮೂಲಕ ಅವರು ಕನ್ನಡದ ಒಳ್ಳೆಯ ಕವಿತೆಯನ್ನು ಆಂಗ್ಲಭಾಷಾ ಓದುಗರಿಗೆ ನೀಡಿದಂತಾಗುತ್ತದೆ.‌ಪ್ರಕಟಿಸಿದ ಸಂಗಾತಿಗೆ ಅಭಿನಂದನೆಗಳು.

  6. ಸೃಷ್ಟಿಯ ನೈಸರ್ಗಿಕ ಕ್ರಿಯೆ ಕುರಿತು ಇರುವ ಮೂಢನಂಬಿಕೆ ಅಸಮಾನತೆಗೆ ತಕ್ಕ ಉತ್ತರದಂತಿರುವ ಅದ್ಬುತ ಕವನ. ಸಮತಾ ಅವರ ಅನುವಾದವು ಉತ್ತಮವಾಗಿ ಮೂಡಿ ಬಂದಿದೆ.

  7. ಒಳ್ಳೆಯ ಕವಿತೆ ಮತ್ತು ಸಮರ್ಥ ಸಮತಾಳ ಅನುವಾದ.ಅಭಿನಂದನೆ

  8. ಅದ್ಭುತ ಕವಿತೆ ಮತ್ತು ಎಂದಿನಂತೆ ಸಮತಾಳ ಚೆಂದದ ಅನುವಾದ,ಇಬ್ಬರಿಗೂ ಅಭಿನಂದನೆಗಳು.

  9. ಅದ್ಭುತ ಕವಿತೆ ಮತ್ತು ಎಂದಿನಂತೆ ಸಮತಾಳ ಚೆಂದದ ಅನುವಾದ,ಅಭಿನಂದನೆಗಳು ಇಬ್ಬರಿಗೂ..

  10. ಈ ಹಿಂದೆಯೇ ಓದಿ ಹೇಳಿದ್ದೇನೆ. ಈ ವಸ್ತುವಿನಲ್ಲಿ ಬಂದು ಬಹಳ ವಿಶೇಷ ಕವನ ಇದು..ಹೆಣ್ಣಾಗಿ ನೋಡಿದ್ದ ಕವಿತೆಗಳು ದಂಡಿಯಾಗಿವೆ. ಆದರೆ ತಾಯಾಗಿ…ಇದೊಂದೇ ಇರಬಹುದೇನೋ..( ಓದಿನ ಮಿತಿಯಲ್ಲಿ)

    ಶೋಭಾ, ಫರಕ್ಕು ಆಗ್ಬೇಕು..ಪರಕ್ಕು ಅಲ್ಲ…ಅದು ಉರ್ದು ಶಬ್ದ.

Leave a Reply

Back To Top