ಅನುವಾದ ಸಂಗಾತಿ
ಮೂಲ ಕವನ ಡಾ.ಶಿವಕುಮಾರ್ ಮಾಲಿಪಾಟೀಲ,ಗಂಗಾವತಿ ಅವರ “ದೇವರು ಹೇಳುತ್ತಿದ್ದಾನೆ ವಿಶ್ರಾಂತಿ ಪಡೆಯಿರಿ” ಇಂಗ್ಲೀಷಿಗೆ ನಾಗರೇಖಾ ಗಾಂವಕರ್ ಸಂಗಾತಿಯ ಓದುಗರಿಗೆ ಮೂಲ ಮತ್ತು ಅನುವಾದಿತ ಕವಿತೆಗಳೆರಡನ್ನೂ ಇಲ್ಲಿ ನೀಡಿದೆ ದೇವರು ಹೇಳುತ್ತಿದ್ದಾನೆ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ ಗುಡಿ, ಗುಂಡಾರ, ಮಸೀದಿ, ಚರ್ಚೆಗಳಿಗೆ ಬಹಳಷ್ಟು ಅಲೆದಿದ್ದಿರಿ, ಮನವಿಲ್ಲದೆ ನನ್ನನ್ನು ಬಹಳಷ್ಟು ಹುಡುಕಿದ್ದಿರಿ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ ಕಾಯಕ ಬಿಟ್ಟು ಸಾಮೂಹಿಕ ಭಜನೆ, ಪ್ರಾರ್ಥನೆ ಏನೇನೋ ಜಾತ್ರೆ ,ಉತ್ಸವಗಳನ್ನು ಮಾಡಿದಿರಿ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ. ಅನ್ನ ,ಆಹಾರವಿದ್ದರೂ ಎಲ್ಲಾ ಪ್ರಾಣಿಗಳನ್ನು ತಿಂದು ತೇಗಿದಿರಿ ,ಅನ್ನ ಚೆಲ್ಲಿದಿರಿ, ಈಗ ಮನೆಯಲ್ಲಿಯೇ ತಿನ್ನುತ ವಿಶ್ರಾಂತಿ ಪಡೆಯಿರಿ. ಒಂದು ನಿಮಿಷವು ಸಮಯವಿಲ್ಲವೆಂದು ಒತ್ತಡದಲ್ಲಿ ಅಲೆಯುತ್ತಿದ್ದಿರಿ, ಅನ್ನ ನಿದ್ದೆ ಇಲ್ಲದೆ ಆಸ್ತಿ ಮಾಡಿದ್ದಿರಿ ಸಾಕೀಗ ನೀವು ವಿಶ್ರಾಂತಿ ಪಡೆಯಿರಿ. ಅತಿ ಆಸೆಗೆ ಬೆನ್ನು ಬಿದ್ದು ಸಜೀವಗಳನ್ನು ಸುಟ್ಟು ಸುಟ್ಟು ನಿರ್ಜೀವಗಳನ್ನು ಗಳಿಸಿ, ಗಳಿಸಿ ಇದ್ದಿದ್ದರಲ್ಲಿ ತೃಪ್ತಿ ಪಡದೆ ಅತೃಪ್ತರಾಗಿ ಅಂತರಂಗವ ಅಶುದ್ಧ ಮಾಡಿ ಬದುಕಿದ ನೀವೀಗ ವಿಶ್ರಾಂತಿ ಪಡೆಯಿರಿ. ಸ್ವಾರ್ಥದ ರಾಜಕಾರಣ, ಲಂಚದ ಉದ್ಯೋಗ, ವ್ಯಾಪಾರದ ಶಿಕ್ಷಣ, Marks ಒತ್ತಡದಲಿ ಮಕ್ಕಳು, ಹೆತ್ತವರು, ಗುರುಗಳು. ನಿರುದ್ಯೋಗ ಉತ್ಪಾದಿಸುವ ವಿಶ್ವ ವಿದ್ಯಾಲಯಗಳು ಸಾಕು ನೀವು ವಿಶ್ರಾಂತಿ ಪಡೆಯಿರಿ. ಪರಿಸರದ ಮೇಲೆ ನಿರಂತರ ದಾಳಿ ಮಾಡಿ, ವನ್ಯಜೀವಿಗಳನ್ನು ಕೊಂದಿರಿ, ಈಗ ನೀವು Zoo ನಲ್ಲಿ ಇದ್ದಿರಿ ಪ್ರಾಣಿ, ಪಕ್ಷಿಗಳನ್ನು ಮನೆಯಿಂದಲೇ ನೋಡುತ್ತ ವಿಶ್ರಾಂತಿ ಪಡೆಯಿರಿ. ಒಂದು ಬಸ್, ಟ್ರೇನ್, ಪ್ಲೈಟ್ Miss ಆದರೆ tension ತೊಗೊಂಡಿರಿ. ಜೀವನ ಮುಗಿದೆ ಹೋಯಿತು ಅಂದುಕೊಂಡಿರಿ ಅವು ಎಲ್ಲವು ಅಲ್ಲೆ ನಿಂತಲ್ಲೇ ನಿಂತಿವೆ ನೀವೀಗ ವಿಶ್ರಾಂತಿ ಪಡೆಯಿರಿ. ಟ್ರಾಫಿಕ್ ನಲ್ಲಿ ಹೆತ್ತವರು , ಪ್ಲೇ ಹೋಂ ನಲ್ಲಿ ಕಂದಮ್ಮಗಳು, ವೃದ್ದಾಶ್ರಮದಲ್ಲಿ ಅನಾಥಾಶ್ರಮದಲ್ಲಿ ಅಜ್ಜ ಅಜ್ಜಿ , ನಿಮ್ಮ ಮುಖ ಒಬ್ಬರನೊಬ್ಬರು ನೋಡುತಾ ನೀವೀಗ ವಿಶ್ರಾಂತಿ ಪಡೆಯಿರಿ. ಧರ್ಮದ ಹೆಸರಲ್ಲಿ ಅಧರ್ಮ, ಅತ್ಯಾಚಾರ ಎಸಗಿದಿರಿ, ನಮ್ಮ ಧರ್ಮವೇ ಶ್ರೇಷ್ಠ ಎಂದು ಕೂಗಾಡಿದಿರಿ ಜಗತ್ತನ್ನೇ ನಮ್ಮ ಧರ್ಮ ಆಳಬೇಕು ಎಂದಿರಿ ಭ್ರಮೆಯಲ್ಲಿ ಚೀರಾಡಿದ್ದು ಸಾಕು ನೀವೀಗ ವಿಶ್ರಾಂತಿ ಪಡೆಯಿರಿ. ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಕೊಟ್ಟಿರಿ ವರದಕ್ಷಿಣೆಗೆ ಹೆಣ್ಣನ್ನು ಸುಟ್ಟಿರಿ ಭ್ರೂಣ ಹತ್ಯೆ ಮಾಡಿದಿರಿ ಹೆಣ್ಣನ್ನು ದೇವರೆನ್ನುತ ಗುಡಿ ಹೊರಗೆ ಇಟ್ಟಿರಿ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ. ಶ್ರೇಷ್ಠತೆಯ ಮದದಲ್ಲಿ ಜಾತಿ ಧರ್ಮದ ಗೋಡೆ ಕಟ್ಟುತ್ತ ಅಸಮಾನತೆಯಿಂದ ನಡೆದಿರಿ.. ಅಧಿಕಾರದ ಅಹಂಕಾರದಲ್ಲಿ ಅನ್ನದಾತನ ಮರೆತಿರಿ ಈಗ ಅನ್ನಕ್ಕಾಗಿ ಕೈ ಚಾಚುತ ವಿಶ್ರಾಂತಿ ಪಡೆಯಿರಿ. ದೇಶ ಭಕ್ತಿ ಹೆಸರಲ್ಲಿ ಬಡವರ ಮಕ್ಕಳನ್ನು ಗಡಿಯಲ್ಲಿ ನಿಲ್ಲಿಸಿ ಅತ್ತ ಶಾಂತಿ ಮಾತುಕತೆ ಎನ್ನುತ್ತಾ… ಇತ್ತ ಗಡಿಯಲ್ಲಿ ಯುವಕರನ್ನು ಕೊಲ್ಲುತ್ತಾ , ಅವರ ಮಕ್ಕಳನ್ನು , ಹೆಂಡತಿಯನ್ನು ಅನಾಥ ಮಾಡುವ ಆ ಕಟುಕ ಗಡಿಗಳು ನಿಶ್ಯಬ್ದ ವಾಗಿವೆ ನೀವು ವಿಶ್ರಾಂತಿ ಪಡೆಯಿರಿ. ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಕೊಲ್ಲುತ ಸ್ವರ್ಗ ಸೇರುತ್ತೇನೆ ಎನ್ನುವ ನರಹಂತಕರ ಬಣ್ಣ ಬಯಲಾಗಿದೆ ನಿಮ್ಮ ಮದ್ದು ಗುಂಡುಗಳ ಜೊತೆಗೆ ವಿಶ್ರಾಂತಿ ಪಡೆಯಿರಿ. ಭವಿಷ್ಯ ಹೇಳುವವರ ಭವಿಷ್ಯ ಈಗ ನನ್ನ ಕೈಯಲ್ಲಿದೆ , ದೇವರು, ಧರ್ಮದ ಹೆಸರಲ್ಲಿ ದುಡ್ಡು ಮಾಡಿದವರ ಪಟ್ಟಿ ನನ್ನಲ್ಲಿದೆ… ನನ್ನ ಪಟ್ಟಿ ಈಗ ಬಿಡುಗಡೆ ಮಾಡುತ್ತೇನೆ ನೀವೀಗ ವಿಶ್ರಾಂತಿ ಪಡೆಯಿರಿ. ಎಲ್ಲಾ ಗೆದ್ದೆ ಎನ್ನುತ್ತ ಅಟ್ಟಹಾಸದಿ ಮೆರೆದ ನೀವು ಈಗ ನಿಮ್ಮ ಪ್ರಾಣ ಉಳಿದರೆ ಸಾಕು ಎನ್ನುತ ಅಲ್ಲೆ ನನ್ನನ್ನು ನೆನೆಯುತ್ತ ವಿಶ್ರಾಂತಿ ಪಡೆಯಿರಿ. ******* Now God is telling its enough and relax You have travelled a lot to the temples , mosques and churches searched for me without true devotion Now its enough and relax. Neglected your jobs and engrossed in community bhajans, prayers and in fairs and festivals Now its enough and relax. You butchered the animals even though you have rice and food. spilled the food carelessly. Now stay at home, eat and relax You were wandering under the pressure of not having enough time to earn. sacrificed your food and sleep and earned possession. Now its enough and relax. pursuing your desire you burnt the living and earned the non living things not being contented what you had but you lived a life of dissatisfaction and defiled your inward purity Now its enough and relax Selfish politics bribery in jobs. business like education children, parents and teachers all in the stress of high score . unemployment generating Universities Now its enough and relax You exploited the nature And destroyed the wildlife. Now you are in a zoo. watch the birds and animals through your houses and relax. You got tensed when you missed your bus, train or plight. and thought life almost over. all the things are there where they were So relax now. Parents in traffic kids in a playhome grandparents in an old age home or orphanages so now you both looking only at each other and relax. In the name of religion you commited mistakes and you cried out loud our religion is the greatest’ and preached out ‘our religion must rule the world’ Now stop this screaming in dillusion and relax. You divorced for petty reasons burnt woman alive for dowry. commited Feticide. you claimed ‘women are goddess’ but kept her out of the shrine. now its enough and relax. You built a barrier of caste and creed in a mood of hierarchy and maintained inequality. forgot the farmer with swollen head of power. Now stretch your arms for rice and relax In the name of petriotism the young ones of a poor family at the Borders. Inducing peace talk in one side. But an end to the life of youngsters at the borders on an another side and orphaned their family Those brutal borders are now silent. So you relax. In the name of religion, the pretenders who thought they could go to the heaven through the extermination of innocents, their true colour is demasked Now its enough and with your guns and bullets , you relax. Now the future of the foretellers is in my hand. The con artists who accumulated money in the name of devine, their list is with me. Now I release this list and you relax. You disntict yourself as you’re the conqueror of everything. But now you’re begging for your life. Now stay there where you are and mediate me and relax. ****************
ಅನುವಾದ ಸಂಗಾತಿ
ಕನ್ನಡ ಮೂಲ: ಸುಬ್ರಾಯಚೊಕ್ಕಾಡಿ. ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ ಎಲೆ ಇದರ ಹಂಗೇ ಬೇಡ ಎಂದು ಮರದಿಂದ ಕಳಚಿಕೊಂಡ ಎಲೆ ಈಗ ಸ್ವತಂತ್ರ- ಮೇಲಕ್ಕೆ ಎತ್ತುವ ,ಕೆಳಕ್ಕೆ ತಳ್ಳುವ ಗಾಳಿಯ ನಡುವೆ ಎಲೆಗೆ ಆಕಾಶದಲ್ಲಿ ಜೀಕುತ್ತ ಸ್ವಚ್ಛಂದ ವಿಹರಿಸುವ ಹಕ್ಕಿ ಕನಸು ಗುರಿಯಿರದ ಚಲನೆಯಲಿ ಕನಸೊಡೆದು ನಗು ಮಾಯವಾಗಿ ಆಕಾಶ ದಕ್ಕದೆ ನೆಲ ಕೈಗೆಟುಕದೆ ಎಲೆ ಎಲೆಲೆ ಹೊಯ್ದಾಡಿ, ಈಗ ತ್ರಿಶಂಕು. ಹಕ್ಕಿ ಮಾತ್ರ ಮೇಲೆ ನಸು ನಗುತ್ತಿದೆ ಮರದ ಜೊತೆ ಎಲೆಯ ಸ್ಥಿತಿ ನೋಡಿ. ಆಕಾಶ ಸುಮ್ಮನಿದೆ. ಕರುಣಾಮಯಿ ಧರಿತ್ರಿ ಅವಚಿಕೊಳ್ಳುತ್ತದೆ ಎಲೆಯ ತನ್ನ ತೆಕ್ಕೆಯಲ್ಲಿ ಅಡಗಿಸಿಕೊಳ್ಳುತ್ತದೆ ತನ್ನ ಒಡಲಲ್ಲಿ. — ಸುಬ್ರಾಯಚೊಕ್ಕಾಡಿ. LEAF Thought not tobe In its owe took off from the tree that leaf is now free The leaf amid the lifting up and pushing down air being swinged with a dream of free flying bird. In its aimless journey with broken dreams forgets laughs. neither found the land nor the sky. The leaf .. ..wavelets fluctuated, in a state of trishanku. The bird sitting upon laughs at its condition With the tree. The sky is mum sympathetic earth embosoms the leaf hides it out in its womb. — Translated by – Nagarekha Gaonka
ಅನುವಾದ ಸಂಗಾತಿ
ಕಟ್ಟಿರುವೆ ಈ ಮನೆಯ ನಾನು ನಿಧನಿಧಾನ ಹಿಂದಿ: ರಾಮದರಶ್ ಮಿಶ್ರಾ ಕನ್ನಡ: ಕಮಲಾಕರ ಕಡವೆ ಕಮಲಾಕರ ಕಡವೆ ಕಟ್ಟಿರುವೆ ಈ ಮನೆಯ ನಾನು ನಿಧನಿಧಾನ ತೆರೆಯುತ್ತ ನನ್ನ ಕನಸುಗಳ ಪುಕ್ಕ ನಿಧನಿಧಾನ ಯಾರ ಬೀಳಿಸಲಿಲ್ಲ, ನನ್ನ ನಾ ಹೆಚ್ಚುಗಾಣಿಸಲಿಲ್ಲ ಸಾಗಿತು ಬಾಳ ಪಯಣ, ನಿಧನಿಧಾನ ನೀವೆಲ್ಲಿ ಎದ್ದು ಬಿದ್ದು ತಲುಪಿರುವಿರೋ ಅಲ್ಲಿ ನಾನೂ ಮುಟ್ಟಿಹೆನು, ನಿಧನಿಧಾನ ಬೆಟ್ಟಗಳಿಂದ ಅದಾವ ಪೈಪೋಟಿಯಿರಲಿಲ್ಲ ನಡೆಯುತ್ತಲುಳಿದೆ ತಲೆ ಎತ್ತಿ, ನಿಧನಿಧಾನ ಬಿದ್ದೆನಾದರೆ ನಾನು ಅತ್ತೆ ಒಂಟಿಯಾಗಿ ಮಾಸಿ ಗಾಯ ನೋವು ಮರೆಯಾಯ್ತು, ನಿಧನಿಧಾನ ಅಳುವೋ, ನಗುವೋ, ಇತರರಿಗೆ ಉಣಿಸಲಿಲ್ಲ ನನ್ನ ಪಾಲಿನ ವಿಷವ ನಾನೇ ಕುಡಿದೆ, ನಿಧನಿಧಾನ ನೆಲ, ಮಣ್ಣುಗಳ ಜೊತೆಜೊತೆಯಲ್ಲಿ ಸಾಗಿದವ ಕಟ್ಟಿದೆ ಅದರಲ್ಲಿಯೇ ಪಟ್ಟಣವ, ನಿಧನಿಧಾನ ದಕ್ಕಿತೇನು ನನಗೆ ಈ ನಿನ್ನ ಜಗತ್ತು ಪಡೆದೆ ನಾ ಪ್ರೀತಿ, ಮಾತ್ರ ನಿಧನಿಧಾನ *******
ಅನುವಾದ ಸಂಗಾತಿ
ಕನ್ನಡ ಮೂಲ: ಸುಬ್ರಾಯಚೊಕ್ಕಾಡಿ. ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ Two faces —————- An absolute truth that a coin poses two faces. It is to be used in the game of King and Queen, to get solution for the choice confusion. Both sides of a coin stuck together with their backs like siamese to be Inseparable one survives only when another exists. But now the coin jumped off the pocket. stood outside in a street like a flagpole posed its faces with a stare at north and south horizons middle stood a metal wall Just like never to be united. to be a fixed frame of harsh reality that never encounter with each other. Translated by — NagarekhaGaonkar ——————————————————————– ಎರಡುಮುಖ ಆನಾಣ್ಯಕ್ಕೆಎರಡುಮುಖಗಳು ಇರುವುದಂತೂ ಸತ್ಯ. ರಾಜ-ರಾಣಿ ಆಟಕ್ಕೆ ಆಯ್ಕೆಯ ಗೊಂದಲ ನಿವಾರಣೆಗೆ ಒದಗಿ ಬರುತ್ತಿದ್ದ ಆನಾಣ್ಯದ ಎರಡು ಮುಖಗಳು ಬೆನ್ನಿಗೆ ಬೆನ್ನಾಗಿ ಅಂಟಿಕೊಂಡಿದ್ದವು- ಸಯಾಮಿ ಅವಳಿಗಳಂತೆ- ಬೇರ್ಪಡಿಸಲಾಗದ ರೀತಿಯಲ್ಲಿ ಒಂದರ ಅಸ್ತಿತ್ವ ಇರುವುದೇ ಇನ್ನೊಂದರ ಇರುವಿಕೆಯಲ್ಲಿ ಆದರೆ ಈಗ ಜೇಬಿಂದ ಠಣ್ಣೆಂದೆಗರಿದ ನಾಣ್ಯ ಹೊರಗುರುಳಿ ನಿಂತಿದೆ ಬೀದಿಯಲ್ಲಿ ಗರುಡಗಂಭದಂತೆ ಒಂದು ಮುಖ ಉತ್ತರಕೆ ಇನ್ನೊಂದು ಮುಖ ದಕ್ಷಿಣಕ್ಕೆ- ಕ್ಷಿತಿಜದ ಕಡೆಗೆ ಕಣ್ಣಿಟ್ಟು ನಡುವೆ ನಿಂತಿದೆ ಲೋಹದ ಗೋಡೆ ಎಂದೆಂದೂ ಒಂದಾಗದ ರೀತಿಯಲ್ಲಿ. ಮುಖಗಳೆರಡೂ ಮುಖಾಮುಖಿಯಾಗದೆ ಎರಡಾಗಿಯೇ ಉಳಿಯುವ ಕಠೋರ ವಾಸ್ತವದ ಸ್ಥಿರ ಚಿತ್ರವಾಗಿ. ====== —– ಸುಬ್ರಾಯಚೊಕ್ಕಾಡಿ.
ಅನುವಾದ ಸಂಗಾತಿ
ಕೊನೆಯ ಮು೦ಜಾನೆ ಮೂಲ: ಆಕ್ತೇವಿಯೋ ಪಾಜ಼್ ಕನ್ನಡಕ್ಕೆ : ಮೇಗರವಳ್ಳಿ ರಮೇಶ್ ಮೇಗರವಳ್ಳಿ ರಮೇಶ್ ಕಗ್ಗಾಡಿನೊಡಲ ಕತ್ತಲಲಿ ಕಳೆದಿದೆ ನಿನ್ನ ಕೂದಲು ನನ್ನ ಪಾದವನ್ನು ಸೋಕುತ್ತಿದೆ ನಿನ್ನ ಪಾದ ಮಲಗಿರುವೆ ನೀನು ರಾತ್ರಿಗಿ೦ತಲೂ ಹಿರಿದಾಗಿ. ಆದರೆ ನಿನ್ನ ಆ ಕನಸು ಈ ಕೋಣೆಗಷ್ಟೇ ಸೀಮಿತ. ಎಷ್ಟೊ೦ದು ಜನ ಇದ್ದೇವೆ ನಾವು ನೋಡು ಇಷ್ಟು ಚಿಕ್ಕದಾಗಿ! ಭೂತಗಳನ್ನು ತು೦ಬಿಕೊ೦ಡ ಟ್ಯಾಕ್ಸಿಯೊ೦ದು ಸರಿದು ಹೋಗುತ್ತಿದೆ ಹೊರಗೆ. ಹತ್ತಿರದಲ್ಲಿ ಹರಿವ ನದಿ ಯಾವಗಲೂ ಹಿಮ್ಮುಖ ಪ್ರವಾಹಿಯಾಗಿದೆ. ನಾಳೆ ಇನ್ನೊ೦ದು ದಿನವಾದೀತೆ? ****
ಕಾರ್ಮಿಕ ದಿನದ ವಿಶೇಷ-ಕವಿತೆ
ಕವಿತೆ ನಾಲ್ಕು ಶಬ್ದ ಮರಾಠಿ ಮೂಲ: ನಾರಾಯಣ ಸುರ್ವೆ ಕನ್ನಡಕ್ಕೆ: ಕಮಲಾಕರ ಕಡವೆ ನಾಲ್ಕು ಶಬ್ದ ಪ್ರತಿದಿನದ ರೊಟ್ಟಿಯ ಪ್ರಶ್ನೆ ಪ್ರತಿದಿನದ್ದೂ ಆಗಿದೆ ಒಮ್ಮೊಮ್ಮೆ ಗಿರಣಿ ಹೊರಗೆ, ಒಮ್ಮೊಮ್ಮೆ ಒಳಗೆ ಕಾರ್ಮಿಕನು ನಾನು, ಹರಿತ ಕತ್ತಿಯಂತವನು ಪಂಡಿತರೇ, ಕೊಂಚ ಅಪರಾಧ ಮಾಡಬೇಕಿದೆ ಸ್ವಲ್ಪ ಸಹಿಸಿದೆ, ನೋಡಿದೆ, ಯತ್ನಿಸಿದೆ ನಾನು ನನ್ನ ಜಗತ್ತಿನದೇ ಆದ ಪರಿಮಳವೂ ಅಲ್ಲಿದೆ ಆಗೀಗ ತಪ್ಪಿದೆ, ಸೋತೆ, ಹೊಸತನ್ನು ಕಲಿತೆ ಹೇಗೆ ಬಾಳುತಿರುವೇನೋ ಹಾಗೇ ನನ್ನ ಮಾತಿದೆ ರೊಟ್ಟಿ ಬೇಕು ಸರಿಯೇ, ಮತ್ತೂ ಏನೋ ಬೇಕಿದೆ ಅದಕ್ಕೆ ಈ ಜಗತ್ತು ರೂಪಾಯಿ ಮಾಡಿ ಕುಂತಿದೆ ಇಲ್ಲಿಯೇ ಶಬ್ದಗಳ ಕೈಲಿ ನಾನು ಹೂವ ಹಿಡಿಸಿದೆ ಇಲ್ಲಿಯೇ ಶಬ್ದಗಳ ಕೈಲಿ ನಾನು ಶಸ್ತ್ರ ಹಿಡಿಸಿದೆ ಒಬ್ಬನೇ ಬಂದಿಲ್ಲ ನಾನು ಯುಗವೇ ಜೊತೆಗಿದೆ ಹುಷಾರಿರಿ, ತೂಫಾನು ಇದೋ ಶುರುವಾಗಿದೆ ಕಾರ್ಮಿಕನು ನಾನು ಹರಿತ ಕತ್ತಿಯಂತವನು ಪಂಡಿತರೇ, ಕೊಂಚ ಅಪರಾಧ ಮಾಡಬೇಕಿದೆ ********
ಕಾರ್ಮಿಕ ದಿನದ ವಿಶೇಷ-ಕವಿತೆ
ಕಾರ್ಮಿಕನೊಬ್ಬ ಚರಿತ್ರೆಯನ್ನು ಓದುತ್ತಾನೆ. ಮೂಲ: ಬರ್ಟೋಲ್ಟ್ ಬ್ರೆಕ್ಟ್ ಕನ್ನಡಕ್ಕೆ: ಮೇಗರವಳ್ಳಿ ರಮೇಶ್ ಕಾರ್ಮಿಕನೊಬ್ಬ ಚರಿತ್ರೆಯನ್ನು ಓದುತ್ತಾನೆ. ಥೀಬ್ಸ್ ನ ಏಳು ಗೇಟುಗಳನ್ನು ಕಟ್ಟಿದವರಾರು?ಪುಸ್ತಕಗಳ ತು೦ಬಾ ರಾಜರುಗಳ ಹೆಸರುಗಳು.ಬ೦ಡೆಗಲ್ಲುಗಳನ್ನು ತ೦ದು ಜೋಡಿಸಿದವರು ದೊರೆಗಳೆ?ಮತ್ತು ಬ್ಯಾಬಿಲೋನ್ ಅದೆಷ್ಟು ಸಲ ನಾಶವಾಯಿತು!ಮತ್ತೆ ಮತ್ತೆ ಯಾರು ಕಟ್ಟಿದರು ಈ ನಗರವನ್ನು?ಚಿನ್ನದ ಹೊಳಪಿನ ನಗರಿಯಲ್ಲಿ ಅದನ್ನು ಕಟ್ಟಿದವರು ವಾಸವಾಗಿದ್ದರೆ?ಚೀನಾದ ಮಹಾಗೊಡೆಯನ್ನು ಕಟ್ಟಿ ಮುಗಿಸಿದ ಸ೦ಜೆಗಾರೆ ಕೆಲಸದವರು ಎಲ್ಲಿಗೆ ಹೋದರು?ರೋಮ್ ಸಾಮ್ರಾಜ್ಯದ ತು೦ಬಾ ವಿಜಯದ ಸ೦ಕೇತದ ಕಮಾನುಗಳು.ಯಾರು ನಿಲ್ಲಿಸಿದರು ಅವುಗಳನು?ಯಾರ ಮೇಲೆ ಸೀಸರ್ ವಿಜಯ ಸಾಧಿಸಿದ?ಹಾಡಿನಲ್ಲಿ ಜೀವ೦ತವಾಗಿದೆ ಬೈಜಾ೦ಟಿಯಮ್ಎಲ್ಲಿ ಹೋದವು ಅಲ್ಲಿನ ವಾಸದರಮನೆಗಳು?ಪುರಾಣಪ್ರಸಿದ್ಧ ಅಟ್ಲಾ೦ಟಿಸ್ನಲ್ಲೂರಾತ್ರಿ ಕಡಲು ಭೋರ್ಗರೆದು ಉಕ್ಕಿದಾಗಮುಳುಗುತ್ತಿದ್ದ ಮ೦ದಿ ಬೊಬ್ಬೆಯಿಟ್ಟರುತಮ್ಮ ಗುಲಾಮರಿಗಾಗಿ. ಯುವ ಅಲೆಗ್ಸಾ೦ಡರ್ ಭಾರತವನ್ನು ಗೆದ್ದಅವ್ಬನೊಬ್ಬನೇ ಹೊರಾಡಿ ಗೆದ್ದನೆ?ಸೀಸರ್ ಗಾಲ್ ರನ್ನು ಸೊಲಿಸಿದಅವನ ಸೈನ್ಯದಲ್ಲೊಬ್ಬ ಅಡಿಗೆಯವನೂ ಇರಲಿಲ್ಲವ?ಸ್ಪೈನ್ ನ ಫಿಲಿಪ್ ತನ್ನ ಹಡಗು ಮುಳುಗಿನಾಶವಾಗುವಾಗ ಜೊರಾಗಿ ರೋದಿಸಿದಅಲ್ಲಿ ಇನ್ನಾವ ಕಣ್ಣೀರುಗಳೂ ಇರಲಿಲ್ಲವೆ?ಗ್ರೀಸ್ ನ ಫ್ರೆಡ್ರಿಕ್ ಏಳು ವರ್ಷಗಳ ಯುದ್ಧದಲ್ಲಿವಿಜಯ ದು೦ದುಭಿ ಬಾರಿಸಿದಅವನ ಜತೆ ವಿಜಯೋತ್ಸವವನ್ನುಮತ್ತೆ ಯಾರ್ಯಾರು ಆಚರಿಸಿದರು? ಪ್ರತೀ ಪೇಜಿನಲ್ಲೂ ವಿಜಯದ ವಿವರಯಾರ ಬೆಲೆ ತೆತ್ತು ಏರ್ಪಡಿಸಿದ್ದುಈ ವಿಜಯೊತ್ಸವದ ಕೂಟಗಳನ್ನು? ಪ್ರತೀ ದಶಕದಲ್ಲೂ ಒಬ್ಬ ಮಹಾನ್ ವ್ಯಕ್ತಿ!ತುತ್ತೂರಿಯವನಿಗೆ ಹಣ ಕೊಟ್ಟವರು ಯಾರು? ಎಷ್ಟೊ೦ದು ವಿವರಗಳು!ಎಷ್ಟೊ೦ದು ಪ್ರಶ್ನೆಗಳು!*********
ಅನುವಾದ ಸಂಗಾತಿ
ನಿನ್ನ ಹಾಡು ಮೂಲ: ರಬೀಂದ್ರ ನಾಥ ಟಾಗೋರ್ ಕನ್ನಡಕ್ಕೆ: ಡಾ.ಪ್ರಸನ್ನ ಹೆಗಡೆ ನೀ ಹಾಡುವಾ ಪರಿಯ ನಾನರಿಯೆ ನನ್ನೊಡೆಯಾ ಬೆರಗಿನಿಂ ನಾ ಕುಳಿತು ಪೇಳ್ವೆ ಜಿಯಾ,,,ಪೇಳ್ವೆ ಜಿಯಾ ನಿನ್ನ ಹಾಡಿನಾ ಕಿರಣ ಬೆಳಗುತಿದೆ ಜಗವನ್ನು ಬಾನಿನಿಂ ಬಾನಿಗೆ ಹರಿಸಿ ಉಸಿರು ಆ ಹಾಡಜೀವಸೆಲೆ ಅಡೆತಡೆಯ ಪುಡಿಮಾಡಿ ದೈರ್ಯದಿಂ ಮುಂದಕ್ಕೆ ನುಗ್ಗುತಿಹುದು….ನುಗ್ಗುತಿಹುದು ನಿನ್ನ ಹಾಡಕೂಡೆಂದು ಕೂಗುತಿದೆ ಎನ್ನೆದೆಯು ಆದರದು ಬರಿವ್ಯರ್ಥ ದ್ವನಿಗಾಗಿ ನಾನು ಒರಲುತಿಹೆನು ನಾ ನುಡಿವೆ ಬರಿನುಡಿಯ ಹಾಡಾಗ ಆ ನುಡಿಯು ಕೈಚೆಲ್ಲಿ ಕಣ್ಣೀರ ಸುರಿಸುತಿಹೆನು…ಸುರಿಸುತಿಹೆನು ಅಹ! ದಣಿಯೆ ಎನ್ನ ದಣಿಯೆ ನಿನ್ನಹಾಡಿನಾ ಅನಂತ ಬಲೆಯಲ್ಲಿ ಎನ್ನೆದೆಯ ಹಿಡಿದೆಳೆದು ಬಂದಿಸಿರುವೆ….ಬಂದಿಸಿರುವೆ. ********
ಅನುವಾದ ಸಂಗಾತಿ
ಮೂಲ: ನಿಝಾರ್ ಖಬ್ಬಾನಿ ಕನ್ನಡಕ್ಕೆ: ಡಾ.ಗೋವಿಂದ ಹೆಗಡೆ ಆ ಮೀನಿನಂತೆ ನಾನು ಚುರುಕು ಮತ್ತು ಹೇಡಿ ಪ್ರೇಮದಲ್ಲಿ ನೀನು ನನ್ನಲ್ಲಿನ ಸಾವಿರ ಹೆಣ್ಣುಗಳ ಸಾಯಿಸಿದೆ ಮತ್ತು-ರಾಣಿಯಾದೆ ಚಿಂತಿಸಬೇಡ ನನ್ನ ಮಧು ಖನಿಯೇ ನೀನಿದ್ದೀ ನನ್ನ ಕವಿತೆಗಳಲ್ಲಿ ನನ್ನ ಪದಗಳಲ್ಲಿ ವರುಷಗಳು ಉರುಳಿ ಮುದಿಯಾಗಬಹುದು ಆದರೆ ನನ್ನ ಪುಟಗಳಲ್ಲಿ ನೀನು ಚಿರ ಯೌವನೆ ಈಗಲೂ ನೀನು ನಾನು ಹುಟ್ಟಿದ ದಿನವನ್ನು ಕೇಳುವೆ ಹಾಗಿದ್ದರೆ ಬರೆದುಕೋ-ನಿನಗೆ ಗೊತ್ತಿಲ್ಲದಿರುವುದನ್ನು ಎಂದು ನೀನು ಪ್ರೇಮವನ್ನು ಅರುಹಿದೆಯೋ ಅಂದೇ ನನ್ನ ಜನ್ಮದಿನ! ***********
ಅನುವಾದ ಸಂಗಾತಿ
ಮೂಲ: ಆಕ್ತೇವಿಯೋ ಪಾಜ಼್ (ಮೆಕ್ಸಿಕನ್ ಕವಿ) ಹೋಗಿ ಬರುವ ನಡುವೆ ಮೇಗರವಳ್ಳಿ ರಮೇಶ್ ಹೋಗುವ ಮತ್ತು ಉಳಿಯುವ ನಡುವೆಹೊಯ್ದಾಡುತ್ತದೆ ದಿನತನ್ನದೇ ಪಾರದರ್ಶಕತೆಯ ಮೇಲಿನ ಪ್ರೀತಿಯಲ್ಲಿಶೂನ್ಯ ಮಧ್ಯಾಹ್ನ ಈಗೊ೦ದು ಕೊಲ್ಲಿ.ಸ್ತಬ್ದ ಜಗತ್ತು ಅಪ್ಪಳಿಸುವುದಲ್ಲಿ. ಎಲ್ಲವೂ ಸ್ಪಷ್ಟ ಮತ್ತು ಎಲ್ಲವೂ ಗ್ರಹಿಕೆಗೆ ದೂರಎಲ್ಲವೂ ಹತ್ತಿರ ಮತ್ತು ನಿಲುಕಿಗೆ ದೂರ. ಕಾಗದ, ಪುಸ್ತಕ, ಪೆನ್ಸಿಲ್ಲು, ಗಾಜಿನ ಲೋಟತಮ್ಮ ತಮ್ಮ ಹೆಸರಿನ ನೆರಳಲ್ಲಿ ವಿಶ್ರಮಿಸಿವೆ. ನನ್ನಕಪೋಲಗಳಲ್ಲಿ ಮಿಡಿವಕಾಲ ಪುನರುಚ್ಛರಿಸುತ್ತದೆಬದಲಾಗದ ರಕ್ತದ ಅದೇ ಪದವನ್ನ. ಬೆಳಕು ನಿರ್ಲಕ್ಷ್ಯ ಗೋಡೆಯನ್ನು ಬದಲಿಸುವುದುಪ್ರತಿಫಲನಗಳ ಭಯ೦ಕರ ರ೦ಗವನ್ನಾಗಿ. ಕಣ್ಣೊ೦ದರ ನಡುವಿನಲ್ಲಿ ನನ್ನ ನಾ ಕ೦ಡೆನೋಡುತ್ತ ಅದರ ಶೂನ್ಯ ದೃಷ್ಟಿಯಲ್ಲಿ. ಚದುರಿದೆ ಕ್ಷಣಸ್ತಬ್ದವಾಗಿ ಉಳಿಯುತ್ತೇನೆಮತ್ತು ಹೋಗುತ್ತೇನೆನಾನೊ೦ದು ನಿಲ್ದಾಣ! *****
