ಅನುವಾದ ಸಂಗಾತಿ

Closeup Photo of Clear Long Stem Wine Glass

ಬಶೀರ್ ಬದ್ರ್

ಉರ್ದು ಕವಿ

Image may contain: Mukunda AN

ಕನ್ನಡಕ್ಕೆ: ಕಮಲಾಕರ ಕಡವೆ

“ಜನ ಸೋತು ಹೋಗುತ್ತಾರೆ ಮನೆಯೊಂದ ಕಟ್ಟಲು”

ಜನ ಸೋತು ಹೋಗುತ್ತಾರೆ ಮನೆಯೊಂದ ಕಟ್ಟಲು
ಮರುಕ ಬಾರದೇ ನಿನಗೆ ಕೇರಿಗಳ ಸುಟ್ಟುಹಾಕಲು

ಈ ಹೆಂಡದಂಗಡಿಯಲ್ಲಿ ಬಟ್ಟಲುಗಳು ಮುರಿಯುತ್ತವೆ
ಋತುಗಳು ಬರುತಿರಲು ಋತುಗಳು ಹೋಗುತಿರಲು

ಮಿಡಿವ ಎಲ್ಲ ಕಲ್ಲುಗಳಿಗೂ ಜನ ಹೃದಯ ಎಂದಿದ್ದಾರೆ
ಆಯುಷ್ಯವೇ ಕಳೆದು ಹೋಗುತ್ತದೆ ಎದೆಯ ಹೃದಯವಾಗಿಸಲು

ಪಾರಿವಾಳದ ಕಷ್ಟ ಏನೆಂದರೆ ಕೇಳಲಾಗದು ಅದು
ಯಾರೋ ಅದರ ಗೂಡಲ್ಲಿ ಹಾವನಿಟ್ಟಿರಲು

ಬೇರೆ ಹುಡುಗಿ ಬಾಳಿನಲ್ಲಿ ಬರುವುದೇನೋ ನಿಜ
ಎಷ್ಟು ಕಾಲ ಬೇಕಾಗುವದು ಅವಳ ಮರೆತುಬಿಡಲು

*********

लोग टूट जाते हैं एक घर बनाने में
तुम तरस नहीं खाते बस्तियाँ जलाने में

और जाम टूटेंगे इस शराब-ख़ाने में
मौसमों के आने में मौसमों के जाने में

हर धड़कते पत्थर को लोग दिल समझते हैं
उम्रें बीत जाती हैं दिल को दिल बनाने में

फ़ाख़्ता की मजबूरी ये भी कह नहीं सकती
कौन साँप रखता है उस के आशियाने में

दूसरी कोई लड़की ज़िंदगी में आएगी
कितनी देर लगती है उस को भूल जाने में

Leave a Reply

Back To Top