ಓಂಪ್ರಕಾಶ್ ವಾಲ್ಮೀಕಿ
ಉತ್ತರಭಾರತದ ದಲಿತ ಕಾವ್ಯ
ಕನ್ನಡಕ್ಕೆ-ಕಮಲಾಕರ ಕಡವೆ
ಠಾಕೂರನ ಬಾವಿ
ಒಲೆ ಮಣ್ಣಿಂದು
ಮಣ್ಣು ಕೊಳದ್ದು
ಕೊಳ ಠಾಕೂರಂದು
ಹಸಿವು ರೋಟೀದು
ರೋಟಿ ರಾಗಿಯದು
ರಾಗಿ ಗದ್ದೇದು
ಗದ್ದೆ ಠಾಕೂರಂದು
ಎತ್ತು ಠಾಕೂರಂದು
ನೇಗಿಲು ಠಾಕೂರಂದು
ನೇಗಿಲ ಮೇಲಿನ ಕೈ ನಮ್ದು
ಫಸಲು ಠಾಕೂರಂದು
ಬಾವಿ ಠಾಕೂರಂದು
ನೀರು ಠಾಕೂರಂದು
ಗದ್ದೆ-ಕಣಜ ಠಾಕೂರಂದು
ರಸ್ತೆಬೀದಿ ಠಾಕೂರಂದು
ಮತ್ತೆ ನಮ್ದೇನುಂಟು?
ಹಳ್ಳಿ?
ಪೇಟೆ?
ದೇಶ?
*********************************
ಮೂಲಕವಿತೆ
ठाकुर का कुआँ / ओमप्रकाश वाल्मीकि
चूल्हा मिट्टी का
मिट्टी तालाब की
तालाब ठाकुर का ।
भूख रोटी की
रोटी बाजरे की
बाजरा खेत का
खेत ठाकुर का ।
बैल ठाकुर का
हल ठाकुर का
हल की मूठ पर हथेली अपनी
फ़सल ठाकुर की ।
कुआँ ठाकुर का
पानी ठाकुर का
खेत-खलिहान ठाकुर के
गली-मुहल्ले ठाकुर के
फिर अपना क्या ?
गाँव ?
शहर ?
देश ?