ಅನುವಾದ ಸಂಗಾತಿ

woman and white swans painting

ಮಹಮೂದ್ ದಾರ್ವೀಶ್

ಪ್ಯಾಲೆಸ್ತಿನ್ ಕವಿ

ಕನ್ನಡಕ್ಕೆ: ಕಮಲಾಕರ ಕಡವೆ

ಈಗ, ನೀನು ಎಚ್ಚರಗೊಂಡಂತೆ…”

ಈಗ, ನೀನು ಎಚ್ಚರಗೊಂಡಂತೆ, ಹಂಸದ ಅಂತಿಮ ನೃತ್ಯವ ನೆನಪಿಸಿಕೊ.
ಕನಸಲ್ಲಿ ದೇವಕನ್ಯೆಯರೊಡನೆ ನೃತ್ಯ ಮಾಡಿದೆಯೇನು?
ಗುಲಾಬಿಯ ನಿರಂತರ ಬೆಳಕಿಂದ ದಹಿಸಿದ ಚಿಟ್ಟೆ ನಿನ್ನನ್ನು ಬೆಳಗಿತೇನು?
ನಿನ್ನೆದುರು ಸ್ಪಷ್ಟ ರೂಪದಲ್ಲಿ ಅವತರಿಸಿದ ಫೀನಿಕ್ಸ ಹೆಸರ ಹಿಡಿದು ನಿನ್ನ ಕರೆಯಿತೇನು?
ನಿನ್ನ ಪ್ರಿಯತಮೆಯ ಬೆರಳುಗಳ ಮೂಲಕ ಬೆಳಗಾಗುವುದ ಕಂಡೆಯೇನು?
ನಿನ್ನ ಕೈಯಿಂದ ಕನಸನ್ನು ಮುಟ್ಟಿದೆಯಾ ಅಥವಾ
ನಿನ್ನದೇ ಅನುಪಸ್ಥಿತಿ ಥಟ್ಟನೆ ಅರಿವಿಗೆ ಬಂದು
ಅದರ ಪಾಡಿಗೆ ಕನಸುತಿರಲು ಬಿಟ್ಟೆಯಾ?
ಕನಸುಗಾರರು ಕನಸುಗಳ ತೊರೆಯುವುದಿಲ್ಲ
ಕನಸಿನೊಳಗಿನ ತಮ್ಮ ಜೀವನವನ್ನು ಅವರು ಧಗಧಗನೆ ಮುಂದುವರಿಸುವರು
ನಿನ್ನ ಕನಸನ್ನು ಒಂದು ಜಾಗದಲ್ಲಿ ಹೇಗೆ ಬಾಳಿದೆ ಹೇಳು,
ನೀನು ಯಾರೆಂದು ನಾನು ಹೇಳುವೆ. ಈಗ ನೀನು ಎಚ್ಚರಗೊಂಡಂತೆ
ನಿನ್ನ ಕನಸಿಗೆ ನೀನೇನಾದರೂ ಅಪಚಾರ ಮಾಡಿದ್ದರೆ, ನೆನಪಿಸಿಕೊ.
ಮಾಡಿದ್ದು ಹೌದಾದರೆ ಹಂಸದ ಅಂತಿಮ ನೃತ್ಯವ ನೆನಪಿಸಿಕೊ.

********************

Black And White Photo Of A Little Girl

Leave a Reply

Back To Top