ಅನುವಾದ ಸಂಗಾತಿ

person walking on pathway between tall trees

ರಾಬರ್ಟ್ ಫ್ರಾಸ್ಟ್

ಅಂಗ್ಲಮೂಲ

Image may contain: 1 person, suit

ಕನ್ನಡಕ್ಕೆ: ಕಮಲಾಕರಕಡವೆ

“ತೋಪಿನ ಬಳಿ ಹಿಮಸುರಿವ ಸಂಜೆ”

snow on brown tree

ಇದು ಯಾರ ತೋಪೆಂದು ನಾನು ಬಲ್ಲೆ
ಅವನ ಮನೆ ಇರುವುದು ಊರೊಳಗೆ
ಅವನ ಹಿಮಭರಿತ ತೋಪನ್ನು ನಾನಿಲ್ಲಿ
ನಿಂತು ನೋಡುವುದ ನೋಡಲಾರನವನು

ನನ್ನ ಕುದುರೆಗೆ ಅನಿಸಿದೆ ಇದೆಂಥ ಸೋಜುಗ
ಮನೆಮಾರು ಇರದ ಕಡೆ ನಿಲ್ಲುವುದು ಹೀಗೆ
ತೋಟ ಮತ್ತು ಹಿಮಗಟ್ಟಿದ ಕೆರೆಯ ನಡುವೆ
ವರ್ಷದ ವಿಪರೀತ ಗಾಢಾಂಧಕಾರ ಸಂಜೆ

ಕುದುರೆ ಅಲ್ಲಾಡಿಸಿದೆ ತನ್ನ ಕೊರಳ ಗಂಟೆ
ತೊಂದರೆ ಏನೆಂದು ಕೇಳಲೆಂಬಂತೆ
ಇನ್ನುಳಿದ ಸದ್ದೆಂದರೆ ಸುರಿವ ಹಿಮ
ಮತ್ತು ಹಗುರ ಹಾಯುವ ಗಾಳಿಯೊಂದೆ

ತೋಟವದು ಅದೆಷ್ಟು ಗೂಢ ಮನೋಹರ
ಆದರೆ, ಕೊಟ್ಟ ವಚನಗಳು ಕರೆದಿವೆ ನನ್ನ
ಮತ್ತು ಹೋಗಬೇಕು ಮೈಲುದೂರ ನಿದ್ದೆಗೆ ಮುನ್ನ
ಮತ್ತು ಹೋಗಬೇಕು ಮೈಲುದೂರ ನಿದ್ದೆಗೆ ಮುನ್ನ

===============================

Stopping by Woods on a Snowy Evening



Whose woods these are I think I know.
His house is in the village though;
He will not see me stopping here
To watch his woods fill up with snow.

My little horse must think it queer
To stop without a farmhouse near
Between the woods and frozen lake
The darkest evening of the year.

He gives his harness bells a shake
To ask if there is some mistake.
The only other sound’s the sweep
Of easy wind and downy flake.

The woods are lovely, dark and deep,
But I have promises to keep,
And miles to go before I sleep,
And miles to go before I sleep

Leave a Reply

Back To Top