ಅನುವಾದ ಸಂಗಾತಿ

ನಿಕ್ಕಿ ಗಿಯೊವಿನ್ನಿ

ಅಮೇರಿಕಾದ ಕವಿಯಿತ್ರಿ

Image may contain: 1 person, smiling

ಕನ್ನಡಕ್ಕೆ: ಕಮಲಾಕರ ಕಡವೆ

ನೀನೂ ಸಹ ಬಂದೆ”

ನಾನು ಬಂದೆ ಸರ್ವರ ಸಮ್ಮುಖ ಸ್ನೇಹಿತರ ಅರಸಿ
ನಾನು ಬಂದೆ ಸರ್ವರ ಸಮ್ಮುಖ ಒಲವ ಅರಸಿ
ನಾನು ಬಂದೆ ಸರ್ವರ ಸಮ್ಮುಖ ಸಹಾನುಭೂತಿಗಾಗಿ

ನಿನ್ನ ಕಂಡುಕೊಂಡೆ
ನಾನು ಬಂದೆ ಸರ್ವರ ಸಮ್ಮುಖ ಅಳಲು
ನಾನು ಬಂದೆ ಸರ್ವರ ಸಮ್ಮುಖ ನಗಲು

ನೀನು ನನ್ನ ಕಣ್ಣೊರೆಸಿದೆ
ನೀನು ನನ್ನ ಸಂತೋಷವ ಹಂಚಿಕೊಂಡೆ
ನಾನು ಸರ್ವರ ಸಮ್ಮುಖ ತೊರೆದು ನಿನ್ನ ಅರಸಿ ಹೊರಟೆ

ನಾನು ಸರ್ವರ ಸಮ್ಮುಖ ತೊರೆದು ಹೋದೆ ನನ್ನನೇ ಅರಸಿ
ನಾನು ಸದಾಕಾಲಕ್ಕೆ ಸರ್ವರ ಸಮ್ಮುಖ ತೊರೆದೆ
ನೀನೂ ಸಹ ಜೊತೆಯಾದೆ.

=========

ಆಂಗ್ಲ ಮೂಲ:

You Came , Too”

I came to the crowd seeking friends
I came to the crowd seeking love
I came to the crowd for understanding

I found you
I came to the crowd to weep
I came to the crowd to laugh

You dried my tears
You shared my happiness
I went from the crowd seeking you

I went from the crowd seeking me
I went from the crowd forever
You came, too

============

Leave a Reply

Back To Top