Category: ಕಥಾಗುಚ್ಛ

ಕಥಾಗುಚ್ಛ

ಆಡುತ್ತಿದ್ದ ಮಗುವನ್ನೆತ್ತಿಕೊಂಡು ಎಂದಿನಂತೆ ಬಾಲ್ಕನಿಗೆ ನಡೆದು ತಿನ್ನಿಸತೊಡಗಿದಳು. ʻಇದೇ ನಾನು ಇವ್ನಿಗೆ ತಿನ್ನಿಸ್ತಿರೋ ಕಡೇ ಊಟವಾಗಿದ್ರೆ….ʼ ಅನ್ನಿಸಿ ಮೈಯೆಲ್ಲಾ ನಡುಗಿತು. ಯಾವುದರ ಅರಿವೂ ಇಲ್ಲದ ಪುಟ್ಟ ರಾಮ ಅಮ್ಮನ ಮುಖ ನೋಡಿ ನಕ್ಕಿತು. ಹಾಗೆಯೇ ಮಗುವನ್ನಪ್ಪಿಕೊಂಡವಳ ಕಣ್ಣಲ್ಲಿ ತಡೆಯಿಲ್ಲದೆ ಕಣ್ಣೀರು ಸುರಿಯತೊಡಗಿತು.

ಸುಂದರಮ್ಮನೂ ಸುಮ್ಮನಿರಲಾಗದೆ “ವರ ಕೊಟ್ಟ ಹಾಗೆ ಕೊಡ್ತಿದೀಯ. ಇನ್ನೇನು ಗುನುಗು ಅವಳಿಗೆ. ನೀನು ಹೀಗೆ ತಲೆಮೇಲೆ ಕೂರಿಸ್ಕೊಂಡಿದ್ದಕ್ಕೇ ಅವ್ಳು ಹೀಗೆ ಹದಗೆಟ್ಟಿದ್ದು” ಸಿಡುಕಿದರು. ನಿಧಾನವಾಗಿ ಎದ್ದ ಪದ್ಮ ಏನೂ ಮಾತಾಡದೆ ತನ್ನ ಕೋಣೆಗೆ ಹೋಗಿ ಬಾಗಿಲು ಮುಚ್ಚಿದಳು.

… ಆದರೂ… ಯೋಚನೆಗಳ ಗೊಂದಲದಲ್ಲಿ ಬಿದ್ದಿರುವಾಗಲೇ ಅವಳ ಜೀವನಕ್ಕೆ ಈ ಹೊಸ ತಿರುವೂ ಸಿಕ್ಕಿತ್ತು… ಇದು ಎಲ್ಲಿಗೆ ಹೋಗಿ ಕೊನೆ ಮುಟ್ಟತ್ತೋ… ಮೂರ‍್ನಾಲ್ಕು ದಿನಗಳಾದರೂ ಮತ್ತೆ ವೆಂಕಟೇಶಯ್ಯನವರು ಈ ಬಗ್ಗೆ ಏನೂ ಮಾತಾಡಿಲ್ಲ. ಇದೂ ಒಂದು ತರಹ ಹೆದರಿಕೆ ಹುಟ್ಟಿಸಿ, ಈ ಮೌನ ಯಾವುದಕ್ಕೆ ಪೀಠಿಕೆಯೋ ಎನ್ನಿಸಿಬಿಟ್ಟಿತು…

ಬಿದ್ದು ಬಿಡುತ್ತಾಳೇನೋ ಎಂದು ಗಟ್ಟಿಯಾಗಿ ಅವಳನ್ನು ಹಿಡಿದುಕೊಂಡವನಿಗೆ ಅವಳನ್ನು ಬಿಡಬೇಕೆನ್ನಿಸಲಿಲ್ಲ. ಅವನು ತನ್ನನ್ನು ಬಿಡಲಿ ಎಂದು ಅವಳಿಗೂ ಅನ್ನಿಸಲಿಲ್ಲ… ಬೇಸಗೆಯ ಮೊದಲ ಮಳೆ ಇದ್ದಕ್ಕಿದ್ದಂತೆ ಶುರುವಾಗಿ ಕಾದ ಭೂಮಿ ನೆಂದು ತಣಿಯತೊಡಗಿತ್ತು

ಗಿಳಿಯು ಪಂಜರದೊಳಿಲ್ಲ

ಸೀನಂಗೆ ಇಪ್ಪತ್ತೈದು ವರ್ಷವಾದಾಗ್ಲಿಂದ ಅವನಿಗೊಂದು ಹುಡುಗಿ ಹುಡುಕಕ್ಕೆ ಶುರುಮಾಡಿದ್ದು. ಆಗ್ಲೇ ಅವ್ನಿಗೆ ನಲವತ್ತರ ಹತ್ತಿರತ್ತಿರ ವಯಸ್ಸೇನೋ ಅನ್ನೋ ಹಾಗೆ ಕಾಣ್ತಿದ್ದ. ಅರ್ಧ ತಲೆಕೂದ್ಲು ನೆರೆತುಹೋಗಿತ್ತು. ಎಷ್ಟು ರೀತೀಲಿ ಹೆಣ್ಣು ಹುಡುಕಿದ್ದು. ಹೊಸ ಸಂಬಂಧಗಳೂ ಕೂಡಿ ಬರ‍್ಲಿಲ್ಲ;

ಹೀಗೊಬ್ಬ ಅಜ್ಜ

ಕಥೆ ಹೀಗೊಬ್ಬ ಅಜ್ಜ ತಮ್ಮಣ್ಣ ಬೀಗಾರ. ಅವನದು ಯಾವಾಗಲೂ ಶಾಂತವಾದ ಮುಖ. ಬೆಳ್ಳಗಿನ ಉರುಟಾದ ಮುಖದಲ್ಲಿ ಬಿಳಿಯ ಮೀಸೆ ಬಿಳಿಯ ಹುಬ್ಬು ನಕ್ಕರೆ ಅಷ್ಟೇ ಬಿಳಿಯದಾಗಿ ಹೊಳೆಯುವ ಹಲ್ಲು ಎಲ್ಲ ಅವನನ್ನು ನೋಡಿದಾಗ ನಮಗೆ ಅವನಲ್ಲಿ ಏನೋ ಆಕರ್ಷಣೆಯಾಗುತ್ತಿತ್ತು. ಮುಖದ ಅಗಲಕ್ಕೆ ಚಿಕ್ಕದೇನೋ ಅನಿಸುವಂತಹ ಕಣ್ಣುಗಳು ಹುಬ್ಬಿನ ಅಡಿಯಲ್ಲಿ ಸ್ವಲ್ಪ ಆಳದಲ್ಲಿ ಎಂಬಂತೆ ಕುಳಿತಿದ್ದವು… ಆದರೆ ಆ ಕಣ್ಣುಗಳ ಹೊಳಪಿನಿಂದಾಗಿ ಅವನ ಮುಖ ನೋಡಿದ ತಕ್ಷಣ ಕಾಣುವ ದಪ್ಪ ಮೀಸೆಯ ಜೊತೆಗೇ ಕಣ್ಣುಗಳೂ ಗಮನ ಸೆಳೆಯುತ್ತದ್ದವು. ಅಯ್ಯೋ, […]

ಮನದ ತುಡಿತ

ಮಾಡಿಟ್ಟ ಅಡುಗೆ ಪಾತ್ರೆಗಳು ಹಾಗೆಯೇ ಇದ್ದವು.ಯಾಕೋ ಖಾಲಿ,ಖಾಲಿಯಂತೆ ಭಾಸವಾಗುತ್ತಿದ್ದ ಆ ಹಾಲಿನಿಂದ ಎದ್ದು ಭಾರವಾದ ಮನಸ್ಸನ್ನು ಹೊತ್ತು ದೇವರ ಮುಂದೆ ಹೋಗಿ ಕುಳಿತಳು ಶ್ರೀಶ.ತಲೆಯೊಳಗೆಲ್ಲ ಏನೇನೋ ಕೆಟ್ಟ ಆಲೋಚನೆಗಳು ಸುಳಿಯತೊಡಗಿದ್ದವು.

ಮೀನಾಕ್ಷಿ

ನನ್ನವಳು ಕಾಫೀ ತಿಂಡಿ ತಂದಳು. ಸಂತೋಷದಿಂದ ಎಲ್ಲರೂ ಕೂಡಿ ಮುಗಿಸಿದೆವು. ಮೀನಾಕ್ಷಿಯ ಮಾವನವರೂ ಅವರಲ್ಲಿಗೆ ಬರಲು ಆಮಂತ್ರಿಸಿದನರು. ನಾವು ಸಮ್ಮತಿಸಿದೆವು. ನಾನು, ನನ್ನ ಮನೆಯವಳು ಹಾಗೂ ನಚಿಕೇತ ಗೇಟಿನವರೆಗೆ ಹೋಗಿ ಅವರನ್ನು ಬೀಳ್ಕೊಟ್ಟೆವು. ನಾನು ಮನೆಯವಳಿಗೆ ಗೊತ್ತಾಗದ ಹಾಗೆ ಕಣ್ಣೊರಸಿಕೊಂಡೆ

ಅಗ್ನಿಸ್ಪರ್ಶ

ಮಾಸಿದ್ದ ಬಿಳಿ ಪಂಚೆ ಉಟ್ಟು, ಕಿತ್ತುಹೋದ ಯಾವುದೋ ಒಂದು ಟೀಶರ್ಟ್‌ ಧರಿಸಿ, ಅಡುಗೆ ಮನೆಯಿಂದ ಕಾಫೀ ಮಾಡಿ ಒಂದು ದೊಡ್ಡ ತಟ್ಟೆಯಲ್ಲಿ ಕಾಫೀ ಲೋಟಗಳನ್ನು ತರುತ್ತಿದ್ದ ಶಿವರಾಮನ ಕಡೆ ಎಲ್ಲರ ದೃಷ್ಟಿ ನಾಟಿತ್ತು

ಆಧ್ಯಾತ್ಮ-ಸಂಸಾರ

ಅಷ್ಟಲ್ಲದೇ ಹೇಳುತ್ತಾರೆಯೇ, “ಸಂಸಾರದಲ್ಲಿ ಇದ್ದು ಆಧ್ಯಾತ್ಮ ಆಚರಿಸುವುದು, ಮೊಸಳೆಯ ಮೇಲೆ ಕುಳಿತು ನದಿ ದಾಟಿದ ಹಾಗೆ” ಎಂದು. ಆಧ್ಯಾತ್ಮ ಆಧ್ಯಾತ್ಮವೇ-ಸಂಸಾರ ಸಂಸಾರವೇ.

Back To Top