Category: ಕಾವ್ಯಯಾನ

ಕಾವ್ಯಯಾನ

ಕಾವ್ಯಸಂಕ್ರಾಂತಿ

ಸುಗ್ಗಿಯ ಸಂಭ್ರಮ ರತ್ನಾ ಬಡವನಹಳ್ಳಿ ಬಂದಾನೋ ಭಾಸ್ಕರ ಬೆಳ್ಳಿಯಾ ರಥವೇರಿ ಬುವಿಗೆ ಚೆಲ್ಲುತ ಬೆಳಕ ಹೊನ್ನಕಿರಣಗಳ ಕಾಂತಿ ದಿಕ್ಕು ಬದಲಿಸು ದೆಸೆಯ ತಿರುಗಿಸುತ ಸವಾರಿ ತಂದು ಧರೆಯಲಿ ಮಕರ ಸಂಕ್ರಾಂತಿಯ ಸಂಭ್ರಮ ಊರ ಬಾಗಿಲಿಗೆ ಹಸಿರು ತೋರಣವ ಕಟ್ಟಿ ತಲೆಗೊಂದು ಚೌಕದಾ ಪೇಟವಾ ಧರಿಸಿ ಎಳ್ಳು,ಬೆಲ್ಲ,ಕೊಬ್ಬರಿ ಕಬ್ಬಿನ ಸವಿಯ ಸವಿಯುತ ಬೆಳೆದ ಧಾನ್ಯಗಳ ರಾಶಿಯ ಮಾಡುವ ಸಂಭ್ರಮ ಎತ್ತುಗಳ ಅಲಂಕರಿಸಿ ಮೆರವಣಿಗೆ ಮಾಡುತಾ ಸುಗ್ಗಿಯ ಸಡಗರದಿ ಹುಗ್ಗಿಯನು ತಿನ್ನುತಾ ಕುಣಿ ಕುಣಿದು ನಲಿ ನಲಿದು ಹೆಜ್ಜೆ ಹಾಕುತ […]

ಕಾವ್ಯಸಂಕ್ರಾಂತಿ

ಹಳ್ಳಿಯ ಸಂಕ್ರಾಂತಿ ಸಂಭ್ರಮ ಸುಜಾತ ರವೀಶ್ ಹಬ್ಬಿದ ಮಬ್ಬು ಕಾವಳ ಹರ್ಯೋ ಹೊತ್ತು ನೇಸರ ತನ್ನ ರಥ್ವಾ ಹೊರಳ್ಸೋ ಹೊತ್ತು ಆರಂಬದ ಕೆಲ್ಸ ಮುಗಿದು ಇನ್ನ ಸ್ವಲ್ಪ ಪುರುಸೊತ್ತು ಪಟ್ಟ ಕಷ್ಟಕ್ಕೆ ಪ್ರತಿಫಲ ಎಣಿಸೋ ಹೊತ್ತು . ಭೂಮ್ತಾಯಿ ನಮ್ನೆಲ್ಲಾ ಹರಸ್ತಾ ನಿಂತವಳೇ ಕಾಳ್ಕಡ್ಡಿ ರೂಪ್ದಾಗೆ ಕಣಜಕ್ಕೆ ಬರ್ತೌಳೆ ಕಣದಾಗೆ ರಾಸಿ ರಾಸಿ ತುಂಬೈತೆ ನೆಲ್ಲು ಆಳೆತ್ತರ ಪೇರ್ಸೈತೆ ಮೇವಿಗೆ ಒಣಹುಲ್ಲು . ಬನ್ನಿ ಎಲ್ಲ ಸಂತೋಸ್ವಾಗಿ ಹಬ್ಬ ಮಾಡೋಣ ಹಸಿರು ತಂದು ತಲ್ಬಾಗ್ಲಿಗೆ ತೋರ್ಣಾವಾ ಕಟ್ಟೋಣ […]

ಕಾವ್ಯಸಂಕ್ರಾಂತಿ

ಗಝಲ್ ಸಂಕ್ರಾಂತಿ ವಿಶೇಷ ಎ.ಹೇಮಗಂಗಾ ಹೊಸ ವರುಷದೊಡೆ ಹರುಷವಿನ್ನೂ ಮೂಡಲಿಲ್ಲ ಬಂದರೇನು ಸಂಕ್ರಾಂತಿ? ದುರ್ದಿನಗಳ ಕರಾಳ ನೆನಪಿನ್ನೂ ಮಾಸಲಿಲ್ಲ ಬಂದರೇನು ಸಂಕ್ರಾಂತಿ? ದಕ್ಷಿಣದಿಂದ ಉತ್ತರದೆಡೆಗೆ ನಿಶ್ಚಿತ ಪಥದಲಿ ಸೂರ್ಯನ ಚಲನ ಸ್ವಾರ್ಥದ ಪಥವ ಮನುಜನಿನ್ನೂ ಬದಲಿಸಲಿಲ್ಲ ಬಂದರೇನು ಸಂಕ್ರಾಂತಿ ? ಯಾಂತ್ರಿಕ ಬದುಕಲ್ಲಿ ತುಂಬುವುದು ಸುಗ್ಗಿಯ ಸಂಭ್ರಮ ಅಲ್ಪಕಾಲ ಬಡವನೊಡಲ ಬಡಬಾಗ್ನಿಯಿನ್ನೂ ತಣಿಯಲಿಲ್ಲ ಬಂದರೇನು ಸಂಕ್ರಾಂತಿ? ಸೃಷ್ಟಿಕರ್ತನ ದೃಷ್ಟಿಯಲಿ ಯಾರು ಮೇಲು, ಯಾರು ಕೀಳು ಇಲ್ಲಿ? ಅಸಮಾನತೆಯ ಗೋಡೆಯನಿನ್ನೂ ಕೆಡವಲಿಲ್ಲ ಬಂದರೇನು ಸಂಕ್ರಾಂತಿ ? ಮಂದಿರ, ಮಸೀದಿ, […]

ಕಾವ್ಯಯಾನ

ಹೆದರುವುದಿಲ್ಲ ವಿಜಯಶ್ರೀ ಹಾಲಾಡಿ ಹೆದರುವುದಿಲ್ಲನಿಸರ್ಗದೊಂದಿಗೆ ದುಡಿಯುವುದುಬೆವರಿನ ತುತ್ತು ತಿನ್ನುವುದುಇದೇ ಬದುಕೆಂದು ತಿಳಿದನನ್ನ ಪೂರ್ವಜರ ಕಾಲವದುನನಗಾಗಲಿ ನನ್ನ ಓರಗೆಯಮಂದಿಗಾಗಲಿ ಜನನ ಪತ್ರಗಳಸರಕಾರಿ ದಾಖಲೆಗಳಹೊಳಹೂ ತಿಳಿದಿರಲಿಲ್ಲ ಇಲ್ಲದ ಪ್ರಮಾಣ ಕಾಗದಗಳತಂದುಕೊಡಿರೆಂದು ಆಜ್ಙಿಸುವವರೆಹೂವು ಅರಳಿದ್ದಕ್ಕೆ ಸಾಕ್ಷಿಹೇಳಲು ಒತ್ತಾಯಿಸದಿರಿಶತಮಾನಗಳಿಂದ ಇದೇನೀರು ಮಣ್ಣು ಗಾಳಿಉಸಿರಾಡಿದ್ದೇವೆ- ಇನ್ನೂ ಇಲ್ಲೇಇದ್ದು, ಸತ್ತು ನೆಲದಋಣವ ಸಲ್ಲಿಸುತ್ತೇವೆ…ನೀವು ಬಂದೂಕಿಗೆಮಾತು ಕಲಿಸಿರುವಿರಿಲಾಠಿ ಬಡಿಗೆ ದೊಣ್ಣೆಗಳಕೆತ್ತಿ ಹರಿತಗೊಳಿಸಿರುವಿರಿಆದರೆರಕ್ತದ ಹಾದಿಯಲ್ಲಿ ಬೀಜ– ಮೊಳೆಯುವುದಿಲ್ಲ ಮಳೆಬೀಳುವುದಿಲ್ಲ- ಹಸಿವಿಗೆಅನ್ನ ಬೆಳೆಯುವುದಿಲ್ಲ ಇಲ್ಲದ ಕಾಗದಪತ್ರಗಳಜಾಗದಲ್ಲಿ ನಮ್ಮ ದೇಹಗಳಿವೆಈ ನೆಲದ ಸಾರಹೀರಿದ ಜೀವಕೋಶಗಳಿವೆಮನಸ್ಸುಗಳಿವೆಆತ್ಮಗಳಿವೆಕನಸುಗಳಿವೆನಂಬಿ….ಇದಕ್ಕೂ ಮೀರಿಬದುಕಿಬಾಳಿದ ಹೊಲ- ಮನೆ-ಗಳ ಅಗಲಿ ಯಾವ […]

ಕಾವ್ಯಯಾನ

ಅಹಂ ಜ್ಞಾನಿಗಳು ಹರೀಶ್ ಗೌಡ ಗುಬ್ಬಿ ಅಹಂ ಜ್ಞಾನಿಗಳು ತನ್ನವರ ಏಳ್ಗೆಯಂ ಸಹಿಸದವರು ನೀವು ಬಿದ್ದವರ ಕಂಡೊಡನೆ ನಕ್ಕವರು ನೀವು ಅವರಿವರ ಕಾಲ್ಗೆಳಗೆ ಕಾಲೆಳೆದವರು ನೀವು ಉದ್ದುದ್ದ ಬೀಗುತ್ತ ಉದ್ಗಾರ ಮಾತಿನಲಿ ಪರನಿಂದೆ ಗೈದವರು ನೀವಲ್ಲವೇ. ನೀ ನುಡಿದುದಂ ನಡೆಯಬೇಕೆನುತಲಿ ಅಡ್ಡಡ್ಡ ದಾರಿಗಳಂ ತುಳಿದವರು ನೀವು ಸರಿ ಮಾರ್ಗದ ದಾರಿಹೊಕನಂ ಕರೆದು ಗೊಟರಿನೊಳಗೆ ನೂಕಿದವರು ನೀವು ಅಹಂ ಜ್ಞಾನವಂ ಮೈತುಂಬಿದವರು ನೀವಲ್ಲವೆ. ಗಳಿಸಿದ ಹೆಸರಂ ಬಳಸಿ ಆತ್ಮದೊಳು ಕಸವಂ ತುಂಬಿ ಅಮಾಯಕರ ನೋವಾಗಿ ಕುಳಿದು ಕುಪ್ಪಳಿದವರು ನೀವು […]

ಕಾವ್ಯಯಾನ

ಆನಿ ಜಯಾ ಮೂರ್ತಿ ಪಂಜರದ ಹಕ್ಕಿ ಅಲ್ಲ ನೀನು ಸ್ವತಂತ್ರ ಹಕ್ಕಿ ನೀ ಹಾರುವೆ ಎಲ್ಲಿಬೇಕಲ್ಲಿ ಒಡೆಯ ನ ಭುಜದಲ್ಲಿ ಒಡತಿಯ ಕೈಯಲ್ಲಿ ಮನೆಯ ಮೂಲೆಯಲ್ಲಿ ನೀನು ಸಾಮಾನ್ಯ ಹಕ್ಕಿಯಲ್ಲ ಎಲ್ಲಿಂದ ಧರೆಗಿಳಿದೆ ವಾಸಿಸಲು ಇಲ್ಲಿ? ಇಂದ್ರನ ಸ್ವರ್ಗದಿಂದ ಇಳಿದೆಯಾ? ಅಪ್ಸರೆ ಗಂಧರ್ವರಿಂದ ಹಾಡಲು ಕಲಿತೆಯ? ನಾರದರ ತಂಬೂರಿ ಶ್ರುತಿ  ಜೊತೆಯ? ನಿನ್ನ ಹಾಡಿನ ಶೈಲಿ ಪುರಂದರ ತ್ಯಾಗರಾಜ ಶಯ್ಲಿ ನಿನ್ನ ಸ್ವರ ಹೋಲುವುದಿಲ್ಲಿ ಆಲಾಪನೆ, ಪಲ್ಲವಿ, ಚರಣ ದಲ್ಲಿ ಸ್ವರ ಆ ದೇವನ ಪ್ರಾರ್ಥನೆ ರೀತಿಯಲ್ಲಿ […]

ಕಾವ್ಯಯಾನ

ಗ್ರಹಣಕ್ಕೆ ಮುನ್ನ ಪ್ರಮಿಳಾ ಎಸ್.ಪಿ ಗ್ರಹಣಕ್ಕೆ ಮುನ್ನ ಕೋಣೆ ಕಿಟಕಿಯ ಸರಳುಗಳ ನಡುವೆ ಚಂದ್ರಮನ ಚಿತ್ರ ಮನದಲ್ಲಿ ಆತುರದ ಕಾವು… ಗ್ರಹಣ ಪ್ರಾರಂಭ ಆಗುವುದಕ್ಕೆ ಮುನ್ನ ಮನೆ ಮಂದಿಗೆಲ್ಲಾ ಊಟ ಬಡಿಸಬೇಕಿದೆ.. ಎದೆಯೊಳಗಿನ ನೋವುಗಳ ಬಚ್ಚಿಟ್ಟು…ಪರದೆ ಮುಂದೆ ಕುಳಿತು ಪುಂಗಿ ಮಾತು ಆಲಿಸಿ ಆಕಳಿಸುವ ಅರಮನೆಯ ಮನಸ್ಸುಗಳ ನಡುವೆ ಆತುರಕ್ಕೆ ಆಟ ವಾಡ ಬೇಕಿದೆ ನಾನು… ಬಳಲಿದ ಕಾಲುಗಳ… ಮೇಲೆ ನಿಂತು ನಿಟ್ಟುಸಿರು ಸೆರಗು ಸುತ್ತಿ ಪ್ರತಿ ಕ್ಷಣಕ್ಕೂ ಬೇಡುತಿದ್ದೇನೆ ಹೊರಗೆ ಹೋದವರು ಹುಷಾರಾಗಿ ವಪಸ್ಸಾಗಲಿ.. ಪರದೆಯಲ್ಲಿ […]

ಕಾವ್ಯಯಾನ

ನಭದ ಕೌತುಕದ ಕಡೆಗೆ ನಾರಾಯಣಸ್ವಾಮಿ ವಿ ನಭದ ಕೌತುಕದ ಕಡೆಗೆ ಮನವ್ಯಾಕೋ ಯೋಚನಲಹರಿಯ ಕಡೆಗೆ ತಿರುಗುತಿದೆ, ಅಜ್ಞಾನದಿಂದ ವಿಜ್ಞಾನದ ಕಡೆ ಸಾಗಿದ ಮನುಜ ಮತ್ತೆಕೊ ಮರಳಿ ಅಜ್ಞಾನದ ಗೂಡಿನ ಸುತ್ತ ಸುಳಿಯುತಿರುವನೆಂದು…….. ಪ್ರಕೃತಿಯ ವಿಸ್ಮಯಕ್ಕೆ ಹೆದರಿ ದೇಗುಲ-ಗೃಹಗಳ ಕದವನೆ ಮುಚ್ಚಿ,ದೂರದರ್ಶನದ ಪರದೆಯೊಳಗೆ ನಭದ ಕೌತುಕವನು ವೀಕ್ಷಣೆ ಮಾಡುತಿಹನು……. ಆಗಸದಲಿ ಘಟಿಸುವ ಸೂರ್ಯಚಂದ್ರರ ವಿಸ್ಮಯ ರೂಪವನು ಕನ್ನಡಿಯೊಳಗಿಂದ ನೋಡಬಹುದೆಂದು,ವಿಜ್ಞಾನಿಗಳು ಸಾರಿ ಸಾರಿ ಹೇಳಿದರೂ ನಂಬಲೇ ಇಲ್ಲ ವಿಜ್ಞಾನವನು…… ಟಿವಿ ಪರದೆಯೊಳಗೆ ಕುಳಿತು ಕಟ್ಟುಕಥೆ ಸಾರುವ ಮಾತಿನಮಲ್ಲರ ಭಾಷಣವು ಹುಟ್ಟಿಸಿತು […]

ಕಾವ್ಯಯಾನ

ಸ್ತ್ರೀ ಹೆಜ್ಜೆ ಕವಿತಾ ಸಾರಂಗಮಠ ಸ್ತ್ರೀ ಹೆಜ್ಜೆ ಲಂಗ ದಾವಣಿ ತೊಟ್ಟ ಬಾಲೆಯರು ವಿರಳ.. ಹಿಡಿದಿದೆ ಫ್ಯಾಶನ್ನಿನ ಮರುಳ.. ಮಾಯವಾಗಿವೆ ಉದ್ದ ಜಡೆ ಮೊಗ್ಗುಗಳ.. ಕೇಶ ಕತ್ತರಿಸಿ ನಡೆಯುವರು ಸರಳ..! ಅನುಕರಣೆ ಹೆಸರಲಿ ನಡೆದಿದೆ ಅಂಧರ ಆಟ.. ತೋರುತಿದೆ ತೆಳು ಧಿರಿಸಿನಲಿ ಅವಳ ಮೈಮಾಟ.‌. ಹಗಲಿರುಳೂ ಅವಳ ಪೀಡಿಸುತ್ತಿದೆ ಕಾಮುಕರ ಕೂಟ..! ಮಾಧ್ಯಮಗಳಲ್ಲಿ ಜಾಹಿರಾತುಗಳ ದರಬಾರು.. ಮಹಿಳೆಯರ ಮನೆ-ಮನಗಳಲ್ಲಿ ಅವುಗಳದ್ದೇ ಸಂಚಾರು.. ಹೋಗುತಿರುವ ಅವಳದೇ ಮಾನಕೆ ಇಲ್ಲವೇ ಇಲ್ಲ ಕೊಂಚ ವಿಚಾರ..! *********

ಕಾವ್ಯಯಾನ

ಸೀರೆಯ ಸಹವಾಸ ತ್ರಿವೇಣಿ ಜಿ.ಹೆಚ್ ಸೀರೆಯ ಸಹ ವಾಸ. ಸೆರಗು ನಿರಿಗೆಗಳ ಸಮೀಕರಿಸಿ ಉಬ್ಬಿದೆದೆ ಕಂಡೂ ಕಾಣಿಸದಂತೆ ಮಣಿಸಿ ನಡುವೆ ‌”ನಡು”ವಿನ ಆಕಾರವ ಅಂದಗಾಣಿಸಿದರೂ ಜಗ್ಗುವ ಬೊಜ್ಜು. ಒಂದೊಂದು ಸೀರೆ ಉಟ್ಟಾಗಲೂ ಮತ್ತೆಷ್ಟೋ ನೆನಪುಗಳ ಕದ ಬಡಿದು ಅಳಿಸಲಾಗದವನ್ನಲ್ಲೇ ಮುಚ್ಚಿಟ್ಟು… ಕಣ್ಣ ಕನಸುಗಳನ್ನೂ ಬೆಚ್ಚಗಿಟ್ಟು… ಜರಿ ಅಂಚಿನ ಸೀರೆ, ಅಲ್ಲಲ್ಲಿ ಸಣ್ಣ ಹೂಬಳ್ಳಿಯಂಚು, ನವಿರು ಭಾವ ಒಲವ ಮೆಲುಕು. ಚಿತ್ತಾಕರ್ಷಕ ಚಿತ್ತಾರ. ಉಟ್ಟು ತೊಟ್ಟು ಸಂಭ್ರಮಿಸಿದ ಆ ಘಳಿಗೆ. ಅಷ್ಟೊಂದು ಸುಲಭವಲ್ಲ ಸೆರಗ ತುದಿಯಲ್ಲಿ ಕನಸು ಕಟ್ಟಿಕೊಂಡೇ […]

Back To Top