ಆನಿ
ಜಯಾ ಮೂರ್ತಿ
ಪಂಜರದ ಹಕ್ಕಿ
ಅಲ್ಲ ನೀನು ಸ್ವತಂತ್ರ ಹಕ್ಕಿ
ನೀ ಹಾರುವೆ ಎಲ್ಲಿಬೇಕಲ್ಲಿ
ಒಡೆಯ ನ ಭುಜದಲ್ಲಿ
ಒಡತಿಯ ಕೈಯಲ್ಲಿ
ಮನೆಯ ಮೂಲೆಯಲ್ಲಿ
ನೀನು ಸಾಮಾನ್ಯ ಹಕ್ಕಿಯಲ್ಲ
ಎಲ್ಲಿಂದ ಧರೆಗಿಳಿದೆ ವಾಸಿಸಲು ಇಲ್ಲಿ?
ಇಂದ್ರನ ಸ್ವರ್ಗದಿಂದ ಇಳಿದೆಯಾ?
ಅಪ್ಸರೆ ಗಂಧರ್ವರಿಂದ ಹಾಡಲು ಕಲಿತೆಯ?
ನಾರದರ ತಂಬೂರಿ ಶ್ರುತಿ ಜೊತೆಯ?
ನಿನ್ನ ಹಾಡಿನ ಶೈಲಿ
ಪುರಂದರ ತ್ಯಾಗರಾಜ ಶಯ್ಲಿ
ನಿನ್ನ ಸ್ವರ ಹೋಲುವುದಿಲ್ಲಿ
ಆಲಾಪನೆ, ಪಲ್ಲವಿ, ಚರಣ ದಲ್ಲಿ
ಸ್ವರ ಆ ದೇವನ ಪ್ರಾರ್ಥನೆ ರೀತಿಯಲ್ಲಿ
ಒಮ್ಮೊಮ್ಮೆ ಹಾಡುವೆ
ದೊ, ರೆ, ಮಿ, ಫಾ, ಸೊಲ್, ಲ, ಸಿ
ಪಾಶ್ಚತ್ಯ ಸಂಗೀತ ಶ್ಯಲಿಯಲ್ಲಿ
ಹೌದು, ಎಲ್ಲಿದೆ ಸಂಗೀತಕ್ಕೆ ಎಲ್ಲೆ
ನಿನ್ನ ಮಧುರ ಕೋಗಿಲೆ ಕಂಠ
ಹೋಲುವುದು ಲತಾ, ಸುಬ್ಬಲಕ್ಷ್ಮಿಯರ
ನೀನು ಸರಸ್ವತಿಯ
ವರಪುತ್ರಿ,
ನಿನ್ನ ಏಳು ಬಣ್ಣಗಳು ಸಪ್ತ ಸ್ವರಗಳಂತೆ
ಆ ಕನಕಾಂಬರಿ ಚಿಹ್ನೆ
ನಿನ್ನ ಪವಿ ತ್ರತೆಯ ಚಿಹ್ನೆ
ಒಡೆಯ ಒಡತಿಯರ ಮುದ್ದಿನ ಗಿಳಿ ನೀನು
ನಿನ್ನ ದನಿ ಕೇಳುವ ಸೌಭಾಗ್ಯ
ನಮಗೂ ನೀಡು ‘ ಆನಿ ‘
*********
ಧನ್ಯವಾದಗಳು. ತುಂಬಾ ಜನಕ್ಕೆ ಸಂಗಾತಿ ಪರಿಚಯ ಆಯಿತು.