ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
55ABT59 - 32in X 32in,55ABT59_3232,Multi-Color,Oil Colors,Canvas,Rs.4490,,Abstract,Modern Art,Abstract;Latest Collection;By Orientation and Size/Square/Medium (25in to 32in);Full Collection,Museum Quality - 100% Handpainted

ಅಹಂ ಜ್ಞಾನಿಗಳು

ಹರೀಶ್ ಗೌಡ ಗುಬ್ಬಿ

ಅಹಂ ಜ್ಞಾನಿಗಳು

ತನ್ನವರ ಏಳ್ಗೆಯಂ ಸಹಿಸದವರು ನೀವು
ಬಿದ್ದವರ ಕಂಡೊಡನೆ ನಕ್ಕವರು ನೀವು
ಅವರಿವರ ಕಾಲ್ಗೆಳಗೆ ಕಾಲೆಳೆದವರು ನೀವು
ಉದ್ದುದ್ದ ಬೀಗುತ್ತ ಉದ್ಗಾರ ಮಾತಿನಲಿ
ಪರನಿಂದೆ ಗೈದವರು ನೀವಲ್ಲವೇ.

ನೀ ನುಡಿದುದಂ ನಡೆಯಬೇಕೆನುತಲಿ
ಅಡ್ಡಡ್ಡ ದಾರಿಗಳಂ ತುಳಿದವರು ನೀವು
ಸರಿ ಮಾರ್ಗದ ದಾರಿಹೊಕನಂ ಕರೆದು
ಗೊಟರಿನೊಳಗೆ ನೂಕಿದವರು ನೀವು
ಅಹಂ ಜ್ಞಾನವಂ ಮೈತುಂಬಿದವರು ನೀವಲ್ಲವೆ.

ಗಳಿಸಿದ ಹೆಸರಂ ಬಳಸಿ ಆತ್ಮದೊಳು
ಕಸವಂ ತುಂಬಿ ಅಮಾಯಕರ ನೋವಾಗಿ
ಕುಳಿದು ಕುಪ್ಪಳಿದವರು ನೀವು
ಅವರಿವರ ಅವಮಾನಗಳಂ ಕಿರೀಟ ಮಾಡಿ
ಮೇರೆದವರು ಭೂಮಿಯೊಳು ನೀವಲ್ಲವೆ.

ಸತ್ತ ಹೆಣವಂ ಕಾಡುವವರು ನೀವು
ನಿಮ್ಮ ನಂಬಿ ನಿಮ್ಮಿಂದೆ ಬಂದವರು ನಾವು
ನಮಗಿಲ್ಲವಂ ನಿಮ್ಮಗಳ ಸಹಾಯ ಹಸ್ತ
ಸ್ವಾರ್ಥ ತುಂಬಿರುವ ಜ್ಞಾನಿಗಳಂತೆ
ನಿಸ್ವಾರ್ಥವಂ ಬಿಟ್ಟ ಅಜ್ಞಾನಿಗಳು ನೀವಲ್ಲವೆ.

******

About The Author

Leave a Reply

You cannot copy content of this page