ಕಾವ್ಯಯಾನ
ಗಝಲ್ ಸುಜಾತಾ ರವೀಶ್ ಆಸೆಯ ತೇರನೇರು ಮರೆತು ಹಳತನು ಹೊಸತು ನಿರೀಕ್ಷೆಯಲಿ ಗೆಳತಿ ಭಾಷೆಯ ರಥದಲ್ಲಿ ಕಲೆತು ಬಾಳಪಥ ನಿರತ ಪರೀಕ್ಷೆಯಲ್ಲಿ ಗೆಳತಿ ಒಲವು ಬಂದಿರಲು ದಿನವು ಹೃದಯದಿ ನಿನ್ನದೇ ಆರಾಧನೆ ಏತಕೆ? ಬಲವು ತಂದಿರಲು ಮನದಿ ಉಪಾಸನೆ ಪಾವನ ಪ್ರತೀಕ್ಷೆಯಲಿ ಗೆಳತಿ ಸಂಗಾತಿ ಬರೆದಿರಲು ಮುನ್ನುಡಿ ಬದುಕಿನ ಪ್ರಣಯ ಕಾದಂಬರಿಯಲಿ ಸಂಪ್ರೀತಿ ಮೆರೆದಿರಲು ಕನ್ನಡಿ ಬಾಳಿನ ಬರಹ ಸಮೀಕ್ಷೆಯಲಿ ಗೆಳತಿ ನಿನ್ನಯ ಆಗಮನದಿ ಮನಸಿದು ಮುಗಿಲನು ನೋಡಿದ ನವಿಲಿನಂತೆ ನನ್ನ ಆಂತರ್ಯದ ಕನಸಿದು ನಲಿವಿನ ಮೋಡಿಯ […]
ಕಾವ್ಯಯಾನ
ಸಲುಗೆ ಮೀರಿ ಬಂದಾಕಿ ರೇಖಾ ವಿ.ಕಂಪ್ಲಿ ಸಲುಗೆ ಮೀರಿ ಬಂದಾಕಿ ಮಲ್ಲಿಗೆ ಮುಡಿದು ನನ್ನ ಮೆಲ್ಲನೆ ತಬ್ಬವಾಕಿ ಸಲುಗೆ ಮೀರಿ ಬಂದಾಕಿ ನನ್ನೊಲವ ಬಯಸಿದಾಕಿ…….. ಮನಸ್ಸೆಂಬ ಗುಡಿಯಲಿ ನನ್ನ ಪೂಜಿಸಿವಾಕಿ ಹಗಲಿರುಳು ನೋಡದೆ ದುಡಿಯುವಾಕಿ ಜೀವದ ಹಾದಿಬೆಳ್ಚುಕ್ಕಿ ಮೂಡಿಸಿದಾಕಿ ಸಲುಗೆ ಮೀರಿ ಬಂದಾಕಿ ನನ್ನೊಲವ ಬಯಸಿದಾಕಿ……… ತನ್ನವರ ಮರೆತು ನನ್ನ ನಂಬಿದಾಕಿ ನನ್ನ ಹುಚ್ಚಿಹಾಂಗ ಪ್ರೀತಿಸುವಾಕಿ ಗುಡಿ ಗೋಪುರಗಳ ಸುತ್ತಿ ನನಗಾಗಿ ಪ್ರಾಥಿ೯ಸುವಾಕಿ ಸಲುಗೆ ಮೀರಿ ಬಂದಾಕಿ ನನ್ನೊಲವ ಬಯಸಿದಾಕಿ……… ಹಾಗಾಗ ಗುದ್ದಾಡಿ ನನ್ನ ಕ್ಷಮಿಸುವಾಕಿ ನನಗಿಂತ […]
ಅನುವಾದ ಸಂಗಾತಿ
ಪಾತರಗಿತ್ತಿಯ ನಗು ಮೂಲ: ಕ್ಯಾಥರೀನ್ ಮ್ಯಾನ್ಸ್ ಫೀಲ್ಡ್ ಕನ್ನಡಕ್ಕೆ: ಕಮಲಾಕರ ಕಡವೆ ನಮ್ಮ ಗಂಜಿಯ ಬಟ್ಟಲಿನ ಮಧ್ಯಒಂದು ನೀಲಿ ಪಾತರಗಿತ್ತಿಯ ಚಿತ್ರ;ಪ್ರತಿ ಮುಂಜಾನೆ ಅದರ ತಲುಪಿದ ಮೊದಲಿಗರಾಗಲು ನಮ್ಮ ಪ್ರಯತ್ನ.ಅಜ್ಜಿ ಹೇಳುತ್ತಿದ್ದಳು: “ಪಾಪ, ಆ ಪಾತರಗಿತ್ತಿಯ ತಿಂದುಬಿಡಬೇಡಿ!”ಹಾಗೆಂದಾಗ ನಾವು ನಗುತ್ತಿದ್ದೆವು.ಅಜ್ಜಿ ಯಾವಾಗಲೂ ಹಾಗೆ ಹೇಳುತ್ತಿದ್ದಳು, ಪ್ರತಿಸಲ ನಮಗೆ ನಗು.ಅದು ಅಷ್ಟು ಅಪ್ಯಾಯಮಾನ ಜೋಕಾಗಿತ್ತು.ನನಗೆ ಖಾತ್ರಿ ಇತ್ತು, ಒಂದು ಮುಂಜಾನೆಆ ಪಾತರಗಿತ್ತಿ ವಿಶ್ವದ ಅತ್ಯಂತ ಹಗುರ ನಸು ನಗುವ ನಗುತ್ತ,ನಮ್ಮ ಬಟ್ಟಲಿನಿಂದ ಎದ್ದು ಹಾರಿ ಹೋಗುವುದೆಂದು,ಹೋಗಿ ಅಜ್ಜಿಯ ಮಡಿಲ […]
ಕಾವ್ಯಯಾನ
ಆರೋಪಿ!! ಚೈತ್ರ ಶಿವಯೋಗಿಮಠ ಆರೋಪಿ!! ಕಾಲನ ವಿರುದ್ಧ ಸಿಕ್ಕಾಪಟ್ಟೆ ಆರೋಪಗಳಿವೆ!! ಅವನು ಸರಿಯಿಲ್ಲ, ಕೆಟ್ಟು ಹೋಗಿದ್ದಾನೆ, ಮೋಸ ಮಾಡಿದ್ದಾನೆ… ಹೀಗೇ ಓಡುತ್ತಲೇ ಇದ್ದಾನೆ ಅವ, ಆರೋಪದ ಪಟ್ಟಿಯಿಂದ ತಪ್ಪಿಸಿಕೊಳ್ಳಲು! ಅರೆ, ಯಾರೋ ಮೊಕದ್ದಮೆ ಹೂಡೇ ಬಿಟ್ಟಿದ್ದಾರೆ… ಓಡುತ್ತಿದ್ದಾನೆ ಅಂತ!! ಇದೆಂತ ಸಂಕಷ್ಟ ಬಂದೊದಗಿತು!! ಮತ್ತಷ್ಟು ಗತಿ ಹೆಚ್ಚಿಸಿದ ಓಡುವವನ ಕಾಲ ಅಡಿಯಲ್ಲಿ ಸಿಕ್ಕು ನರಳುತ್ತಿದ್ದಾರೆ ಕೆಲರು ಮತ್ತೊಂದಷ್ಟು ಅವನ ತೆಕ್ಕೆಯಲ್ಲಿನ ಸಂಪತ್ತನ್ನ ಸಿಕ್ಕಷ್ಟು ಬಾಚಿಕೊಳ್ಳಲೆತ್ನಿಸಿದ್ದಾರೆ.. ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ!! ಆದರೆ ಆರೋಪಿಯನ್ನ ಮಾತ್ರ ಇನ್ನೂ ಬಂಧಿಸಲಾಗಿಲ್ಲ! […]
ಕಾವ್ಯಯಾನ
ಲಂಗರು ಹಾಕಿದ ಹಡಗು ವಿಜಯಶ್ರೀ ಹಾಲಾಡಿ ಕಾಡಿಗೆ ಕಪ್ಪಿನ ಕತ್ತಲಲ್ಲಿ ಅವಳು ಬಿರಬಿರನೆ ಸಂಚರಿಸುತ್ತಿದ್ದಳು ಮಸಿ ಇರುಳಿನ ಹಾಗೆ ಚೆಲ್ಲಿಕೊಂಡ ಕೂದಲ ಕಡಲು ತೂರಾಡುತ್ತಿದ್ದವು ಕಂಪಿಸಿದ ಎಲೆಎಲೆ ಮಣ್ಣ ಕಣ ಕಣ ಉದುರುತ್ತಿದ್ದ ಧೂಳುಮಳೆ ಅಲ್ಲೇ ಯಥಾಸ್ಥಿತಿಯಲ್ಲೇ ಗಾಬರಿಬಿದ್ದು ಸ್ತಬ್ಧವಾದವು ಕಾಲ್ಗೆಜ್ಜೆಯ ರಿಂಗಣಕ್ಕೆ ಕಪ್ಪೆ ಕೀಟ ರಾತ್ರಿ ಸಡಗರಿಸಿ ಪುಳಕವಾದವು .. ನದೀ ತೀರದಲ್ಲಿ ಮರ ಗಿಡ. ತಂಗಾಳಿಯೊಂದಿಗೆ ಘಲ್ ಘಲ್ ಸಪ್ಪಳ -ವಾಲಿಸಿದ ಗೂಬೆಯೊಂದು ಬಂಡೆಯಾಚೆ ಸರಿದು ಕ್ಷಣದಲ್ಲಿ ಮರೆಯಾಯಿತು ಅದರ ಮಿದು ಕಂದಮ್ಮ -ಗಳು […]
ಕಾವ್ಯಯಾನ
ಸತ್ತ ದೇಹದ ಉಸಿರು ಶ್ರೀದೇವಿ ಕೆರೆಮನೆ “ನೀನು ತುಂಬ ಗಟ್ಟಿ” ಒಂದಿಷ್ಟು ಜಗಳ, ವಾದವಿವಾದ ಮುಗಿಸಿದ ನಂತರ ಎರಡು ದಿನ ಅಖಂಡ ಮೌನವೃತವನ್ನಾಚರಿಸಿ ಇನ್ನೇನು ದಿನ ಮುಗಿದು ಎಲ್ಲರೂ ನಿದ್ದೆಗೆ ಜಾರಿ ನಾನು ಮಾತ್ರ ನಿದ್ರಾಹೀನಳಾಗಿ ಹೊರಳಾಡುವ ರಾತ್ರಿಯ ಮೊದಲ ಪ್ರಹರದ ಕೊನೆಯಲ್ಲಿ ಹೇಳಿದ ನಾನು ಮಾತನಾಡಲಿಲ್ಲ “ನನ್ನ ಬಿಟ್ಟು ನೀನು ಬದುಕಬಲ್ಲೆ ಬಿಡು” ಒಂದುವರೆ ನಿಮಿಷದ ಚಿಕ್ಕ ಮೌನದ ನಂತರ ಮತ್ತೊಮ್ಮೆ ತಣ್ಣನೆಯ ದನಿಯಲ್ಲಿ ಕೂರಲಗಿನಂತೆ ಉಸುರಿದ ನಾನು ಮಾತಾಡಲಿಲ್ಲ ಆಗಲೂ ಯಾವ ಮಾತಿಂದಲೂ ಏನೂ […]
ಕಾವ್ಯಯಾನ
ಕಡಲ ದಂಡೆಯಲ್ಲಿ
ಕಂಗಳ ಕಟ್ಟೆ ಹೊಡೆದು
ಕಾವ್ಯಯಾನ
ಆಕಳಿಸುವ ನಟ್ಟಿರುಳು ಬಿದಲೋಟಿ ರಂಗನಾಥ್ ನಟ್ಟಿರುಳ ಕತ್ತಲೆಯಲಿ ಎಚ್ಚರವಾಗಿ ಕೂತೆ ಕರುಳು ಕಲೆತ ಭಾವ ಉಸಿರಾಡುತ್ತಿತ್ತು ಸಾವಿರ ಮೈಲಿಯ ನಡೆತ ಕಣ್ಣಲ್ಲೇ ಇತ್ತು ನಟ್ಟಿರುಳ ಕತ್ತಲೆಯಲಿ ಎಚ್ಚರವಾಗಿ ಕೂತೆ ಕರುಳು ಕಲೆತ ಭಾವ ಉಸಿರಾಡುತ್ತಿತ್ತು ಸಾವಿರ ಮೈಲಿಯ ನಡೆತ ಕಣ್ಣಲ್ಲೇ ಇತ್ತು ಬುಡ್ಡಿ ಹಿಡಿದ ಕೈಯಲ್ಲಿ ಆತ್ಮ ಚರಿತ್ರೆಯ ಮೊದಲ ಪುಟ ಮಬ್ಬು ಬೆಳಕಿನಲ್ಲಿ ನವಿಲೊಂದರ ನಾಟ್ಯ ಅತ್ತರೆ ಕಣ್ಣೀರಲ್ಲಿ ತೊಳೆದು ಹೋಗಬಹುದೆಂದು ಬಿಡುಗಣ್ಣನು ಮುಚ್ಚಿದೆ ಚಲ್ಲಿಸುತ್ತಲೇ ಇರುವ ಚಿತ್ರದ ಹೆಜ್ಜೆ ಸಪ್ಪಳ ಕಿವಿಗಳನ್ನು ತುಂಬುತ್ತಲೇ ಇತ್ತು. […]
ಕಾವ್ಯಯಾನ
ವಿರಹಿಣಿ ವಿಜಯಶ್ರೀ ಹಾಲಾಡಿ (ಸುಮ್ನೇ ಹೀಗೊಂದು ಝಲಕ್) ಯಾರೋ ಕವಿ ಬರೆದವಿರಹಿಣಿಯ ಚಿತ್ರಣಕಾದು ಕಾದು ಕಾಲುಬೆರಳುಸಪೂರ ಆಗಿ ಕಾಲುಂಗುರಕಳೆದುಹೋದ ಕತೆ .. ಅಬ್ಬಎಷ್ಟೂಂತ ಕಾಯುವುದುಮೊನ್ನೆಯಿಂದ ಇದ್ದೇನೆಇಲ್ಲೇ ಆನ್ ಲೈನಲ್ಲೇ….ಮಧ್ಯರಾತ್ರಿಯ ಕೊನೆಗೆಐದು ನಿಮಿಷತೂಕಡಿಸಿದಾಗಲೂ ಸುಪ್ತಮನಸ್ಸಿನ ಎಚ್ಚರಹೃದಯ ಹಿಂಡಿದಂತೆನರನರಗಳೆಲ್ಲ ಹೊಸೆದಂತೆರಿಂಗ್ ಟೋನೇ ಕರೆದಂತೆ … ಎಲ್ಲಿ ಹೋದ ಇವನುಮರೆತನೇ ಮೊಬೈಲ್-ಕಳಕೊಂಡನೇ -ನೆಟ್ವರ್ಕ್ಇಲ್ಲದ ಕಾಡುಗಳಲ್ಲಿಅಲೆಯುತ್ತಿರುವನೇಈ ನನ್ನವನು …ಅಥವ ಇನ್ನವಳ್ಯಾರೋಶ್! ಹುಚ್ಚಿ ಹಾಗೇನಿರಲ್ಲ. ! ‘ಇವಳೇನು ಇಲ್ಲೇಬೀಡುಬಿಟ್ಟಿದ್ದಾಳೆಂದು’ಗೆಳೆಯ ಗೆಳತಿಯರೆಲ್ಲHii. ಎಂದರುಅಣಕಿಸಿ ನಕ್ಕರುಕಣ್ಣುಹೊಡೆದರುಛೆನನ್ನ ವಿರಹವನದಿಯಂತೆ ಬೆಳೆಸುತ್ತಲೇಆಫ್ ಲೈನಾದರು …. ಸಿಟ್ಟಿಗೆ ಮೊಬೈಲ್ ಕುಕ್ಕಿಜೋಡಿಸಿಟ್ಟ ಪುಸ್ತಕಬಟ್ಟೆಗಳನೆಲ್ಲ ನೆಲಕ್ಕೆಅಪ್ಪಳಿಸಿದ್ದಾಯಿತುಸಂದೇಶಗಳ […]
ಕಾವ್ಯಯಾನ
ಮನದಿಂ ನಗು ರೇಖಾ ವಿ.ಕಂಪ್ಲಿ ನಗುವ ನಗು ಮನದಿಂ ಮಗುವ ನಗುವ ನಗು ನಗುವ, ನಗಲೆಂದು ನಗದಿರು ನಗುವ ನಕ್ಕರೆ ಸಕ್ಕರೆ ಗಿಂತ ಸಿಹಿಯಾದ ನಗುವ ನಗು ಮೊಗದ ಕಳೆಗಾಗಿ ನಗುವ ನಗದಿರು ಮನದ ಕೊಳೆಯನು ತೊರೆದು ನಗು ಬುದ್ಧಿ ಶುದ್ಧಿಯೊಳು ನಗುವ ನಗು ಕಿರು ನಗೆಯು ನೊರೆ ಹಾಲಿನ ನಗುವ ನಗು ಝರಿ ದಾರೆಯ ಜಳಪಿಸುವ ನಗುವ ನಗು ನಗುವ ನಗು ಮನದಿಂ ನಿನ್ನ ಮನದ ನಗೆಯ ನಗು ಎದಿರಿರುವವನ ಎದೆ ನಗುವಂತೆ ನಗು ಅಪಹಾಸ್ಯ […]