ಕಾವ್ಯಯಾನ

ಆಕಳಿಸುವ ನಟ್ಟಿರುಳು

ಬಿದಲೋಟಿ ರಂಗನಾಥ್

ನಟ್ಟಿರುಳ ಕತ್ತಲೆಯಲಿ
ಎಚ್ಚರವಾಗಿ ಕೂತೆ
ಕರುಳು ಕಲೆತ ಭಾವ ಉಸಿರಾಡುತ್ತಿತ್ತು
ಸಾವಿರ ಮೈಲಿಯ ನಡೆತ ಕಣ್ಣಲ್ಲೇ ಇತ್ತು

ನಟ್ಟಿರುಳ ಕತ್ತಲೆಯಲಿ
ಎಚ್ಚರವಾಗಿ ಕೂತೆ
ಕರುಳು ಕಲೆತ ಭಾವ ಉಸಿರಾಡುತ್ತಿತ್ತು
ಸಾವಿರ ಮೈಲಿಯ ನಡೆತ ಕಣ್ಣಲ್ಲೇ ಇತ್ತು

ಬುಡ್ಡಿ ಹಿಡಿದ ಕೈಯಲ್ಲಿ
ಆತ್ಮ ಚರಿತ್ರೆಯ ಮೊದಲ ಪುಟ
ಮಬ್ಬು ಬೆಳಕಿನಲ್ಲಿ ನವಿಲೊಂದರ ನಾಟ್ಯ
ಅತ್ತರೆ ಕಣ್ಣೀರಲ್ಲಿ ತೊಳೆದು ಹೋಗಬಹುದೆಂದು
ಬಿಡುಗಣ್ಣನು ಮುಚ್ಚಿದೆ
ಚಲ್ಲಿಸುತ್ತಲೇ ಇರುವ ಚಿತ್ರದ ಹೆಜ್ಜೆ ಸಪ್ಪಳ
ಕಿವಿಗಳನ್ನು ತುಂಬುತ್ತಲೇ ಇತ್ತು.

ತೆರೆದ ಕಣ್ಣಲ್ಲಿ ಅಳಿಸಿಹೋಗದ ನೂರಾರು ಚಿತ್ರಗಳು
ನಡೆಯುತ್ತಿದ್ದವು ಶಶಿಕರನ ಎದೆಯ ಮೇಲೆ.
ನೇರಳೇ ಮರವು ಕರೆಯುವ ಕೈ ಸನ್ನೆ
ಸೋತ ಕಣ್ಣುಗಳು ಕೂತ ನಟ್ಟಿರುಳು
ಯಾವ ಲೋಕದ ಮಾಯೆಯೋ
ಬೆರಗು ಕಾಲುಚಾಚಿಕೊಂಡು ಮೈನೆರೆಯುತ್ತಿದೆ

ನೋಡು ನೋಡುತ್ತಿದ್ದಂತೆ
ಕೋಲುಕುಟ್ಟುತ್ತಾ ನಡೆದು ಬರುವ ವಿಸ್ಮಯ ಚಿತ್ರ
ಹೇಗಲ ಮೇಲೊಂದು ಕೆಂಪುಗಿಣಿ ವಸ್ತ್ರ
ಮೈ ತುಂಬಾ ರೋಮಗಳು
ಹೋಗುತ್ತಲೇ ಇದ್ದ ಕಣ್ಣೊಳಗಿನ ಹೆದ್ದಾರಿಯ ಮೇಲೆ
ಕಣ್ಣ ರೆಪ್ಪೆ ಮುಚ್ಚಿ ಧ್ಯಾನಿಸಿದೆ
ಜಂಬೂವೃಕ್ಷದ ಮುಂದೆ
ಅಜ್ಜನ ತುಟಿಬಿಚ್ಚದ ನಗು
ಭೂಮಿಯಿಲ್ಲದ ಜಲಜಂಬೂದ್ವಿಪ ಎದೆ ಚಲ್ಲಿ ಮಲಗಿದೆ..
ನಾನೂ ಮಲಗಿದೆ
ಕರುಳ ದ್ವಿಪದ ಎದೆಯ ಮೇಲೆ ಮಗುವಿನಂತೆ.!
ಕಣ್ಣಲ್ಲಿ ಕಣ್ಣಾದವರನ್ನು ಬೆಸೆಯಲು.

********

Leave a Reply

Back To Top