ಗಝಲ್
ಸುಜಾತಾ ರವೀಶ್
ಆಸೆಯ ತೇರನೇರು ಮರೆತು ಹಳತನು ಹೊಸತು ನಿರೀಕ್ಷೆಯಲಿ ಗೆಳತಿ
ಭಾಷೆಯ ರಥದಲ್ಲಿ ಕಲೆತು ಬಾಳಪಥ ನಿರತ ಪರೀಕ್ಷೆಯಲ್ಲಿ ಗೆಳತಿ
ಒಲವು ಬಂದಿರಲು ದಿನವು ಹೃದಯದಿ ನಿನ್ನದೇ ಆರಾಧನೆ ಏತಕೆ?
ಬಲವು ತಂದಿರಲು ಮನದಿ ಉಪಾಸನೆ ಪಾವನ ಪ್ರತೀಕ್ಷೆಯಲಿ ಗೆಳತಿ
ಸಂಗಾತಿ ಬರೆದಿರಲು ಮುನ್ನುಡಿ ಬದುಕಿನ ಪ್ರಣಯ ಕಾದಂಬರಿಯಲಿ
ಸಂಪ್ರೀತಿ ಮೆರೆದಿರಲು ಕನ್ನಡಿ ಬಾಳಿನ ಬರಹ ಸಮೀಕ್ಷೆಯಲಿ ಗೆಳತಿ
ನಿನ್ನಯ ಆಗಮನದಿ ಮನಸಿದು ಮುಗಿಲನು ನೋಡಿದ ನವಿಲಿನಂತೆ
ನನ್ನ ಆಂತರ್ಯದ ಕನಸಿದು ನಲಿವಿನ ಮೋಡಿಯ ಅಪೇಕ್ಷೆಯಲಿ ಗೆಳತಿ
ಬೆಸುಗೆ ತಂತಿಗಳು ಜೋಡಿಸಿ ಭರವಸೆ ನೇದಿಹ ಅನುಬಂಧ ವಿದು
ಒಸಗೆ ವಿನಂತಿಗಳು ಸುಜಿಯ ವಿಶ್ವಾಸ ಕೋರುವ ಅಕಾಂಕ್ಷೆಯಲಿ ಗೆಳತಿ
*******