ಸಲುಗೆ ಮೀರಿ ಬಂದಾಕಿ
ರೇಖಾ ವಿ.ಕಂಪ್ಲಿ

ಸಲುಗೆ ಮೀರಿ ಬಂದಾಕಿ
ಮಲ್ಲಿಗೆ ಮುಡಿದು ನನ್ನ ಮೆಲ್ಲನೆ ತಬ್ಬವಾಕಿ
ಸಲುಗೆ ಮೀರಿ ಬಂದಾಕಿ
ನನ್ನೊಲವ ಬಯಸಿದಾಕಿ……..
ಮನಸ್ಸೆಂಬ ಗುಡಿಯಲಿ ನನ್ನ ಪೂಜಿಸಿವಾಕಿ
ಹಗಲಿರುಳು ನೋಡದೆ ದುಡಿಯುವಾಕಿ
ಜೀವದ ಹಾದಿಬೆಳ್ಚುಕ್ಕಿ ಮೂಡಿಸಿದಾಕಿ
ಸಲುಗೆ ಮೀರಿ ಬಂದಾಕಿ
ನನ್ನೊಲವ ಬಯಸಿದಾಕಿ………
ತನ್ನವರ ಮರೆತು ನನ್ನ ನಂಬಿದಾಕಿ
ನನ್ನ ಹುಚ್ಚಿಹಾಂಗ ಪ್ರೀತಿಸುವಾಕಿ
ಗುಡಿ ಗೋಪುರಗಳ ಸುತ್ತಿ ನನಗಾಗಿ ಪ್ರಾಥಿ೯ಸುವಾಕಿ
ಸಲುಗೆ ಮೀರಿ ಬಂದಾಕಿ
ನನ್ನೊಲವ ಬಯಸಿದಾಕಿ………
ಹಾಗಾಗ ಗುದ್ದಾಡಿ ನನ್ನ ಕ್ಷಮಿಸುವಾಕಿ
ನನಗಿಂತ ಹೆಚ್ಚಾಗಿ ಚಿಂತಿಸುವಾಕಿ
ಹಾಗಾಗ ಬಿಕ್ಕಿಬಿಕ್ಕಿ ಅಳುವಾಕಿ
ಸಲುಗೆ ಮೀರಿ ಬಂದಾಕಿ
ನನ್ನೊಲವ ಬಯಸಿದಾಕಿ……….
***************************
Super mam