ಕಾವ್ಯಯಾನ

ಮನದಿಂ ನಗು

ರೇಖಾ ವಿ.ಕಂಪ್ಲಿ

ನಗುವ ನಗು ಮನದಿಂ
ಮಗುವ ನಗುವ ನಗು
ನಗುವ, ನಗಲೆಂದು ನಗದಿರು
ನಗುವ ನಕ್ಕರೆ ಸಕ್ಕರೆ ಗಿಂತ ಸಿಹಿಯಾದ
ನಗುವ ನಗು
ಮೊಗದ ಕಳೆಗಾಗಿ ನಗುವ ನಗದಿರು
ಮನದ ಕೊಳೆಯನು ತೊರೆದು ನಗು
ಬುದ್ಧಿ ಶುದ್ಧಿಯೊಳು ನಗುವ ನಗು
ಕಿರು ನಗೆಯು ನೊರೆ ಹಾಲಿನ ನಗುವ ನಗು
ಝರಿ ದಾರೆಯ ಜಳಪಿಸುವ ನಗುವ ನಗು
ನಗುವ ನಗು ಮನದಿಂ
ನಿನ್ನ ಮನದ ನಗೆಯ ನಗು
ಎದಿರಿರುವವನ ಎದೆ ನಗುವಂತೆ ನಗು
ಅಪಹಾಸ್ಯ ಮಾಡದೇ ಬರಿ ವಿನೋದಕಾಗಿ ನಗುವ ನಗು
ಪರ ಮನ ಅರಿತು ನಗುವ ನಗು
ನಗುವ ನಗು ಮನದಿಂ

***********

Leave a Reply

Back To Top