ಅನುವಾದ ಸಂಗಾತಿ

ಪಾತರಗಿತ್ತಿಯ ನಗು

ಮೂಲ: ಕ್ಯಾಥರೀನ್ ಮ್ಯಾನ್ಸ್ ಫೀಲ್ಡ್

Image may contain: 1 person, child

ಕನ್ನಡಕ್ಕೆ: ಕಮಲಾಕರ ಕಡವೆ

ನಮ್ಮ ಗಂಜಿಯ ಬಟ್ಟಲಿನ ಮಧ್ಯ
ಒಂದು ನೀಲಿ ಪಾತರಗಿತ್ತಿಯ ಚಿತ್ರ;
ಪ್ರತಿ ಮುಂಜಾನೆ ಅದರ ತಲುಪಿದ ಮೊದಲಿಗರಾಗಲು ನಮ್ಮ ಪ್ರಯತ್ನ.
ಅಜ್ಜಿ ಹೇಳುತ್ತಿದ್ದಳು: “ಪಾಪ, ಆ ಪಾತರಗಿತ್ತಿಯ ತಿಂದುಬಿಡಬೇಡಿ!”
ಹಾಗೆಂದಾಗ ನಾವು ನಗುತ್ತಿದ್ದೆವು.
ಅಜ್ಜಿ ಯಾವಾಗಲೂ ಹಾಗೆ ಹೇಳುತ್ತಿದ್ದಳು, ಪ್ರತಿಸಲ ನಮಗೆ ನಗು.
ಅದು ಅಷ್ಟು ಅಪ್ಯಾಯಮಾನ ಜೋಕಾಗಿತ್ತು.
ನನಗೆ ಖಾತ್ರಿ ಇತ್ತು, ಒಂದು ಮುಂಜಾನೆ
ಆ ಪಾತರಗಿತ್ತಿ ವಿಶ್ವದ ಅತ್ಯಂತ ಹಗುರ ನಸು ನಗುವ ನಗುತ್ತ,
ನಮ್ಮ ಬಟ್ಟಲಿನಿಂದ ಎದ್ದು ಹಾರಿ ಹೋಗುವುದೆಂದು,
ಹೋಗಿ ಅಜ್ಜಿಯ ಮಡಿಲ ಮೇಲೆ ಕೂರುವದೆಂದು.

*******

“Butterfly Laughter”


In the middle of our porridge plates
There was a blue butterfly painted
And each morning we tried who should reach the
butterfly first.
Then the Grandmother said: “Do not eat the poor
butterfly.”
That made us laugh.
Always she said it and always it started us laughing.
It seemed such a sweet little joke.
I was certain that one fine morning
The butterfly would fly out of our plates,
Laughing the teeniest laugh in the world,
And perch on the Grandmother’s lap.

Leave a Reply

Back To Top