ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಪ್ರತಿ ಆತ್ಮಗಳ ಮಹಾತ್ಮ
ನೊಂದವರ ಅಭಯ ಹಸ್ತ
ದೇವನಾಗಿ ಕರಗದಿರು
ಕರುಣೆಯ ತತ್ವಮೂರ್ತಿ ನೀನು

ಗೂಡ್ಸೆಗಳಿಗೇನು ಕಮ್ಮಿ ಇಲ್ಲ
ದ್ವೇಷಿಸುವರು ದ್ವೇಷಿಸಲಿ
ಟೀಕಿಸುವರು ಟೀಕಿಸಲಿ
ಅಹಿಂಸೆಯ ಅಸ್ತ್ರ ಹಿಡಿದು ಮತ್ತೆ ಬಾ

ಹಿಂಸೆ ಅತ್ಯಾಚಾರ ಯೋಧರ ಜೀವಂತ ದಹನ
ಮುಗಿಲು ಮುಟ್ಟಿದೆ ಆಕ್ರಂಧನ ಎಲ್ಲೆಡೆ ಚಿತ್ಕಾರ
ಸಿಡಿಲು ಮಿಂಚಾಗಿ ಸಂಚರಿಸು
ನಮ್ಮಯ ಧಮನಿ ಧಮನಿಗಳಲ್ಲಿ

ನೋವನುಂಡು ತಲ್ಲಣಿಸಿವೆ ಮನಗಳು
ಹಗಲಿನಲ್ಲಿಯೇ  ನಡೆದಾಡಲು ಕಂಪಿಸಿವೆ
ನಿನ್ನ ಕೋಲಿನ ಗಸ್ತು ಬೇಕಿದೆ

ಬಂದೊಮ್ಮೆ ನೋಡು ಇಂದಿನ ಭಾರತ
ಮನೆ ಮನೆಗಳಲ್ಲಿ ನೆಲೆಸಿ
ಶಾಂತಿಯ ಹರಸು ಗಾಂಧಿ……
ಬಾ ಮತ್ತೊಮ್ಮೆ ಗಾಂಧಿ…..
ಬಾ ಮತ್ತೊಮ್ಮೆ ಗಾಂಧಿ…..


About The Author

Leave a Reply

You cannot copy content of this page

Scroll to Top