ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್


ನಿನ್ನೆದೆಯ ಅಂಗಳದಿ ಹಿಡಿ ಹೂಗಳನು ನಾನು *ಸುರಿದೆ*
ಕಟುಕ ನೀನು ನನ್ನ ಮನದಲಿ ಮುಳ್ಳುಗಳನು *ಮುರಿದೆ*
ಭರವಸೆಯ ಹಸ್ತವೆಂದು ನಂಬಿ ಕೈ ನೀಡಿದೆ ನಾನಂದು
ಜೇನುಲಿಯಲಿ ವಂಚನೆಯ ವಿಷವನು *ಕಾರಿದೆ*
ಬಣ್ಣದ ಕನಸುಗಳಿಗೆ ನಗುತ ರಂಗು ತುಂಬುತ ಬಂದೆ
ಪ್ರೀತಿಯ ಚೂರಿಯಲಿ ಹೃದಯವನೇಕೆ *ಇರಿದೆ*
ತಂಗಾಳಿಯೇ ಬಿರುಗಾಳಿಯಾಗಿದೆ ಬದುಕಲಿ ಇಂದು
ಮರುಳ ಹುಚ್ಚು ಭಾವಗಳನು ನಾನೇ *ಜರಿದೆ*
ಕಂಗಳಲಿ ಮೂಡಿದ ಕಾಮನಬಿಲ್ಲು ಮಾಸುತಿಹುದು
ಬೇಗಂಳ ಒಲವು ಕಾಣದ ವಿಧಿಯ *ದೂರಿದೆ*
ಹಮೀದಾಬೇಗಂ ದೇಸಾಯಿ



