ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಅರಕಲು ಮುರುಕಲು ಗುಡಿಸಲೊಳಗೆ
ಸಣ್ಣ ಇಣುಕೋ ಹಣತೆ ಬೆಳಕು
ನಾಲ್ಕು ಗೋಡೆಯ ಮಧ್ಯೆಯಲಿ
ಹಿರಿದಾದ ಜೀವಗಳೆರಡರ ಬದುಕು

ಜನ್ಮ ಕೊಟ್ಟು ಹೊತ್ತು ಮುದ್ದಾಡಿ
ಕಷ್ಟಪಟ್ಟು ದುಡಿಮೆ ಮಾಡಿ
ಸಾಕಿದ ಮಕ್ಕಳು ದೂರ ಪಟ್ಟಣ ಸೇರಿದರು
ಹುಟ್ಟಿದ ಮನೆಗೆ ಸುಳಿಯದಾದರು

ದೊಡ್ಡ ದೊಡ್ಡ ಮನೆ ಮಠ ಕಟ್ಟಿದರು
ಸಾಕಿದವರನ್ನು ಮೂಲೆಗಟ್ಟಿದರು
ಸುಖದ ಸುಪ್ಪತ್ತಿಗೆಯನ್ನು ಹುಡುಕಿದರು
ಈ ಜೀವಗಳನ್ನು ನಿತ್ಯ ಕೊರಗಿಸಿದರು

ಹೇ ಮನುಜ ಸಾಕಿದವರಿಗೆ ಬೆಲೆ ಕೊಡದೆ
ನೀ ಸಂತಸಪಟ್ಟರೆ ಇಂದು
 ಅವರು ಅಂದು  ನೀ ಹುಟ್ಟಿದಾಗ  ಸಂಭ್ರಮಕ್ಕೆ ಅರ್ಥವೆಲ್ಲಿದೆ
ಅವರ ಜೊತೆ ಸಂಭ್ರಮಿಸು ಜೀವನ ಪಾವನ

ಅವರ ಕೊನೆಯ ದಿನದವರೆಗೆ
ಆರೋಗ್ಯ ವಿಚಾರಿಸಿ ಸುಖ ಸಂತಸ ಹಂಚಿದರೆ
ಪ್ರೀತಿ ಮಮತೆ ಈ ಜೀವಕ್ಕೆ ತುಂಬಿದರೆ
ಅವರ ಬಾಳು ನಿಮ್ಮ ಬಾಳು ಸಾರ್ಥಕ


About The Author

Leave a Reply

You cannot copy content of this page

Scroll to Top