ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಳು ಮನವೆ ತಡೆದುಕೊಳ್ಳಬೇಡ
ಈ ಕಣ್ಣೀರು ದೌರ್ಬಲ್ಯ ಅಲ್ಲವೊ
ಅದಾರ ಮೇಲಿನ ಪ್ರೀತಿಯ ಸಾಕ್ಷಿಗೊ
ಮುನಿಸಿಗೊ ನಿನ್ನ ಮನಸ ಹಗುರಾಗಲು
ಅತ್ತೆ ಬಿಡು ಅಳು ಬಂದರೆ.

ಗಂಟಲು ಕಟ್ಟಿ ಮಾತು ಬಾರದಾದಾಗ
ಕಣ್ಣುಗಳೇ ಮಾತಾಡಲಿ ನಿನ್ನೊಡನೆ
ಒಂದೊಂದು ಹನಿಯೂ ಹೇಳಿವೆ
“ನೆನಪುಗಳೆ ನೆನಪಾಗ್ತೀರಿ” ಅಂತ.  

ಜನ ಏನಂದಾರೆಂದು ನೋಡಬೇಡ
ಗಂಡಸರು ಅಳಬಾರದು ಅನ್ನೋದೆಲ್ಲ ಸುಳ್ಳು
ಅವಳು ಹೋದ ನೋವಿಗೆ ಅಳದಿದ್ರೆ  
ಆ ಎದೆ ಕಲ್ಲು ಆಗಿರಬೇಕು ಎನ್ನುವರಲ್ಲ.

ಅಳು, ಆದ್ರೆ ಆ ಹನಿಗಳಲ್ಲಿ ಮುಳುಗಬೇಡ
ಅದೇ ಹನಿಗಳಿಂದಲೆ ಎದ್ದು ನಿಲ್ಲು
ನಿನ್ನ ಕಣ್ಣೀರು ಒರೆಸೋ ಕೈ ಇಲ್ಲ
ಎಂದು ಕೊರಗಬೇಡ ಆಕಾಶದಿಂದ
ಅವಳು ನೋಡುವಳಂತೆ.

ಅಳು ನೀನು ಮನಸಾರೆ ಅಳು ಮನವೆ  
ಅತ್ತ ಮೇಲೆ ಮನಸ್ಸು ಹಗುರ ಆಗವುದಂತೆ
ಮತ್ತೆ ಬದುಕೋಕೆ ಶಕ್ತಿ ಬರುವುದಂತೆ
ಅವಳಿಗಿಷ್ಟ ಆಗೋ ಹಾಗೆ ನಗೋಕೆ
ದಾರಿ ಸಿಗುವುದಂತೆ.  

ಅತ್ತೆಯಾ ಅತ್ತು ಬಿಡು ಅಳು ಬಂದರೆಅತ್ತು ಹಗುರ ಆಗು ನಾನಿದ್ದೀನಿ ನಿನ್ನ ಜೊತೆಗೆ.

ಇಂತಿ ನಿನ್ನ  ಮನ.


About The Author

1 thought on “ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ “ಅಳು ಬಂದರೆ ಅತ್ತು ಬಿಡು””

Leave a Reply

You cannot copy content of this page

Scroll to Top