ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸದಾ ನಿನದೇ ಧ್ಯಾನ..
ಎಷ್ಟೆಂದು ಬೇಡಲಿ ನಿನ್ನ ದಾನ..! ಬೇಡಿದಷ್ಟು ನೀಡುತಲೇ ಕಾಯಲು ಹವಣಿಸುವುದೇ ನಿನ್ನ ಸದ್ಗುಣ. ಎಷ್ಟೆಂದು ಪಾಡಿ ಪೊಗಳಲಿ ನಿನ್ನ ಗುಣಗಾನ..

ಗಾನಯಾನದಲಿ ತೇಲುವಲಿ ಯಾರಿಲ್ಲವು ನಿನ್ನ ಸಮಾನ..
ಅಗುಳಗುಳ ನುಂಗಲು ಬೇಕು ದಿನದಿನವು ನಿನ್ನ ಅನುಸಂಧಾನ. ಅಣುವಣುವಿಗೂ ಚಣಚಣವು ದಿನದಿನವು ಜಲಜಭವದ ಅವನಿಯೊಳು ಮುಳುಗಿರಲು ಕರಪಿಡಿದೆತ್ತುವೆ ಸಾವಧಾನ..

ನೀನಿರದೇ ಇರಲು ಸಾಧನೆಗೆ ಎಲ್ಲೆಡೆಯು ಮಾನ…ಹರಣ..! ಕುಕೃತ್ಯ ಕುಟಿಲಗಳ ನಿವಾರಿಸಲು ಪ್ರೇರಣ..
ನವನವೀನ ನಿತ್ಯ ನೂತನಕೆ ಬೇಕು ಸದಾ ನಿನ್ನ ಕರುಣ..!

ನಿನ್ನ ಮರೆತು ನಡೆವ ಪ್ರತಿ ಚಣವು ಪ್ರತಿ ಕಣವು ಜೀವನ್ಮರಣ.. ಬದುಕೇ ಅಶಾಂತಿಯ ರಣಾಂಗಣ…!!
ನಿನ್ನ ಮರೆತು ನಡೆಯದಂತೆ
ಬೇಡುವಗೆ ಮಾಣಿಸು ಸದಾ ನಿನ್ನ ಸ್ಮರಣ..

ಸುಂದರ ಸುಮಧುರ ಶಾಂತಿ ನೆಮ್ಮದಿ ಪ್ರೀತಿ ವಾತ್ಸಲ್ಯಗಳ ಬಾಂಧವ್ಯದ ಬದುಕುಗಳ ಸಂಬಾಳಿಸಿ ಉಳಿಸಿ ಬೆಳೆಸಲು ನೀನೇ ಸಾದನ..
ದಿನದಿನವೂ ಜೊತೆ ಸಾಗಿ ಹರಸಿ ಹರಿಸು  ನಿನ್ನ ಕರುಣ.. ಕಣಕಣದಲಿ ನೆಲೆಯಾಗಲಿ ಶಾಂತಿಯ ಸದನ..!


About The Author

Leave a Reply

You cannot copy content of this page

Scroll to Top