Month: November 2021

ನೇಗಿಲು ಹೆಗಲು ಬದಲಾಗಿ

ಕಾವ್ಯ ಸಂಗಾತಿ ನೇಗಿಲು ಹೆಗಲು ಬದಲಾಗಿ ಮೋಹನ.ವಿ.ಹೊಸೂರ ಯಾರ ಬೀಜವೊಇನ್ನಾರದೋ ಗರ್ಭದಲಿಬಿತ್ತಿದ ಪರಿಯಲಿ ಸೇರಿಎಲ್ಲೋ ಇದ್ದವರು ನಾವುಮೊಳೆತು ಹೂ ಮಗುವಾಗರಳಿ ಹುಟ್ಟಿಸಿದ ಕಾರಣಕೆತಂದೆ ತಾಯಿ ಎನಿಸಿದವರಮಗುವಾಗಿ ಬೆಳೆದು ಆರೈಕೆಯಲಿಅರ್ಥ ಪೂರ್ಣ ಬದುಕು ಎಲ್ಲ ಸೇರಿನಮ್ಮದು ಒಂದೇ ಸಂಸಾರವಾಗಿ ಎಲ್ಲವೂ ನಾನುನನ್ನದೆಂಬ ಅಪ್ಯಾಯಮಾನದಲಿಬೆಳೆದು ನಲಿ ನಲಿದುಬಲಿತು ಮತ್ತೆ ಬೀಜವಾಗಿಇನ್ನಾರದೋ ಗರ್ಭದಲಿ ಮೊಳೆತುಇನ್ನೊಂದು ಜೀವಕೆ ಜೀವ ತುಂಬಿಧಾರೆಯೆರೆದು ಹೆಗಲ ನೊಗನೇಗಿಲು ಹೆಗಲು ಬದಲಾಗಿ ಬ್ಯಾಟನ್ ಒಪ್ಪಿಸಿ ರಿಲೇ ಆಟದ ರೀತಿನಾನು ನನ್ನದೆಂಬೆಲ್ಲವನೂ ಕೊಟ್ಟು ಬಿಟ್ಟುಕೋ ಕೋ ಆಟದಲಿ ಮುಟ್ಟಿ ಓಡುವ […]

ಅಂಕಣ ಸಂಗಾತಿ ಗಜಲ್ ಲೋಕ ಸಾಲಿಯವರ ಗಜಲ್ ಉದ್ಯಾನವನ… ನಮಸ್ಕಾರ… ಎಂದಿನಂತೆ ಇಂದೂ ಸಹ ನಾಡಿನ ಖ್ಯಾತ ಗಜಲ್ ಕಾರರೊಬ್ಬರ ಪರಿಚಯದೊಂದಿಗೆ ತಮ್ಮ ಮುಂದೆ ಬಂದಿದ್ದೇನೆ. ಓದಲು ತಾವು ಕಾತುರರಾಗಿದ್ದೀರೆಂದು ಬಲ್ಲೆ. ಸಮಯವನ್ನು ಹಾಳು ಮಾಡದೆ, ನೇರವಾಗಿ ವಿಷಯಕ್ಕೆ ಬರುತ್ತೇನೆ. “ಪ್ರೇಮಿಯ ಕಾರಣ ಇತರ ಎಲ್ಲ ಕಾರಣಗಳಿಂದ ಪ್ರತ್ಯೇಕವಾಗಿದೆ ಪ್ರೀತಿಯು ದೇವರ ರಹಸ್ಯಗಳ ಖಗೋಳ“                                    –ರೂಮಿ              ಉರ್ದು ತುಂಬಾ ಕಾವ್ಯಾತ್ಮಕ ಭಾವದ ಭಾಷೆ.‌ ‘ಕಾವ್ಯಾತ್ಮಕ ಭಾಷೆ’ ಎಂದರೆ ಆ ಭಾಷೆಯೂ ಶಬ್ಧಗಳಿಗಿರುವ ಅರ್ಥಬಾಹುಳ್ಯ ಎಂದರ್ಥ. […]

ಅಂಕಣ ಸಂಗಾತಿ ತೊರೆಯ ಹರಿವು ಭಾವಶುದ್ಧ ಇರದವರಲ್ಲಿ….             ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು. ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು. ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು. ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು. ಭಾವ ಶುದ್ಭವಿಲ್ಲದವರಲ್ಲಿ ಧೂಪನೊಲ್ಲೆಯಯ್ಯಾ ನೀನು. ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು. ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾನೀನು. ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು. ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ     – ಅಕ್ಕ ಮಹಾದೇವಿ.   ತನು ಮನ ಕರಗದವರು, ಹದುಳಿಗರಲ್ಲದವರು, ಅರಿವು ಕಣ್ತೆರೆಯದವರು, ಭಾವಶುದ್ಧ ಇಲ್ಲದವರು, ಪರಿಣಾಮಿಗಳಲ್ಲದವರು, […]

ತಮಸೋಮಾ ಜ್ಯೋತಿರ್ಗಮಯ

ತಮಸೋಮಾ ಜ್ಯೋತಿರ್ಗಮಯ ಕತ್ತಲಿನ ಬಗೆಗೆ ಸೋಜಿಗವೂ ಬೆಳಕಿನ ಬಗೆಗೆ ಬೆರಗು ಹುಟ್ಟಿಸುವ ಹಬ್ಬವೇ ದೀಪಾವಳಿ. ಮನುಷ್ಯ  ಮೊಟ್ಟಮೊದಲು ಬೆಳಕು ನೀಡಿದ ಸೂರ್ಯನ ಬಗ್ಗೆ ಪೂಜ್ಯ ಭಾವನೆ ಬೆಳೆಸಿಕೊಂಡ. ನಂತರ ಬೆಂಕಿ ಆವಿಷ್ಕಾರವಾದ ಮೇಲೆ ಬೆಳಕಿನ ಮೂಲವಾದ ಅದು ತನ್ನ ಅಗತ್ಯತೆಗಳನ್ನು ಪೂರೈಸಲು ಸಹಾಯಕವಾದಾಗ ಅದನ್ನು ದೈವತ್ವಕ್ಕೇರಿಸಿದ.  ಹೀಗೆ ಬೆಳಕು ಹಾಗೂ ಅದರ ವಿವಿಧ ಮೂಲಗಳು ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿ ಪ್ರಮುಖ ಸ್ಥಾನವನ್ನು ನಿರ್ಮಿಸಿಕೊಂಡವು.   ಪ್ರಾಚೀನ ಕಾಲದಿಂದಲೂ ಕತ್ತಲು ನಿಗೂಡತೆ ಅಜ್ಞಾನದ ಸಂಕೇತ .ಬೆಳಕು ಜ್ಞಾನದ ಪ್ರತಿನಿಧಿ. ಬೆಳಕಿನ […]

ಡೊಂಕು

ಕಥಾ ಸಂಗಾತಿ ಡೊಂಕು ವಿಜಯಾಮೋಹನ್ : ಅಕ್ಕಯ್ಯನೆದೆಯೊಳಗೆ ಬಗೆ ಬಗೆದು ಬಿತ್ತಿದ್ದ ಚಿಂತೆಗಳೆಂಬ ತರಾವರಿ ಬೀಜಗಳು, ಅವು ಒಂದಲ್ಲ ಎರಡಲ್ಲ, ಮೂರು ಸಂಗತಿಗಳು  ಮೊಳಕೆಯೊಡಕೊಂಡು.  ಪೈರುಗಳಾಗಿ ಬೆಳೆಯುವಾಗ, ಅವುಗಳನ್ನ ಬುಡ ಸಮೇತ ಕಿತ್ತೆಸೆಯಲಾಗದೆ, ಅವಳೊಳಗವಳು ಖಿನ್ನಳಾಗುತ್ತ ಕುಂತು, ಇಂಗೆ ಗರ ಬಡದೋನಂಗೆ ಕುಂತಿರುವ ಮಗನನ್ನು ನೋಡುತ್ತಿದ್ದರೆ. ಬೆಳಗಾ ಸಂಜೇಲಿ ಆ ಚಿಂತೆಯ ಪೈರುಗಳಿಗೆ ನೋವೆಂಬ ನೀರು ಜಿನುಗುತ್ತಿತ್ತು.       ಅವಳ ಮನೇಲಿ ಅವಳಿಗಿದ್ದದ್ದು ಒಂದೇ ಒಂದು ಗಂಡುಡಗ. ನೆಲಕ್ಕೆ ಬಿಟ್ಟರೆ ಎಲ್ಲಿ ಮಣ್ಣಾಗ್‌ತ್ತಾನೊ? ಅನ್ನುವಂತ ನಯಾ-ನಾಜೋಕಿನೊಳಗೆ ಸಾಕಿದ್ದಳು. […]

ಬದಲಾಗಲಿ ಕರ್ನಾಟಕದ ಸನ್ನಿವೇಶ

ಬದಲಾಗಲಿಕರ್ನಾಟಕದಸನ್ನಿವೇಶ ಇರಾಜ ವೃಷಭ ಎ ಎಲ್ಲರೂ ಹಬ್ಬಗಳನ್ನು ಆಚರಿಸುತ್ತಾರೆ. ಹಬ್ಬ ಅಂದರೆ ಎಲ್ಲರೂ ಹೇಳೋದು ದೀಪಾವಳಿ, ದಸರಾ, ಗಣೇಶ ಚತುರ್ಥಿ, ನಾಗರಪಂಚಮಿ ಇತ್ಯಾದಿ. ಆದರೆ ಇದು ಅವರ ಪಾಲಿಗೆ ಹಬ್ಬಗಳಲ್ಲಿ ದೊಡ್ಡದಾದ ಹಬ್ಬ. ಪಟಾಕಿ ಶಬ್ದ, ಮೆರವಣಿಗೆ, ಡ್ಯಾನ್ಸ್, ಡಿಜೆ, ಕೋಲಾಟ, ಹಾಡು ಇತ್ಯಾದಿ ಆದರೆ ಸಮಯ ಮತ್ತು ಆಚರಿಸುವ ವಿಧಾನಗಳು ಎರಡು ಜಾಸ್ತಿನೇ.  ಅದೇನೊ ಖುಷಿ ಮತ್ತು ಸ್ವಾಭಿಮಾನ  ಈ ಹಬ್ಬವನ್ನು ಹೆಚ್ಚಾಗಿ ವಿಜ್ರಂಭಣೆಯಿಂದ ಆಚರಿಸುವಂತೆ ಮಾಡುತ್ತವೆ. ಆ ಹಬ್ಬವೇ ಕರ್ನಾಟಕ ರಾಜ್ಯೋತ್ಸವ. ಕನ್ನಡಿಗರ ಪಾಲಿಗೆ […]

ಜೇನು ನುಡಿ

ಕಾವ್ಯ ಸಂಗಾತಿ ಜೇನು ನುಡಿ ಶ್ರೀನಿವಾಸ ಜಾಲವಾದಿ ಜೇನು ನುಡಿಯಾ ಒಡತಿ ನಮ್ಮತಾಯಿ ನಾಡದೇವಿ ಕನ್ನಡಾಂಬೆ ! ಜಗದ ಸುಂದರ ನುಡಿಯು ಕನ್ನಡಚಂದ್ರನ ಬೆಳದಿಂಗಳ ಕಾಂತಿಯಿದಕೆನಗುವ ಸಿರಿಮೊಗವೀ ಚೆನ್ನುಡಿಯುತಾಯಿ ಮೊಗವ ಸಿರಿ ಈ ಹೊನ್ನುಡಿ! ಕಾವ್ಯ ಗದ್ಯ ಕಥೆ ನೀಳ್ಗತೆ ಜಡೆಯುಹಣೆ ಬೊಟ್ಟೇ ಇವಳ ಹನಿಗವನವುಬೆಳ್ಳನೆ ದಂತಪಂಕ್ತಿಯೇ ನಾಟ್ಯಶಾಸ್ತ್ರಅವಳ ಸುಂದರ ನಗೆ ಮಹಾಕಾವ್ಯ ! ಸರ್ವ ಜನಾಂಗದ ಶಾಂತಿ ಮಂತ್ರದಸಾಮರಸ್ಯದ ನಡೆಯ ಭುವನೇಶ್ವರಿಜೀವಜಲ ರಾಶಿಗಳ ಕಾಯ್ವ ದೇವಿನೀನೇ ನಮ್ಮ ನಿಜ ತಾಯಿ ಎಂದಿಗೂ ಕನ್ನಡವೇ ಹೊನ್ನುಡಿ ಕನ್ನಡವೇ […]

ಬಿತ್ತಿ ಬಿಡು ನಕಾಶೆಯೊಳು

ದಾಸ್ಯದ ನೊಗದ ಹೆಗಲೇ
ಸುರಿಯದಿರು ನೆತ್ತರು ಕಡು ಕರಂಡಿಕೆಯೊಳು
ಬಿತ್ತಿ ಬಿಡು ನಕಾಶೆಯೊಳು ಕೊಪ್ಪಡರಿಹ ಕರುಳು

ಗಝಲ್

ಜ್ಞಾನಪೀಠಗಳ ಮಣಿಗಳನು ಧರಿಸಿದೆ ಕನ್ನಡಾಂಬೆಯ ಮುಕುಟ  
ಧ್ಯಾನವೆತ್ತಣದೋ ಮಕ್ಕಳದು ಎನ್ನುತಲಿ  ಬಾಡಿದೆ ಕರುನಾಡು

Back To Top