ಗಜಲ್
ಗಜಲ್ ಪ್ರೊ.ರಾಜನಂದಾ ಘಾರ್ಗಿ ನಿನ್ನ ಮಡಿಲಿಗೆ ಜಾರಿ ಬಿದ್ದ ನನ್ನ ಹೃದಯವನ್ನು ಮರಳಿಸಿಬಿಡುನಿನ್ನ ಸುತ್ತ ಸುತ್ತಿರುವ ಕನಸುಗಳ ಜಾಲವನ್ನು ಮರಳಿಸಿಬಿಡು ಭಾವನೆಗಳ ಮತ್ತೇರಿ ಸುತ್ತಲ ಜಗವ ಮರೆಯುತ್ತಿರುವೆನನ್ನನೇ ಮರೆಯುವ ಮುನ್ನ ನನ್ನ ಅರಿವನ್ನು ಮರಳಿಸಿಬಿಡು ನಿನ್ನ ಮೋಹಕ ನಗೆಯ ಪಾಷದಲಿ ನರಳುತಿದೆ ನನ್ನ ಚೇತನಸಂವೇದನೆ ಸ್ಥಬ್ದವಾಗುವ ಮುನ್ನ ನನ್ನ ನಗುವನ್ನು ಮರಳಿಸಿಬಿಡು ಕಾಯುತಿರುವೆ ದೂರದ ದಾರಿಯಲಿ ಕಣ್ಣಿಟ್ಟು ಹಗಲಿರುಳುರಾತ್ರಿ ಕಳೆದು ಬೆಳಕಾಗುವ ಮುನ್ನ ಕಸಿದ ನಿದ್ರೆಯನ್ನು ಮರಳಿಸಿಬಿಡು ಕಳೆದುಕೊಂಡಿಹಳು ರಾಜಿ ತನ್ನನ್ನು ನಿನ್ನ ಅಂಧ ಪ್ರೀತಿಯಲಿಕಣ್ಣೀರು ಬತ್ತಿ […]
ಕುದುರೆ ಸವಾರ
ಮಕ್ಕಳ ಕವಿತೆ ಕುದುರೆ ಸವಾರ ಸೋಮಲಿಂಗ ಬೇಡರ ಬಂದನೊಬ್ಬ ಸವಾರಬಿಳಿಯ ಕುದುರೆ ಹತ್ತಿಕೋರೆ ಮೀಸೆ ತಿರುವುತಓಣಿ ಓಣಿ ಸುತ್ತಿ ಓಣಿ ಮಕ್ಕಳೆಲ್ಲರುನೋಡುತವನ ಮೆಚ್ಚಿಕುದುರೆ ಹಿಂದೆ ನಡೆದರುಹಾಕುತವರು ಹೆಜ್ಜಿ ಊರ ಜಾತ್ರೆ ಮರುದಿನಕುಸ್ತಿ ಗೆದ್ದ ವೀರತಾನೇ ಎನುತ ಗತ್ತಲಿಸಾರುತ್ತಿದ್ದ ಧೀರ ಬೆಳಗುತ್ತಿದ್ದರಾರುತಿದೃಷ್ಟಿ ಬೊಟ್ಟು ಇಟ್ಟುನಗುತಲಿದ್ದ ಸವಾರಹೆಚ್ಚು ಹೆಮ್ಮೆ ಪಟ್ಟು ಢಂ! ಎಂದು ಒಮ್ಮೆಲೆಸಿಡಿಯಿತಲ್ಲಿ ಮದ್ದುಕುದರೆ ಬೆಚ್ಚಿ ನೆಗೆಯಲುಬಿದ್ದನವ ಜಟ್ಟಿಯು ಕಣ್ಣು ಬಿಟ್ಟು ನೋಡಿದನಗುತಲಿದ್ದ ತಮ್ಮಮಂಚದಿಂದ ತಿಮ್ಮನುಬಿದ್ದು ಎದ್ದ ಸುಮ್ಮ!
ನೀನಿರದ ದಿನ
ಕಾವ್ಯ ಸಂಗಾತಿ ನೀನಿರದ ದಿನ ಲಕ್ಷ್ಮಿ ಕೆ.ಬಿ ನೀನಿರದ ದಿನಸೂರ್ಯ ಉದಯಿಸಲೇ ಇಲ್ಲ….. ಮೋಡಗಳೆಲ್ಲ ಅಲ್ಲಲ್ಲೇ ನಿಂತುಒಮ್ಮೆಲೆ ಚೀರುತ್ತಾಅಳಲಾರಂಭಿಸಿವೆ ಬಾನಿಗೂ ಭಯ ವೆಂಬಂತೆಗುಡುಗು-ಸಿಡಿಲು ಮಿಂಚುಹೆಚ್ಚಾದ ಹೃದಯಬಡಿತ ಗೂಡೊಳಗಿನ ಹಕ್ಕಿ-ಮರಿಗಳಿಗೂಚಳಿ ಶೀತ ಜ್ವರಹಾರಲಾಗದ ಹಕ್ಕಿಗೆ ಗಂಟಲು ಬಿಗಿತ ಕಾಮನಬಿಲ್ಲಿನ ಬಣ್ಣಗಳೂಕಾರ್ಮುಗಿಲ ನೆರಳಲ್ಲಿಕಳೆಗುಂದಿ ನಿಂತಿವೆ ಹಸಿರೂ, ಭುವಿಎಷ್ಟು ತಾನೇ ಸಹಿಸಿಯಾಳುಮುಗಿಲ ನೋವಾ ಎಷ್ಟು ನುಂಗಿಯಾಳು ಹಗಲಿಗಿಂದು ರಾತ್ರಿಯ ನೆರಳುರವಿಗೆ ಹಗಲಲ್ಲೇ ನಿದ್ರೆಯ ಮಂಪರುರಾತ್ರಿ ಚಂದ್ರಮನಿಗೆ ಮತ್ತದೇ ಕತ್ತಲು ಕತ್ತಲ ರಾಜ ಶಶಿಗೆ ಆಕಳಿಕೆ, ತೂಕಡಿಕೆಬಾನಿಗೆಲ್ಲ ಬೆಳಕ ಚೆಲ್ಲಿ, ನಿದ್ರೆ ಇರದೆನರಳಾಡುತ್ತಿದ್ದಾನೆಬಾನ […]