ಕಾವ್ಯ ಸಂಗಾತಿ
ನೇಗಿಲು ಹೆಗಲು ಬದಲಾಗಿ
ಮೋಹನ.ವಿ.ಹೊಸೂರ
ಯಾರ ಬೀಜವೊ
ಇನ್ನಾರದೋ ಗರ್ಭದಲಿ
ಬಿತ್ತಿದ ಪರಿಯಲಿ ಸೇರಿ
ಎಲ್ಲೋ ಇದ್ದವರು ನಾವು
ಮೊಳೆತು ಹೂ ಮಗುವಾಗರಳಿ
ಹುಟ್ಟಿಸಿದ ಕಾರಣಕೆ
ತಂದೆ ತಾಯಿ ಎನಿಸಿದವರ
ಮಗುವಾಗಿ ಬೆಳೆದು ಆರೈಕೆಯಲಿ
ಅರ್ಥ ಪೂರ್ಣ ಬದುಕು ಎಲ್ಲ ಸೇರಿ
ನಮ್ಮದು ಒಂದೇ ಸಂಸಾರವಾಗಿ
ಎಲ್ಲವೂ ನಾನು
ನನ್ನದೆಂಬ ಅಪ್ಯಾಯಮಾನದಲಿ
ಬೆಳೆದು ನಲಿ ನಲಿದು
ಬಲಿತು ಮತ್ತೆ ಬೀಜವಾಗಿ
ಇನ್ನಾರದೋ ಗರ್ಭದಲಿ ಮೊಳೆತು
ಇನ್ನೊಂದು ಜೀವಕೆ ಜೀವ ತುಂಬಿ
ಧಾರೆಯೆರೆದು ಹೆಗಲ ನೊಗ
ನೇಗಿಲು ಹೆಗಲು ಬದಲಾಗಿ
ಬ್ಯಾಟನ್ ಒಪ್ಪಿಸಿ ರಿಲೇ ಆಟದ ರೀತಿ
ನಾನು ನನ್ನದೆಂಬೆಲ್ಲವನೂ ಕೊಟ್ಟು ಬಿಟ್ಟು
ಕೋ ಕೋ ಆಟದಲಿ ಮುಟ್ಟಿ ಓಡುವ ನೀತಿ
ಓಟ ಕೀಳೋ ಪರಿ ವಿಸ್ಮಯದಂತೆ ಬದುಕು