Day: November 14, 2021

ಅನುವಾದಿತ ಅಬಾಬಿಗಳು

ಅನುವಾದ ಸಂಗಾತಿ ಅನುವಾದಿತ ಅಬಾಬಿಗಳು ಆಕರ : ಕಾಲಂ ಸಾಕ್ಷಿಗಾ(ತೆಲುಗು ಅಬಾಬಿಗಳ ಸಂಕಲನ) ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್ಕನ್ನಡಾನುವಾದ : ಧನಪಾಲ ನಾಗರಾಜಪ್ಪ ೧೦)ಭಯದಿಂದ ಬದುಕುಗಳು ವಿಲಪಿಸುತ್ತಿವೆಹೊತ್ತು ಕಳೆಯದೆ ಹೊರಳಾಡುತ್ತಿವೆಬಲಿಯಾಗಿತ್ತಿರುವ ಮಾನವ ಜೀವನಗಳುಹಕೀಮಾಸಂತೆಯಲ್ಲಿ ಪ್ರಾಣಿಗಳಂತೆ ಮಾರಾಟವಾಗುತ್ತಿವೆ. ೧೧)ಬಲಹೀನರ ಶೋಷಣೆಗಳುಕುಲಮತಗಳ ದೌರ್ಜನ್ಯಗಳುಮನುಷ್ಯರ ಮಧ್ಯೆ ಕಂದಕಗಳುಹಕೀಮಾದೇಶದಲ್ಲಿ ರಾಜಕೀಯಕ್ಕಿದೇನಾ ಬಂಡವಾಳ? ೧೨)ಒಬ್ಬೊಬ್ಬರದು ಒಂದೊಂದು ವ್ಯಾಪಾರಒಬ್ಬನದೇನೋ ಮತದ ಆಧಿಪತ್ಯಇನ್ನೊಬ್ಬನದೇನೋ ಮತನೋನ್ಮಾದಹಕೀಮಾಎಲ್ಲವೂ ವ್ಯಾಪಾರ ಲೇವಾದೇವಿಗಳೇ ಅಲ್ಲವೆ! *******************************

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—49 ಯಕ್ಷಗಾನ-ನಾಟಕ ರಂಗಭೂಮಿಯಲ್ಲಿ. ನನ್ನ ಕಾಲೇಜು ಅಧ್ಯಾಪಕರ ವೃತ್ತಿಯೊಡನೆ ನಾನು ಪ್ರೀತಿಯಿಂದ ಎದೆಗೆ ಹಚ್ಚಿಕೊಂಡ ಯಕ್ಷಗಾನ ಮತ್ತು ನಾಟಕ ರಂಗಭೂಮಿಯ ಹವ್ಯಾಸಗಳು ನನ್ನ ವ್ಯಕ್ತಿತ್ವದ ಇನ್ನೊಂದು ಮುಖದ ಬೆಳವಣಿಗೆಗೆ ಕಾರಣವಾದವು. ಈ ನಂಟಿನಿಂದಲೇ ಕಾಲೇಜು ಕ್ಯಾಂಪಸ್ಸಿನ ಆಚೆಯೂ ನನಗೊಂದು ಜನಪ್ರಿಯ ವಲಯ ಸೃಷ್ಟಿಯಾಯಿತು. ಹಾಗೆಂದು ನಾನು ಕ್ರಮಿಸಿದ ಯಕ್ಷಗಾನ ಮತ್ತು ರಂಗಭೂಮಿಯ ದಾರಿ ಕೇವಲ ಸುಗಂಧಯುಕ್ತ ಹೂವಿನ ಹಾಸಿಗೆಯಷ್ಟೇ ಆಗಿರಲಿಲ್ಲ. ಅಲ್ಲಿ ಶ್ಲಾಘನೆಯ ಪರಿಮಳದೊಡನೆ ವಿಮರ್ಶೆಯ ಟೀಕೆ ಟಿಪ್ಪಣಿಗಳ ಕಲ್ಲು […]

Back To Top