Day: November 6, 2021

ಬಲಿ ಚಕ್ರವರ್ತಿಯ ಹತ್ಯೆಯ ಜೊತೆಗೆ ಸಾಂಸ್ಕೃತಿಕ ಹತ್ಯೆಯು ನಡೆದು ಹೋಗಿದೆ

ಬಲಿ ಚಕ್ರವರ್ತಿಯ ಹತ್ಯೆಯ ಜೊತೆಗೆ ಸಾಂಸ್ಕೃತಿಕ ಹತ್ಯೆಯು ನಡೆದು ಹೋಗಿದೆ ಹಾರೋಹಳ್ಳಿ ರವೀಂದ್ರ ಬಲಿ ಚಕ್ರವರ್ತಿಯ ರಾಜ್ಯವು ಮಹಾರಾಷ್ಟ್ರದಿಂದ ಅಯೋಧ್ಯೆವರೆವಿಗೂ ವ್ಯಾಪಿಸಿತ್ತು. ಈತನ ಆಳ್ವಿಕೆಯಲ್ಲಿ ಯಾರಿಗೂ ತೊಂದರೆ ಇರಲಿಲ್ಲ. ಬಲಿಯ ರಾಜ್ಯದಲ್ಲಿ ಯಾರಿಗೂ ದುಃಖವಿರಲಿಲ್ಲ. ಗೂಂಡಾಗಿರಿಗಂತು ಅವಕಾಶವೇ ಇರಲಿಲ್ಲ. ಆದರೆ ವಿದೇಶಿ ದಾಳಿಕೋರರಾದ ಆರ್ಯರು ಇದನ್ನು ಸಹಿಸದೆ ಬಲಿಯನ್ನು ಕೊಂದು ಐತಿಹಾಸಿಕ ಚರಿತ್ರೆಯನ್ನು ಪುರಾಣದೊಳಗೆ ತುರುಕಿ ಮಕ್ಕಳನ್ನು ರಂಜಿಸುವ ಕಥೆಯನ್ನಾಗಿ ಸೃಷ್ಟಿಸಲಾಗಿದೆ. ವಾಮನ ಭಿಕಾರಿಯ ವೇಷದಲ್ಲಿ ಬಂದು ಮೂರು ಹೆಜ್ಜೆ ಭೂಮಿ ಕೇಳಿದನಂತೆ ಬಲಿಯು ಅದಕ್ಕೆ ಸಮ್ಮತಿಸಿದನಂತೆ, […]

ಅನುವಾದಿತ ಅಬಾಬಿಗಳು (೬ನೇ ಕಂತು)

ಕಾವ್ಯ ಸಂಗಾತಿ ಅನುವಾದಿತ ಅಬಾಬಿಗಳು (೬ನೇ ಕಂತು) ಆಕರ : ಕಾಲಂ ಸಾಕ್ಷಿಗಾ(ತೆಲುಗು ಅಬಾಬಿಗಳ ಸಂಕಲನ)ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್ಕನ್ನಡಾನುವಾದ : ಧನಪಾಲ ನಾಗರಾಜಪ್ಪ ೧೩)ಮೊನ್ನೆ ರಥ ಇಂದು ವಿಗ್ರಹದಿನಕ್ಕೊಂದು ಹೊಸ ಯೋಜನೆದೇಶದಲ್ಲಿ ರಾಜಕೀಯ ಆಧ್ಯಾತ್ಮಿಕಹಕೀಮುಪ್ರಮಾಣಗಳಿಂದ ಪ್ರಸಿದ್ಧರಾಗುವ ಯೋಚನೆ. ೧೪)ದೇವಾಲಯವೋ? ವಿದ್ಯಾಲಯವೋ?ಎಲ್ಲಾದರೂ ಆಣೆಗಳನ್ನು ಮಾಡುವರುಅಸಲು ಆಣೆ ಅಂದರೇನು ಗೊತ್ತಾ?ಹಕೀಮುದೈವವೆಂದರೆ ಇವರಿಗೆ ಆಟದ ವಸ್ತುವೇನು? ೧೫)ಎಲ್ಲರಿಗೂ ತಿಳಿದ ರಹಸ್ಯವೇಪಕ್ಷಗಳ ದೌರ್ಭಾಗ್ಯದ ವಾಗ್ದಾನಗಳುಇಂದಿನ ರೌಡಿಗಳು ನಾಳೆಯ ನಾಯಕರೆ?ಹಕೀಮುದೇಶವೇ ಕಬ್ಜಾ ಆಗುತ್ತಿದೆಯೇನೋ!

ಧಾರಾವಾಹಿ ಆವರ್ತನ ಅದ್ಯಾಯ-41 ಸುಮಿತ್ರಮ್ಮ ಕೋಪದಿಂದ ಕೇಳಿದ ಪ್ರಶ್ನೆಗೆ ನರಹರಿ ತಾನು ಉತ್ತರಿಸಬೇಕೋ, ಬೇಡವೋ ಎಂಬ ಉಭಯಸಂಕಟಕ್ಕೆ ಸಿಲುಕಿದ. ಆದರೆ ಮರುಕ್ಷಣ,‘ನೀನೊಬ್ಬ ಜವಾಬ್ದಾರಿಯುತ ವೈದ್ಯನು ಹೇಗೋ ಹಾಗೆಯೇ ಪ್ರಜ್ಞಾವಂತ ನಾಗರೀಕನೂ ಹೌದು! ಆದ್ದರಿಂದ ನಿನ್ನ ಸುತ್ತಮುತ್ತದ ಅಮಾಯಕ ಜನರಲ್ಲಿ ನಿನ್ನ ಗಮನಕ್ಕೆ ಬರುವಂಥ ತಪ್ಪು ತಿಳುವಳಿಕೆಗಳನ್ನು ನಿವಾರಿಸುವುದೂ ನಿನ್ನ ಕರ್ತವ್ಯ ಎಂಬುದನ್ನು ಮರೆಯಬೇಡ!’ಎಂದು ಅವನ ವಿವೇಕವು ಎಚ್ಚರಿಸಿತು. ಹಾಗಾಗಿ ಕೂಡಲೇ ಚುರುಕಾದ. ‘ಸುಮಿತ್ರಮ್ಮ ನಿಮ್ಮ ಮತ್ತು ಊರಿನವರ ನಂಬಿಕೆಗಳು ಹಾಗೂ ಆ ಗುರೂಜಿಯವರ ಮಾತುಗಳು ಎಷ್ಟು ಸತ್ಯವೋ […]

Back To Top