ಕಾವ್ಯ ಸಂಗಾತಿ
ಬಿತ್ತಿ ಬಿಡು ನಕಾಶೆಯೊಳು
ಅಶೋಕ ಹೊಸಮನಿ
ಹೃದಯದ ಚಿಗುರ ಕತ್ತರಿಸೊ ಖಯಾಲಿ ಏತಕೊ ದೊರೆಯೇ?
ಕುಕ್ಕಲಿ ಹದ್ದುಗಳು ಆ ಗೋಡೆಯನ್ನಾದರೂ
ನಿನ್ನ ಹಾಡ ಹಾಡು ಕವಿಯೇ
ಹೊರಹೊಮ್ಮಿತಾದರೂ ಹೇಗೆ ರಾಗವು
ಕರ್ಕಶ ದನಿಗಳ ಆರ್ಭಟದಲಿ ರವಿಯೇ
ಎದೆಯ ಹಕ್ಕಿಯನ್ನಾದರೂ ಹಿಂಡಿ
ಪಂಜರವ ಕೊಂಡಾಡುವ ಅಣ್ಣಗಳಿರೇ
ನಿಟ್ಟುಸಿರ ಆತ್ಮಗಳ ಎಡತಾಕಿ
ನೆಲದ ಕಣ್ಣ ಬೊಂಬೆಯ ಮುರಿವಿರೇ?
ದಾಸ್ಯದ ನೊಗದ ಹೆಗಲೇ
ಸುರಿಯದಿರು ನೆತ್ತರು ಕಡು ಕರಂಡಿಕೆಯೊಳು
ಬಿತ್ತಿ ಬಿಡು ನಕಾಶೆಯೊಳು ಕೊಪ್ಪಡರಿಹ ಕರುಳು
ತುಂಬಾನೆ ಚೆನ್ನಾಗಿದೆ ಈ ಕವನ, ಅಶೋಕ್ … ಅಭಿನಂದನೆಗಳು …
ಎದೆಯ ಹಕ್ಕಿಯ ಹಿಂಡಿ
ಪಂಜರಗಳ ಕೊಂಡಾಟ..
ಅಭಿನಂದನೆಗಳು