ಬೆಳಕಿನ ಪರಿಮಳ

ಕಾವ್ಯಸಂಗಾತಿ

ಬೆಳಕಿನ ಪರಿಮಳ

ದೀಪಾವಳಿ ಈ ಸಂಜೆ
ಅಂಗಳದ ತುಂಬಾ ದೀಪಗಳ ಸಾಲು
ನಗುತ್ತಿದ್ದವು
ಭೂವಿಗಿಳಿದ ತಾರೆಗಳಂತೆ
ಕತ್ತಲೆಯ ಅಣಕಿಸಿ
ಬೆಳಕ ಹೊರಚಿಮ್ಮಿಸಿ….!

ನನ್ನೆದೆಯಲ್ಲಿಯೂ ಸಾವಿರ
ಹಣತೆಯ ಬೆಳಕು ನಗುತ್ತಿತ್ತು
ಸೂರ್ಯ ಕಾಂತಿಯಂತೆ
ಸ್ನೇಹ ಪ್ರೇಮಗಳ ಅರಳಿಸಿ
ಬೆಳಕ ಪರಿಮಳ ಪಸರಿಸಿ….!

ನೀ ತಂದ ಬೆಳಕಿನ ಸಡಗರ
ಚಂದ್ರಕಾಂತಿಯಂತೆ
ಕಾರ್ತೀಕಕ್ಕೂ ಭಯ
ಚಿಮ್ಮಿಸಿ ಆತ್ಮಬಲದ ಬೆಳಕು
ನನ್ನ ಮನೆಮನದಂಗಳದಲ್ಲಿ
ನಿತ್ಯ ದೀಪಾವಳಿ….!!


ಡಾ. ನಿರ್ಮಲ ಬಟ್ಟಲ

2 thoughts on “ಬೆಳಕಿನ ಪರಿಮಳ

  1. ನಿಮ್ಮ ಈ ಪದ್ಯ ಆತ್ಮಬಲ, ಪ್ರೀತಿ, ವಿಶ್ವಾಸ ಹೆಚ್ಚಿಸಿದೆ.

Leave a Reply

Back To Top