Day: November 15, 2021

ಬಚ್ಚಿಟ್ಟಿರುವೆ

ಕಾವ್ಯ ಸಂಗಾತಿ ಬಚ್ಚಿಟ್ಟಿರುವೆ ಲಕ್ಷ್ಮಿ ಕೆ ಬಿ ಬಚ್ಚಿಟ್ಟಿರುವೆನಿನ್ನ ಹೃದಯವನನ್ನ ಹೃದಯದೊಳಗೆ ಮಳೆ ಚಳಿಗೆನಡುಗದಂತೆಉರಿಬಿಸಿಲಿಗೆ ಒಣಗದಂತೆ ಬಚ್ಚಿಟ್ಟಿರುವೆನಿನ್ನ ಹೃದಯವನನ್ನ ಹೃದಯದೊಳಗೆ ಸದಾ ನಗುವಕಾಮನಬಿಲ್ಲಿನ ಬಣ್ಣಮಾಸದಂತೆ ಹೊಳೆವ ನಿನ್ನಕಂಗಳ ಚೆಲುವುಮರೆಯಾಗದಂತೆ ಬಚ್ಚಿಟ್ಟಿರುವೆನಿನ್ನ ಹೃದಯವನನ್ನ ಹೃದಯದೊಳಗೆ ಜಗದ ಬಂಧಮುಗಿಸೋ ಗಳಿಗೆಯಲ್ಲೂಜೊತೆ ನಡೆವಂತೆ ಅಣಿಮಾಡಲು ಬಚ್ಚಿಟ್ಟಿರುವೆನಿನ್ನ ಹೃದಯವನನ್ನ ಹೃದಯದೊಳಗೆ….ಒಲವಿಂದ….

ಉತ್ತರ ಹೇಳು ಸಖ

ಕಾವ್ಯ ಸಂಗಾತಿ ಉತ್ತರ ಹೇಳು ಸಖ ಶಂಕರಾನಂದ ಹೆಬ್ಬಾಳ ನಿಬಿಡಾರಣ್ಯದಲಿಒಬ್ಬಂಟಿ ನಾನುಬೋಳು ಮರದಂತೆ,ನಿಶ್ಚಲ ಭಾವವಿಷಣ್ಣತೆಯಲಿಗೊಣಗುತಿರುವೆ… ಜಾರಿದ ಸಮಯಕ್ಕೂಗೊತ್ತಾಗಲಿಲ್ಲವೆ..?ಉಳಿದ ನೆನಪುಗಳುತೊಗಲು ಬೊಂಬೆಯಂತೆಥೈತಕ ಕುಣಿಯುತ್ತಿವೆ…. ಬೇಗೆಯಲಿ ದಿಗ್ಗನೆದ್ದುಬಂದಂತೆ ಭಾಸವಷ್ಟೆನಿಂತ ಜಾಗ ಕುಸಿದಂತೆಕೊಂಚ ಅಳುಕುಎದ್ದು ಕುಳಿತೆಬುದ್ದನಂತೆಶಾಂತಿಯಿಲ್ಲದೆ… ಈಗ ಹೊರಟಿದ್ದೇನೆಧ್ರುವಕೆ ವಿಮುಖನಾಗಿ“ದಾರಿಯಾವುದಯ್ಯಾವೈಕುಂಠಕೆ ಎಂದು”ದಾಸ ಮಾರ್ಗವನುಹಿಡಿದು,ಸತ್ಯವನರಸಿಮೋಕ್ಷಾಪೇಕ್ಷಿಯಾಗಿಅಲೆವ ಯೋಗಿನಂತೆನಡೆದಿದ್ದೇನೆ ದಿನದಿನಗಳ ಸವೆಸಿಸವೆದ ಚಪ್ಪಲಿಯಾಗಿದ್ದೇನೆ…. ದುಗುಡವಾವರಿಸಿದುಃಖದೊಳು ತೇಲಿಪರಿಹಾರವಿಲ್ಲದಫಲಾನುಭವಿ ನಾನುಉತ್ತರವೆಲ್ಲಿದ ಸಖನನ್ನ ಮನದ ಪ್ರಶ್ನೆಗೆ….?

ಲೇಖನಿ

ಕಾವ್ಯ ಸಂಗಾತಿ ಲೇಖನಿ ಅನಿತಾ ಸಿಕ್ಕಿತೊಂದು ಜಾದೂ ಲೇಖನಿಹಣೆಬರಹ ಅಳಿಸಿ, ಮತ್ತೊಮ್ಮೆ ಬರೆಯಬಹುದಿತ್ತು, ಆ ವಿಧಾತನ ದನಿ ಅಳುಬರಹ ಒರೆಸಿನೋವು, ನಲಿವಾಗಿಸಿ ಬದುಕುಬದಲಾಯಿಸಬೇಕೆಂದಿತುಆಕಾಂಕ್ಷೆಯ ತಾಸು! ಸಿರಿವಂತಿಕೆ, ಬಡತನದ್ವೇಷ, ಪ್ರೀತಿ, ಮೇಲು ಕೀಳುಕಣ್ಮುಂದೆ ಹಾದುಹೋಗುತ್ತಿತ್ತುಅಂತರಾಳದ ಕನಸು! ರವಿವರ್ಮನ ಕುಂಚದ ಬಣ್ಣತುಂಬಿ, ನವಿರಾದ ಎಳೆಗಳಿಗೆರಂಗುರಂಗಿನ ಹೊಸತನಮೂಡಿಸುವ ಹುಮ್ಮಸ್ಸು! ಅವೇನು ಕಠಿಣ ಕಾರ್ಯವಾಗಲಿಲ್ಲಜೀವ, ಜೀವಂತಿಕೆಯ ಒಳಗೆಮಾರ್ಪಾಟಾಗಿತ್ತು ಹಲವು ಮಜಲು! …. ಆಯಸ್ಸು ಮೆಟ್ಟಿಲೊಳಗೆ ಇಳಿಯಲಾಗದೆಸಾವಿನ ಕ್ಷಣ ಮುಂದೂಡಲಾಗದೆ…

ಮಿಥ್ಯ ಸತ್ಯ…

ನಾನು ನೀನಿನ ಎರಡು ತಂತಿಗಳು ಪಸರಿಸಿ
ಹರಿದು ಮೀಟಿ ಪದೇಪದೇ ಜೋಡಿಸಿ
ಸಾವಿರಾರು ತಂತಿಗಳ ನಾದ ಭಾವ ಕಲರವ
ನಾನು ನೀನು ಮಿಥ್ಯ ನಾವು ನಮ್ಮ ಭಾವ

ಅಭಿನಂದನೆಗಳು

ಅಭಿನಂದನೆಗಳು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಸರ್ಕಾರಿ ಪ್ರೌಢಶಾಲೆ ಯಲ್ಲಿ ಹಿಂದಿ ಭಾಷಾ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ನಿರ್ಮಲಾ ಶೆಟ್ಟರ ನಮ್ಮ ಸಂಗಾತಿ ಪತ್ರಿಕೆಯ ಬರಹಗಾರರೂ ಆಗಿದ್ದಾರೆ.ಅವರ 2020 ರಲ್ಲಿ ಪ್ರಕಟವಾದ ಸರಹದ್ದುಗಳಿಲ್ಲದ ಭೂಮಿಯ ಕನಸು ಕೃತಿಗೆ ಈ ಮೊದಲೇ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಮುದ್ದಣ ರತ್ನಾಕರವರ್ಣಿ ಅನಾಮಿಕ ದತ್ತಿ ಬಹುಮಾನ ಸಂದಿರುತ್ತದೆ. ಈಗ ಸೇಡಂನಿಂದ ಕೊಡಮಾಡುವ ಅಮ್ಮ ಪ್ರಶಸ್ತಿಯು ಲಭಿಸಿದ್ದು, ಇದೇ ತಿಂಗಳು 26ನೇ ದಿನಾಂಕ ದಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಈ […]

Back To Top