ನಿವಾಳಿ ತೆಗೆದ ದಾರಿ
ಬದುಕ ಅರಳುವ ಹೊತ್ತಿನಲ್ಲಿ
ಬೇರುಗಳ ಕಿತ್ತಿ,ಒಳಗೊಳಗೆ ನಗುತ್ತಿದ್ದೀರಿ
ನಮಗರಿಲ್ಲವೆಂದು ನಮ್ಮ-
ನಮ್ಮ ಸಾವಿಗೆ ಸುಂಕ ಕೇಳಿದ್ದೀರಿ
ಬೆವರಿನ ಜಯ
ಬೇಕಾದಾಗ ಮುದ್ರಿಸುವ
ಬೇಡಾದಾಗ ಮುರಿವ
ನೋಟಲ್ಲ ದೊರೆ
ಎಂದೂ ಮುಕ್ಕಾಗದ ರೊಟ್ಟಿ
ವಿಷಾದವೊಂದು ಎದೆಯೊಳಗೆ
ನಿರಂತರ ಕತ್ತಿ ಮಸೆದು
ರಕ್ತ ಸುರಿಸಿ
ಸಾಯೋಣ….
ಅಲ್ಲವೇ?!!
“ಪ್ರಪಂಚದಲ್ಲಿ ಸುಖ-ದುಃಖಗಳೆರಡೂ ಇವೆ
ಸುಖ ಒಬ್ಬನಿಗಿದ್ದರೆ ನಾಲ್ವರಿಗೆ ದುಃಖವಿದೆ”
-ಜೌಕ್
ಅನುಭವ ಸಂಪಾದನೆ
ಗಜಲ್
ಮುಗ್ಧರನ್ನ ಶಿಕ್ಷಿಸುವ ಫರಮಾನ್ ಜಾರಿಯಾಗುತಿದೆ
ಸತ್ತರು ಪ್ರೇಮಿಗಳ ಅದೇ ಇತಿಹಾಸ ಮರುಕಳಿಸುತಿದೆ