ಜೇನು ನುಡಿ

ಕಾವ್ಯ ಸಂಗಾತಿ

ಜೇನು ನುಡಿ

ಶ್ರೀನಿವಾಸ ಜಾಲವಾದಿ

ಜೇನು ನುಡಿಯಾ ಒಡತಿ ನಮ್ಮ
ತಾಯಿ ನಾಡದೇವಿ ಕನ್ನಡಾಂಬೆ !

ಜಗದ ಸುಂದರ ನುಡಿಯು ಕನ್ನಡ
ಚಂದ್ರನ ಬೆಳದಿಂಗಳ ಕಾಂತಿಯಿದಕೆ
ನಗುವ ಸಿರಿಮೊಗವೀ ಚೆನ್ನುಡಿಯು
ತಾಯಿ ಮೊಗವ ಸಿರಿ ಈ ಹೊನ್ನುಡಿ!

ಕಾವ್ಯ ಗದ್ಯ ಕಥೆ ನೀಳ್ಗತೆ ಜಡೆಯು
ಹಣೆ ಬೊಟ್ಟೇ ಇವಳ ಹನಿಗವನವು
ಬೆಳ್ಳನೆ ದಂತಪಂಕ್ತಿಯೇ ನಾಟ್ಯಶಾಸ್ತ್ರ
ಅವಳ ಸುಂದರ ನಗೆ ಮಹಾಕಾವ್ಯ !

ಸರ್ವ ಜನಾಂಗದ ಶಾಂತಿ ಮಂತ್ರದ
ಸಾಮರಸ್ಯದ ನಡೆಯ ಭುವನೇಶ್ವರಿ
ಜೀವಜಲ ರಾಶಿಗಳ ಕಾಯ್ವ ದೇವಿ
ನೀನೇ ನಮ್ಮ ನಿಜ ತಾಯಿ ಎಂದಿಗೂ

ಕನ್ನಡವೇ ಹೊನ್ನುಡಿ ಕನ್ನಡವೇ ಸತ್ಯ
ಕನ್ನಡವೇ ಚೆನ್ನುಡಿ ಕನ್ನಡಾಮೃತವು


One thought on “ಜೇನು ನುಡಿ

Leave a Reply

Back To Top