ಮೊದಲ ಬಾರಿ ಪೇಯಿಂಗ್ ಗೆಸ್ಟ್ ಆಗಿ ಹೋದಾಗ
ಅನುಭವ ಮೊದಲಬಾರಿಪೇಯಿಂಗ್ ಗೆಸ್ಟ್ಆಗಿಹೋದಾಗ ಬೆಂಗಳೂರಿಗೆ ಹೋಗಿ ಬಂಧುಗಳ ಮನೆಯಲ್ಲಿ ಬಂಧುಗಳ ಹಾಗೆ ಒಂದೆರಡು ದಿನ ಇದ್ದು ಬರುವುದು ಬೇರೆ ವಿಚಾರ !ಅದೇ ನಮ್ಮ ಕೆಲಸಕ್ಕೆ ಹೋಗಿ ಇರುವುದು ವೆರಿ ಹಾರಿಬಲ್! ಯಾರಿಗೂ ಇರಿಸು ಮುರಿಸು ಬೇಡ ಎಂಬ ಕಾರಣಕ್ಕೆ ಸಾಧನಾಕಾಂಕ್ಷೆಗಳ ಅರ್ಥಾತ್ ಉದ್ಯೋಗಾಕಾಂಕ್ಷೆಗಳು,. ಸ್ಪರ್ಧಾಕಾಂಕ್ಷಿಗಳು ಏನೇ ಕರೆಯಲಿ ಅವರ ಮುಂದಿನ ಆಯ್ಕೆ ಪಿಜಿ. ಪಿಜಿ ಅಂದರೆ ‘ಪೇ’ ಮಾಡಿ ‘ಗೆಸ್ಟ್’ ಆಗಿರಿ ಅಂತ ಅಲ್ಲ ಪೇ ಮಾಡಿ ಪೇನ್ಫುಲ್ ಅಡ್ಜಸ್ಮೆಂಟ್ ಮಾಡಿಕೊಂಡಿರಿ ಎಂದರ್ಥ. ಅತ್ತೆ ಮನೆಯ […]
ಕಡಿವಾಣವೂ ಪ್ರೀತಿಯೇ!!!!!
ಲೇಖನ ಕಡಿವಾಣವೂ ಪ್ರೀತಿಯೇ!!!!! ಮಾಲಾ ಅಕ್ಕಿಶೆಟ್ಟಿ ಕೊರೊನಾ ಲಾಕಡೌನ್ ಕ್ಕಿಂತ ಮುಂಚೆ ನಡೆದ ಮಾತಿದು.ಆತ್ಮೀಯರೊಬ್ಬರು ಚರ್ಚಿಸಿದ ವಿಚಾರ.ಅವರು ವಿವರಿಸಿದ ಹಾಗೆ ಈಗ ಒಂದು ವರ್ಷದಿಂದ ಶಾಲೆಗೆ ಹೋಗುವ ನಾಲ್ಕು ವರ್ಷದ ಮಗಳು ದಿನಾಲು ಒಂದಿಲ್ಲೊಂದು ವಸ್ತುಗಳನ್ನು ಶಾಲೆಯಲ್ಲಿ ಕಳೆದುಕೊಂಡು ಬಂದು ತಾಯಿಗೆ ಮತ್ತೆ ಹೊಸ ವಸ್ತುಗಳನ್ನು ಕೊಡಿಸುವಂತೆ ಪೀಡಿಸುತ್ತಿದ್ದಳು. ಮಗಳು ದಿನವೂ ಪೆನ್ಸಿಲ್, ರಬ್ಬರ್, ಶಾರ್ಪನರ್, ಕ್ರೆಯಾನ್ಸ್ ಗಳನ್ನು ಕಳೆದುಕೊಂಡು ಬರುವುದು ತಾಯಿಗೆ ತಲೆನೋವಾಗಿ ಪರಿಣಮಿಸಿತ್ತು. ಬೇಸತ್ತ ತಾಯಿ ಒಂದು ದಿನ ಮಗಳಿಗೆ ಸ್ಟ್ರಿಕ್ಟಾಗಿ ಎಚ್ಚರಿಕೆ […]
ಹೆಣ್ಣು
ಕಥೆ ಹೆಣ್ಣು ಸಹನಾ ಪ್ರಸಾದ್ ರಾತ್ರಿ ಎಲ್ಲ ಮಧುಸೂದನನಿಗೆ ನಿದ್ರೆ ಇಲ್ಲ. ಆ ಕಡೆ, ಈ ಕಡೆ ಹೊರಳಾಡಿ, ಎದ್ದು ಕುಳಿತು, ಮತ್ತೆ ಮಲಗಿ, ಹೀಗೆ ಅರ್ಧ ರಾತ್ರಿ ಕಳೆಯಿತು. ಸಧ್ಯ, ಹೆ0ಡತಿಗೆ ಬೇರೆ ಕೋಣೆಯಲ್ಲಿ ಮಲಗಿ ಅಭ್ಯಾಸ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ರ0ಪ ಮಾಡಿ ಬಿಟ್ಟಿರುತ್ತಿದ್ದಳು. “ ಅಬ್ಬಬ್ಬಾ, ರಾತ್ರಿಯೆಲ್ಲ ನಿಮ್ಮ ಗೊರಕೆ ಇಲ್ಲಾ ಹೊರಳಾಟ, ನನ್ಕೈಲಿ ಆಗುವುದಿಲ್ಲಪ್ಪ. ಆರಾಮವಾಗಿ ಹೊದ್ದು ಮಲಗಲು ನಿಮಗೇನು ಕಷ್ಟ? ಹೇಗು ನನಗೆ ಚಿಕ್ಕ ವಯಸ್ಸಿನಿ0ದ ಆಸೆ, ನನ್ನದೇ ರೂಮು […]
ಹೂ ಬೆಳಗು
ಕವಿತೆ ಹೂ ಬೆಳಗು ಫಾಲ್ಗುಣ ಗೌಡ ಅಚವೆ ಸರಿಯುವ ಕತ್ತಲನ್ನು ಮರದಎಲೆಗಳ ನಡುವೆ ಕುಳಿತ ಹಕ್ಕಿಗಳುತದೇಕ ಚಿತ್ತದಿಂದ ನೋಡುತ್ತಿವೆ ಆಗಷ್ಟೇ ಕಣ್ಣು ಬಿಟ್ಟ ನಸುಕುದೊಸೆ ಹೊಯ್ಯಲುಬೆಂಕಿ ಒಟ್ಟುತ್ತಿದೆ ಹೊಂಗನಸ ನೆನೆದುಒಂದೇ ಸವನೆ ಮುಸುಕುವ ಮಂಜುಮರದ ಎಲೆಗಳ ತೋಯಿಸಿಕಚಗುಳಿಯಿಡುತ್ತಿದೆ ಆಗತಾನೇ ಹೊಳೆ ಸಾಲಿನಲ್ಲಿಮುಖ ತೊಳೆದುಕೊಂಡ ಮೋಡಗಳ ಕೆನ್ನೆಅರಳುವ ಎಳೆಬಿಸಿಲಿಗೆಕೆಂಪಾಗುಗುತ್ತಿದೆ ದಾಸಾಳದ ಹೂಗಳುಹೂ ಕೊಯ್ಯುವ ಪುಟ್ಟಿಯಪುಟಾಣಿ ಕೈಯ ಮುದ್ದು ಮಾಡುತ್ತಿವೆ ತಡವಾಗಿ ಎದ್ದ ಮುತ್ತುಮಲ್ಲಿಗೆಹೂಗಳು ಮುಖಕ್ಕೆ ಇಬ್ಬನಿಯೆರಚಿನಿದ್ದೆಗಣ್ಣುಗಳನ್ನು ತೊಳೆಯುತ್ತಿವೆ ಕಣ್ಣು ತೆರೆದೇ ಸಣ್ಣ ನಿದ್ದೆಗೆ ಜಾರಿದಅಬ್ಬಲಿ ಹೂಗಳನ್ನುಬೀಸಿ ಬಂದ ತಂಗಾಳಿ […]
ಅಂಕಣ ಬರಹ ಜ್ಞಾನವೆಂಬ ತಿಜೋರಿಯ ಕೀಲಿಕೈ… ಪುಸ್ತಕಗಳ ರಾಶಿಯನ್ನು ತಡವುವಾಗೆಲ್ಲಾ ಎಂಥದೋ ಆಪ್ತಭಾವ. ಗುಪ್ತಗೆಳೆಯನೊಬ್ಬ ಮನಕ್ಕೆ ಆಗಮಿಸಿದಂತೆ ಪ್ರತಿ ಪುಸ್ತಕವೂ ನಮ್ಮ ಅತಿ ಖಾಸಗೀತನವನ್ನು ಕೊಳ್ಳೆ ಹೊಡೆಯುತ್ತಿರುತ್ತದೆ. ನನಗೆ ಪುಸ್ತಕದ ರುಚಿ ಹತ್ತಿದ್ದು ಬಹುಶಃ ಮೂರೋ ನಾಲ್ಕನೆಯದೋ ತರಗತಿಯಲ್ಲಿದ್ದಾಗ. ಆಗ ನನ್ನ ಮನೆಗೆ ಬರುತ್ತಿದ್ದದ್ದು ದಿಕ್ಸೂಚಿ ಮಾತ್ರ. ಅದು ಖಂಡಿತ ದಿಕ್ಸೂಚಿ ಆಕರ್ಷಕವಾಗಿ ಕಾಣಿಸಬಹುದಾದ ವಯಸ್ಸು ಆಗಿರಲಿಲ್ಲ. ಆದರೆ ಒಂದು ಪುಸ್ತಕದ ಸ್ಪರ್ಶದ ಅನುಭೂತಿ ಹೇಗಿರುತ್ತದೆಂದು ತಿಳಿದದ್ದು ಮಾತ್ರ ದಿಕ್ಸೂಚಿಯಿಂದಲೇ. ಶಾಲೆಯ ಪಠ್ಯ ಪುಸ್ತಕಗಳು ಸದಾ ನಮ್ಮೊಂದಿಗಿರುತ್ತಿದ್ದವಾದರೂ […]
ಅಂಕಣ ಬರಹ ಹೊಸ ದನಿ ಹೊಸ ಬನಿ – ೧೦. ಹಂಗೆ ಇಲ್ಲದ ಖಬರಿನೊಳಗ ಏನೊ ಗುನುಗಿದ್ಹಾಂಗ ಚಂ ಸು ಕವಿತೆಗಳು ರಾಣೇಬೆನ್ನೂರು ಸಮೀಪ ಕೂನಬೇವು ಗ್ರಾಮದ ಸಾಹಿತಿ ಚಂಸು (ಚಂದ್ರಶೇಖರ ಸುಭಾಸ ಗೌಡ ಪಾಟೀಲ ಅಂದರೆ ಯಾರಿಗೂ ಗೊತ್ತಾಗುವುದಿಲ್ಲ!) ಅವರ “ಬೇಸಾಯದ ಕತಿ” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೧೮ನೇ ಸಾಲಿನ ಸಿಂಪಿ ಲಿಂಗಣ್ಣ ದತ್ತಿ (ಜೀವನಚರಿತ್ರೆ) ಪ್ರಶಸ್ತಿ ಪ್ರಕಟವಾದಾಗ ಅವರನ್ನು ಅಭಿನಂದಿಸಲು ಫೋನ್ ಮಾಡಿದ್ದೆ. ಆ ಲೇಖನಗಳಲ್ಲಿ ಕೆಲವನ್ನು ಓದಿದ್ದರಿಂದಾಗಿ ಬೇಸಾಯದ ಬದುಕಿನ ಹಿಂದಣ […]
ಗಝಲ್
ಗಝಲ್ ಪ್ರಭಾವತಿ ಎಸ್ ದೇಸಾಯಿ ಪ್ರೀತಿಯ ಆಳ ಹರವು ತಿಳಿದಿಲ್ಲ ಸಾವೇ ದೂರವಿರುಕಡಲು ಈಜಿ ದೇಹವು ದಣಿದಿಲ್ಲ ಸಾವೇ ದೂರವಿರು ಮಧುಶಾಲೆಯಲಿ ನೆಮ್ಮದಿ ಹುಡುಕುತಿರುವೆ ತಡೆಯ ಬೇಡಸುಖ ಪಡೆಯುವ ಸರದಿಯು ಬಂದಿಲ್ಲ ಸಾವೇ ದೂರವಿರು ಕೊರೆವ ಚಳಿ ನಡುಗುತಿದೆ ತನು ನೆನಪ ಬಾಹು ಬಂಧನದಲಿಹೊದ್ದ ಒಲವ ಕಂಬಳಿ ಹರಿದಿಲ್ಲ ಸಾವೇ ದೂರವಿರು ಮೋಹನ ಮುರಳಿ ಗಾನಕೆ ಮನ ಸೋತು ಬಂದೆ ನದಿ ತಟಕೆಹೃದಯ ತಣಿಸುವ ಮಾತು ಮುಗಿದಿಲ್ಲ ಸಾವೇ ದೂರವಿರು ತಾಮಸದ ಕರಿ ನೆರಳು ಕರಗಿ ಅರಿವಿನ”ಪ್ರಭೆ” […]
ಕಾಯಕದ ಮಹತ್ವ.
ಲೇಖನ ಕಾಯಕದ ಮಹತ್ವ. ಜಯಶ್ರೀ ಭ.ಭಂಡಾರಿ. ದಾಸೋಹ ಕಾಯಕವೆಂಬ ನಾಣ್ಯದ ಇನ್ನೊಂದು ಮುಖ.ಸಮಾಜದಲ್ಲಿ ಸಂಪತ್ತು ಉತ್ಪತ್ತಿಯಾಗಲು ಸತ್ಯಶುದ್ಧ ಕಾಯಕ ಬೇಕು.ಆದರೆ,ಸಂಪತ್ತು ಕೇಂದ್ರೀಕತವಾದರೆ ಎಲ್ಲಾ ಬಗೆಯ ಅಸಮಾನತೆಗಳು ಹುಟ್ಟುತ್ತವೆ.ಆದ್ದರಿಂದ ಬಸವಾದಿ ವಚನಕಾರರು ದಾಸೋಹ ತತ್ವವನ್ನು ಆವಿಷ್ಕರಿಸಿ ಆಚರಣೆಯಲ್ಲಿ ತಂದರು.ಅಣ್ಣನವರ ಸುಪ್ರಸಿದ್ಧ ವಚನ “ಕಾಗೆಯೊಂದಗುಳ ಕಂಡಡೆ ಕೂಗಿ ಕರೆಯದೆ ತನ್ನ ಬಳಗವ….”. ಸಮಾಜದಲ್ಲಿ ಸಂಪತ್ತಿನ ವಿತರಣೆಯಾಗಲೇಬೇಕೆಂದು ವಿಧಿಸುವ ನಿಯಮ. ಕಾಯಕ ಸಾರ್ಥಕವಾಗುವದೇ ದಾಸೋಹದಲ್ಲಿ.ಆದ್ದರಿಂದಲೇ “ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ” ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ ಅಣ್ಣ.”ತನು ಮನ ಬಳಲಿಸಿ ತಂದು ದಾಸೋಹ […]
ಅನ್ನದಗಳುಗಳ ಲೆಕ್ಕ..
ಕವಿತೆ ಅನ್ನದಗಳುಗಳ ಲೆಕ್ಕ.. ವಸುಂದರಾ ಕದಲೂರು ಕೈ ಚಾಚಿತು ಒಡಲ ಹಸಿವು, ಅನ್ನದತಟ್ಟೆ ಹಿಡಿದು ಮುಷ್ಠಿ ತುತ್ತಿಗೆ…ಕೈ ಬಿಚ್ಚಿ ಹಾಕಿದರು ಅದರೊಳಗೆ ‘ಕ್ರಾಂತಿ’ ಬೇಕೆಂದು ಸಿಡಿದು ಬೀಳುವ ಹೊಳಪುಅಚ್ಚಿನ ನಾಣ್ಯಗಳನು. ಹಸಿದ ಉದರಕೆ ಓದಲು ಬಾರದು.ತಟ್ಟೆಗೆ ಬಿದ್ದ ಕಹಳೆ ಮೊರೆತದನಾಣ್ಯಗಳು ಕ್ರಾಂತಿಯ ಶ್ವೇತಪತ್ರಓದಿಸಲು ಪೈಪೋಟಿಗೆ ಬಿದ್ದವು.. ಅನ್ನ ಸಿಗುವ ಭರವಸೆಯಿದ್ದ, ತಟ್ಟೆಗೆಬೀಳುವ ಅಗುಳಿನ ಸದ್ದಿಗೆ ಕಾದವರು;ಕೆಂಪು ಉರಿ ಬೆಳಗಿನಲಿ ಉರಿದು, ಸಂಜೆ ಕಪ್ಪಿನಲಿ ನಿಧಾನ ಕರಗಿ, ನಾಳೆಯಾದರೂಹೊಟ್ಟೆ ತುಂಬುವ ಅನ್ನದಗುಳುಗಳ ಕನಸುಕಾಣುತ್ತಾ… ಎವೆಗಳನು ಮುಚ್ಚುತ್ತಿದ್ದರು. ಕಿವುಡು ಕಿವಿಗಳಿಗೆ […]
ಜಾಲತಾಣಗಳಿಂದ ಮಹಿಳೆಯರಿಗೆ ಹೆಚ್ಚಿದ ಅವಕಾಶ ಮಾಲಾ ಅಕ್ಕಿಶೆಟ್ಟಿ ಎಲ್ಲೋ ಇದ್ದವರನ್ನು ಇಲ್ಲೇ ಇದ್ದಾರೆನ್ನುವಂತೆ ಮಾಡುವ ಮೋಡಿ ಈ ಜಾಲತಾಣಗಳಿಗಿದೆ. ಹಳೆಯ ಕಾಲವೇ ಕಣ್ಮರೆಯಾಗಿ, ಆಧುನಿಕದ ಹೊಸತಿಗೆ ತುಸು ಜಾಸ್ತಿನೇ ಹೊಂದಿಕೊಂಡ ಮನುಷ್ಯ, ಅನುಕೂಲಕ್ಕಾಗಿ ತನಗೆ ಬೇಕಾದ್ದನ್ನೆಲ್ಲಾ ಬಳಸಿಕೊಂಡು ಜಗತ್ತನ್ನು ಸಮೀಪದಿಂದಲೇ ಆನಂದಿಸುತ್ತಿದ್ದಾನೆ. ಹೊಸದರ ಅಳವಡಿಕೆ ಖುಷಿ ನೀಡಿದೆ. ಏಕಕಾಲದಲ್ಲೇ ಆಗುತ್ತಿರುವ ಹೊಸ ಹೊಸ ಆ್ಯಪ್ ಗಳ ಆವಿಷ್ಕಾರ ಹಾಗೂ ಇಂಟರ್ನೆಟ್ ಸೌಲಭ್ಯ ಎಲ್ಲರಿಗೂ ಅವುಗಳ ಉಪಯೋಗಕ್ಕೆ ಮಾಯಾ ಕೊಂಡಿಯನ್ನು ನಿರ್ಮಿಸಿದೆ. […]