ಗಮ್ಯದಾಚೆ

ಗಮ್ಯದಾಚೆ

ಕವಿತೆ ಗಮ್ಯದಾಚೆ ವಿಜಯಶ್ರೀ ಹಾಲಾಡಿ ಧೂಪ. ಹಿಡಿದು ಊರಿಡೀಘಮಲು ಹತ್ತಿಸುತ್ತಅಲೆವ ಅವಳಕೋಮಲ ಪಾದಕ್ಕೆತುಂಬು ಹೆರಳ ಗಂಧಕ್ಕೆಜೀವವಿದೆ. ….ಮಣ್ಣಿನಂತೆ ನೀರಿನಂತೆಕಡಲು -ಗಾಳಿಯಂತೆ ನಾರಿನ ಬೇರು ಅರೆಯುತ್ತಅರೆಮುಚ್ಚಿದ ಕಣ್ಣೆವೆಆಳದ ಹೊಳಪಿನೊಂದಿಗೆಮಾತಿಗಿಳಿಯುತ್ತಾಳೆತುಟಿ ಲಘು ಕಂಪಿಸುತ್ತವೆಅವಳ ಮೈಮಾಟಕ್ಕೆಚಿರ ಯೌವನಕ್ಕೆಮಿಂಚುಹುಳುಗಳ ಮಾಲೆ-ಯೇ ಕಾಣ್ಕೆಯಾಗುತ್ತದೆ. ಸಂಜೆಸೂರ್ಯನ ಬೆವರೊರೆಸಿಮನೆಗೆ ಹೆಜ್ಜೆಹಾಕುವ ನನ್ನಕಂಡು ಅವಳ ಕಾಲ್ಗೆಜ್ಜೆನಸು ಬಿರಿಯುತ್ತವೆಗುಡಾರದೊಳಗಿಂದ ತುಸುಬಾಗಿದ ಅವಳ ಸ್ಪರ್ಶಕ್ಕೆದಿನವೂ ಹಾತೊರೆಯುತ್ತೇನೆಗುನುಗಿಕೊಳ್ಳುವ ಹಾಡೆಂಬನೀರವಕ್ಕೆ ಪದವಾಗುತ್ತೇನೆ‘ಲಾಟೀನು ಬೆಳಗುವುದೇಕೆಇವಳೇ ಇಲ್ಲವೇ ‘ ಎಂದುಫಕ್ಕನೆ ತಿರುಗುವಾಗೊಮ್ಮೆಗುಡುಗುಡಿಯ ಸೇದಿನಿರುಮ್ಮಳ ಹೀರುತ್ತಾಳೆಒದ್ದೆಮಳೆಯಾದ ನಾನುಛತ್ರಿ ಕೊಡವುತ್ತ ಕೈಚಾಚಿದರೆ ತುಸುವೇನಕ್ಕುಬಿಡುತ್ತಾಳೆ.ಡೇರೆಯೊಳಗಿನ ಮಿಶ್ರಘಮಕ್ಕೆ ಸೋತು ಅವಳಅಲೆ ಅಲೆ ಸೆರಗ […]

ಶಿಶುತನದ ಹದನದೊಳು ಬದುಕಲೆಳಸಿ

ಪ್ರಬಂಧ ಶಿಶುತನದ ಹದನದೊಳು ಬದುಕಲೆಳಸಿ ಡಾ.ಲಕ್ಷ್ಮಿನಾರಾಯಣ ಭಟ್ ಈ ಸುಂದರ ಮುಂಜಾನೆ ನನಗೆ ತುಂಬಾ ಪ್ರಿಯವಾದ ಹಾಡೊಂದರ ಸಾಲುಗಳು ನನ್ನ ಮನ:ಪಟಲದಲ್ಲಿ ಭಾವ ತರಂಗಗಳನ್ನು ಎಬ್ಬಿಸುತ್ತಿವೆ. ನಾನು ಹಾಡುಗಾರನಲ್ಲದಿದ್ದರೂ, ಈ ಸಾಲುಗಳಿಗೆ ದಯವಿಟ್ಟು ಕಿವಿಗೊಡಿ. ನೆನಪಿದೆಯೇ ನಿನಗೆ? ನಾವಿಬ್ಬರೂ ಅಂದು ಹೊಳೆಯ ದಡದಲ್ಲಿ ನಿಂದು ಮರಳು ಮನೆಗಳ ಕಟ್ಟಿ ಆಟವಾಡಿದ್ದು ನಿನಗೆ ನೆನಪಿದೆಯೇ ನಿನಗೆ? ಬಾ ಗೆಳೆಯ ಬಾರಯ್ಯಾ, ಆಟವಾಡೋಣ ಬಾಲ್ಯದ ನೆನಪನು ಮರಳಿ ಕಟ್ಟೋಣ. ನೆನಪಿದೆಯೇ ನಿನಗೆ? ನನಗೆ ಬೇಜಾರಾದಾಗಲೆಲ್ಲಾ ಈ ಸಾಲುಗಳನ್ನು ಗುಣುಗುಣಿಸುತ್ತೇನೆ. ಆಗ […]

ಕಾವ್ಯಯಾನ

ಅಳುತ್ತಿರಬೇಕು ಅವನು! ಪುರುಷೋತ್ತಮ ಭಟ್ ಕೆ ನಿಯಾಮಕನೆಲ್ಲಿದ್ದಾನೆ,ತಿರುಗಿನಿಂತಿದ್ದಾನೆಬೆನ್ನು ತೋರಿಸಿದ್ದಾನೆತನ್ನದೇ ಸೃಷ್ಟಿಯ ದುರಂತ ಕಾಣಲಾಗದೆಅಳುತ್ತಿರಬೇಕು ಪಾಪ ತುಂಬಿದ ಕೊಡವ ಏನುಮಾಡೋಣವೆಂದು/ ಆಲಯಗಳ ಕಲ್ಲು-ಸಂದುಗಳಲ್ಲಿಕೆತ್ತಿದ ಕೆಡವಿದ ಹೆಸರುಗಳೆಷ್ಟುಹಾಸಿಗೆಗೆಳೆದು ಚೀರಾಡಿಸಿ ಗೋಳಾಡಿಸಿದ ಕಥೆಗಳೆಷ್ಟುಪರರ ಕಿಸೆಯೊಳಗಿನ ದ್ರವ್ಯದಾಸೆಗೆ ಧಮನಿಯ ಕೊಯ್ದವರೆಷ್ಟುಅಳುತ್ತಿರಬೇಕು ಬೆನ್ನು ಕಾಣಿಸುತ್ತಿದೆ ಬೆಣ್ಣೆಯಲಾಡಿದವನ/ ಕವಾಟುಗಳೊಳಗೆ ಪೇರಿಸಿಟ್ಟ ಹೊತ್ತಗೆಗಳಿಗೆ ತುಂಬಿದೆ ಧೂಳುತುಳುಕುವ ಮಾನಪತ್ರಗಳನ್ನು ಆಪೋಶನಗೈಯ್ಯುತ್ತಿವೆ ಗೆದ್ದಲುವಿದ್ಯಯಾಚೆಯ ಬುದ್ದಿ, ವಿವೇಕ ಪಾತಾಳಕೆಹೆಣ್ಣು-ಹೆಸರುಗಳ ಬಾಂಡಲೆಯ ಹೊತ್ತು ಸಾಗುತ್ತೇವೆಅಳುತ್ತಿರಬೇಕು ಬೆನ್ನಷ್ಟೇ ಕಾಣಿಸುತ್ತಿದೆನವಿಲಗರಿ ಮುರಿದು ಮುಪ್ಪಾಗಿದೆ/ ಪೂಜೆ-ಪ್ರಾರ್ಥನೆ ಆಡಂಬರಒಳಗೆಲ್ಲ ಕೊಳಕು-ದಿಗಂಬರಪ್ರಚಾರದ ಪ್ರವಚನಹುಡುಕುತ್ತಿದ್ದಾನೆ ತನ್ನಸೃಷ್ಟಿಯಊನ ಕಳೆಯಲು ದಾರಿ ಮಹಾಮಳೆ, ಕೇಳರಿದ […]

ಯಾಕೀ ಪುನರುಕ್ತಿ? ಅಭಿಮಾನಿ ಓದುಗರೊಬ್ಬರು ಪತ್ರ ಬರೆದು ತಮ್ಮ ಪ್ರತಿಕ್ರಿಯೆ ತಿಳಿಸಲು ನನ್ನ ಫೋನ್ ನಂಬರ್ ಕೇಳಿದರು. ಕೊಟ್ಟದ್ದು ತಪ್ಪಾಯಿತು. ಅವರು ಯಾವಾಗೆಂದರೆ ಆವಾಗ ಸಣ್ಣಸಣ್ಣ ವಿಚಾರಕ್ಕೆಲ್ಲ ಕರೆಯಲಾರಂಭಿಸಿದರು. ಪ್ರತಿಸಲವೂ ಅರ್ಧ ತಾಸು ಕಮ್ಮಿಯಿಲ್ಲದ ಮಾತು. ನಿಜವಾದ ಸಮಸ್ಯೆ ಸಮಯದ್ದಾಗಿರಲಿಲ್ಲ. ಅವರು ಒಂದೇ ಅಭಿಪ್ರಾಯವನ್ನು ಬೇರೆಬೇರೆ ಮಾತುಗಳಲ್ಲಿ ಹೇಳುತ್ತಿದ್ದರು. ಸೂಚ್ಯವಾಗಿ ಹೇಳಿನೋಡಿದೆ. ಮುಟ್ಟಿದಂತೆ ಕಾಣಲಿಲ್ಲ. ಫೋನು ಎತ್ತಿಕೊಳ್ಳುವುದನ್ನು ನಿಲ್ಲಿಸಿದೆ. ಕಡೆಗೆ ನಂಬರ್ ಬ್ಲಾಕ್ ಮಾಡಬೇಕಾಯಿತು. ಮತ್ತೊಬ್ಬ ನಿವೃತ್ತ ಶಿಕ್ಷಕರು ಸಜ್ಜನರು ಹಾಗೂ ಶಿಷ್ಯವತ್ಸಲರು. ಹಿಂದೆಂದೊ ನಡೆದದ್ದನ್ನು ಇಸವಿ […]

ಲಲಿತ ಪ್ರಬಂಧ

ಹಲಸಿನ ಕಡುಬು. ಶೀಲಾ ಭಂಡಾರ್ಕರ್ ನಮ್ಮೂರ ಕಡೆ ಹಲಸಿನ ಹಣ್ಣಿನ ಕಾಲದಲ್ಲಿ ಹಲಸಿನ ಹಣ್ಣಿನಿಂದ ಬಗೆ ಬಗೆಯ ಖಾದ್ಯಗಳನ್ನು ಮಾಡುತ್ತಾರೆ. ಹಪ್ಪಳ, ಚಿಪ್ಸ್, ದೋಸೆ, ಕಡುಬು, ಮುಳಕ, ಪಾಯಸ.. ಇನ್ನೂ ಎಷ್ಟೋ ಬಗೆ. ಅದರಲ್ಲಿ ಹಲಸಿನ ಕಡುಬು ನನಗೆ ಪಂಚಪ್ರಾಣ.ಅಕ್ಕಿಯನ್ನು ನೆನೆಸಿ, ತೆಂಗಿನ ತುರಿ, ಬೆಲ್ಲ, ಬಿಡಿಸಿದ ಹಲಸಿನ ತೊಳೆಯ ಜತೆ ತರಿ ತರಿಯಾಗಿ ರುಬ್ಬಿ ತೇಗದ ಎಲೆಯಲ್ಲಿ, ಕೆಂಡ ಸಂಪಿಗೆ ಎಲೆಯಲ್ಲಿ, ಅಥವಾ ತಟ್ಟೆಯಲ್ಲಿಟ್ಟು, ಹಬೆಯಲ್ಲಿ ಬೇಯಿಸಿ ಮಾಡುವ ಕಡುಬು.. ಆಹಾ..!!! ಘಮ್ ಅಂತ ನಾಲ್ಕೂ […]

ಪುಸ್ತಕ ಸಂಗಾತಿ

ಕವಿ ಶಿವಪ್ರಕಾಶ ಅವರ ಚೈತನ್ಯದ ಚಿಲುಮೆಯಾದ ಅಕ್ಕರೆಯ ಮಗಳು “ನೇರಿಶಾ”ಳ ಬಗೆಗೆ ಹೊಂದಿದ ಅಪಾರ ನಿರೀಕ್ಷೆ, ಭರವಸೆ, ವಾತ್ಸಲ್ಯ ಇಲ್ಲಿ ಕಾಣಬಹುದು.

ಅನುವಾದಿತ ಕೃತಿ ಪ್ರಪಂಚ ಪ್ರವೇಶ ಮೊದಲ ನುಡಿ ಅನುವಾದವೆಂಬ ಪದದ ಸರಿಯಾದ ಅರ್ಥ ತಿಳಿಯದವರು ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಎರಡು ಭಾಷೆಗಳು ತಿಳಿದಿದ್ದರೆ ಸಾಕು ಅನುವಾದ ತಾನೇ ತಾನಾಗಿ ಆಗುತ್ತದೆ ಎಂದು ತಿಳಿಯುವವರಿದ್ದಾರೆ. ಅನುವಾದವೆಂದರೆ ಅದೊಂದು ಯಾಂತ್ರಿಕವಾದ ಕೆಲಸವೆಂದು ಹೇಳುವವರಿದ್ದಾರೆ. ಮನುಷ್ಯನ ಬದುಕಿನಲ್ಲಿ ಭಾಷೆಯ ಮಹತ್ವವೇನು, ಅನುವಾದದ ಮಹತ್ವವೇನು, ಅನುವಾದಕ/ಕಿಯಲ್ಲಿ ಇರಬೇಕಾದ ಪ್ರತಿಭೆಯೇನು, ಪಾಂಡಿತ್ಯವೇನು, ಗುಣಗಳೇನು, ಸೃಜನಶೀಲತೆಯೇನು-ಈ ಯಾವುದರ ಗೊಡವೆಯೂ ಇಲ್ಲದೆ ಸಾಹಿತ್ಯಲೋಕದಲ್ಲಿ ಅನುವಾದಕರಿಗೆ ಮೂಲ ಲೇಖಕರ ನಂತರದ ಸ್ಥಾನ ಕೊಡುವ ಹುನ್ನಾರ ಎಂದಿನಿಂದಲೂ ನಡೆಯುತ್ತಲೇ […]

ಅನುವಾದ ಸಂಗಾತಿ

ಗುರ್ ಮೆಹರ್ ಅಂತರಂಗ ಕನ್ನಡ ಮೂಲ: ಶೋಭಾ ಹೀರೆಕೈ ಇಂಗ್ಲೀಷಿಗೆ: ಸಮತಾ ಆರ್ ಗುರ್ ಮೆಹರ್ ಅಂತರಂಗ ಅವರಿವರ ಬಂದೂಕ ತುದಿಯಲ್ಲಿಹೂವಿನ ಮೊನಚಿತ್ತೇ?ಇಲ್ಲವಲ್ಲಮತ್ತೇಯುದ್ಧವನ್ನು ಯುದ್ಧವಲ್ಲದೆಇನ್ನೇನನ್ನಲಿ? ಯಾವ ಕಣಿವೆ ಬದುಕಿಸುವುದುನಾ ಕಳಕೊಂಡವಾತ್ಸಲ್ಯವನ್ನು ?ಯಾವ ಕುರ್ಚಿಯ ಬಳಿಕೇಳಲಿ ನ್ಯಾಯ? ಬೇಕೇ?ನಮ್ಮ ಬಿಸಿ ರಕ್ತಕೂಕೊಳಚೆಯ ಗಬ್ಬುಕಪ್ಪು -ಕೇಸರಿಗಳ ಜಿದ್ದಾ ಜಿದ್ದು ಬಣ್ಣದ ಮೇಲೂ ರಾಡಿಯಎರಚುತಿರುವವರಾರೋ?ಈಚೆಗಿರುವುದೇ ಅಚೆಆಚೆಗಿರುವುದೇ ಈಚೆಈಚೆ ಅಚೆಗಳಾಚೆಅದೇ ಮಣ್ಣು ,ಅದೇ ನೀರುಅದೇ ಗಂಧ, ಅದೇ ಗಾಳಿರಕ್ತ ಬೇರೆಯೇ ‌ಮತ್ತೆ? ಬೇಕೆ ಯುದ್ಧ?ನನ್ನಂಥ ತಬ್ಬಲಿಗಳ ಕೇಳಿ ಹೇಳು ಅಶೋಕ‘ಕಳಿಂಗ’ ನಿನ್ನ ಕಾಡಿದಂತೆ‘ಕಾರ್ಗಿಲ್ […]

ಕಾವ್ಯಯಾನ

ತೆರವುಗೊಳಿಸಿದ್ದು ಡಾ.ಗೋವಿಂದಹೆಗಡೆ ಆ ವಿಶಾಲ ಮೂಲೆ ನಿವೇಶನವನ್ನುತೆರವುಗೊಳಿಸಲಾಯಿತುತ್ರಿಭುಜದಂತಿರುವ ಸೈಟು. ಎರಡು ಕಡೆರಸ್ತೆ. ವಿಶಾಲ ಹಳೆಯ ಮನೆಒತ್ತಾಗಿ ಬೆಳೆದ ಹಲವು ಗಿಡ ಬಳ್ಳಿಹೂವು ಚಿಗುರು ಮೊದಲುಮಲ್ಲಿಗೆ ಹಂಬು ನಂದಿಬಟ್ಟಲುಗುಲಾಬಿ ದಾಸವಾಳ ಕ್ರೋಟನ್‌ಗಳಿಗೆಮುಕ್ತಿ ಸಿಕ್ಕಿದ್ದು. ಮರುದಿನ ಮನೆ ಬಿದ್ದುಗುಪ್ಪೆ ಮಣ್ಣು, ಸೊಟ್ಟ ತಂತಿಗಳಅಸ್ಥಿಪಂಜರ. ನಾಲ್ಕು ದಿನ ಕಳೆದಾಗ ಹಸಿರೇ ಮೈಯಾಗಿದ್ದಮಾವು ಮಾಯ. ಹಬ್ಬದ ಈ ದಿನಗಳಲ್ಲಿಪುಕ್ಕಟೆ ಸೊಪ್ಪು ಸಿಕ್ಕ ಸಂಭ್ರಮದ ನೆರೆ.ಅವರಿವರ ತೋರಣ, ಮಂಟಪಗಳಲ್ಲಿ ಖುಷಿಸಿರಬಹುದೇಮಾವಿನ ಚಿಗುರು,ಬಾಡುವ ಮುನ್ನ ಇಂದುಅಂಚುಗಳಲ್ಲಿ ಕಾವಲಿಗೆ ಎಂಬಂತೆನಿಂತಿದ್ದ ಹತ್ತಾರುತೆಂಗಿನ ಮರಗಳು ನೆಲ ಕಂಡವುಅಳತೆ ಮಾಡಿ […]

ಗಝಲ್

ಗಝಲ್ ರೇಮಾಸಂ ಎದೆಯ ಗೂಡಲಿ ಅವಿತಿರು ಕಾಣದಂತೆ ಯಾರಿಗೂಸಣ್ಣದನಿಲಿ ಹಾಡುತಿರು ಕೇಳಿಸದಂತೆ ಯಾರಿಗೂ ಒಪ್ಪಿದ ಮನಗಳ ಆಳವನು ಇವರಾರು ಅರಿಯರುಕಣ್ಣ ಸನ್ನೆಯಲಿ ಕರೆಯದಿರು ಎಂದಿನಂತೆ ಯಾರಿಗೂ ಲೋಕವು ಹುಚ್ಚನೆಂದು ಕೂಗಿದರೂ ಕೊರಗದಿರುಬೆಸುಗೆಯಲಿ ಹೆದರದಿರು ಬೆಪ್ಪನಂತೆ ಯಾರಿಗೂ ಇಂದು ಇರುವಿಕೆಯನು ತೋರಬೇಕಾಗಿದೆ ಜಗಕೆಬಂಧನದಲಿ ನೀ ಬೆಳಗುತಿರು ಸುಡದಂತೆ ಯಾರಿಗೂ ಬಳಲದಿರು ಪ್ರೇಮವಿರದ ಬಿರುಸಿನ ಗಡಸು ನುಡಿಗಳಿಗೆತಾಯಿ ಮಡಿಲಲಿ ಒರಗಿರು ಬೇಸರಿಸದಂತೆ ಯಾರಿಗೂ *****************

Back To Top