ಗುರ್ ಮೆಹರ್ ಅಂತರಂಗ
ಕನ್ನಡ ಮೂಲ: ಶೋಭಾ ಹೀರೆಕೈ
ಇಂಗ್ಲೀಷಿಗೆ: ಸಮತಾ ಆರ್


ಗುರ್ ಮೆಹರ್ ಅಂತರಂಗ
ಅವರಿವರ ಬಂದೂಕ ತುದಿಯಲ್ಲಿ
ಹೂವಿನ ಮೊನಚಿತ್ತೇ?
ಇಲ್ಲವಲ್ಲ
ಮತ್ತೇ
ಯುದ್ಧವನ್ನು ಯುದ್ಧವಲ್ಲದೆ
ಇನ್ನೇನನ್ನಲಿ?
ಯಾವ ಕಣಿವೆ ಬದುಕಿಸುವುದು
ನಾ ಕಳಕೊಂಡ
ವಾತ್ಸಲ್ಯವನ್ನು ?
ಯಾವ ಕುರ್ಚಿಯ ಬಳಿ
ಕೇಳಲಿ ನ್ಯಾಯ?
ಬೇಕೇ?
ನಮ್ಮ ಬಿಸಿ ರಕ್ತಕೂ
ಕೊಳಚೆಯ ಗಬ್ಬು
ಕಪ್ಪು -ಕೇಸರಿಗಳ ಜಿದ್ದಾ ಜಿದ್ದು
ಬಣ್ಣದ ಮೇಲೂ ರಾಡಿಯ
ಎರಚುತಿರುವವರಾರೋ?
ಈಚೆಗಿರುವುದೇ ಅಚೆ
ಆಚೆಗಿರುವುದೇ ಈಚೆ
ಈಚೆ ಅಚೆಗಳಾಚೆ
ಅದೇ ಮಣ್ಣು ,ಅದೇ ನೀರು
ಅದೇ ಗಂಧ, ಅದೇ ಗಾಳಿ
ರಕ್ತ ಬೇರೆಯೇ ಮತ್ತೆ?
ಬೇಕೆ ಯುದ್ಧ?
ನನ್ನಂಥ ತಬ್ಬಲಿಗಳ ಕೇಳಿ
ಹೇಳು ಅಶೋಕ
‘ಕಳಿಂಗ’ ನಿನ್ನ ಕಾಡಿದಂತೆ
‘ಕಾರ್ಗಿಲ್ ‘ ನನ್ನ ಕಾಡುತ್ತ
ಯುದ್ಧವನ್ನು ಯುದ್ಧವೆನ್ನದೆ
ಇನ್ನೇನನ್ನಲಿ?
—–
(ಗುರ್ ಮೆಹರ್: ಕಾರ್ಗಿಲ್ ಯುದ್ಧದಲ್ಲಿ ತಂದೆಯನ್ನು ಕಳೆದುಕೊಂಡು ಅನಾಥಳಾದ ಮಗಳು)
Quest of Gur Mehr..
Did the tips of theirs and our guns
Have the sharpness of a petal?
No..never..
Then what else can I call
A war other than a war?
Which valley will revive
The affection that I lost
Which chair shall I approach for just?
Do we need the stench of the sewage
Fight of the black and saffron
To taint our fresh warm blood?
Who is throwing slime on even the colours
Whatever is here, it’s also there,
Whatever is there it’s also here,
Beyond here and there
Soil, water,odour and air, are all same,
Then how can the blood be different?
Need a war?
Ask orphans like me.
Tell me Ashoka
Just like Kalinga haunted you
Will the Kargil haunt me..
What else can I call a war
Other than a War…
***********************************************
Thanks to both Shobha and Sangaathi..
ಚೆಂದದ ಕವಿತೆ ಮತ್ತು ಸಮರ್ಥವಾದ ಅನುವಾದ.ಇಬ್ಬರಿಗೂ ಅಭಿನಂದನೆಗಳು.
ಕವಯಿತ್ರಿ ಶೋಭಾ ಕವಿತೆಗಳಲ್ಲಿ ತಾಯ್ತನ ಎದ್ದು ಕಾಣುತ್ತದೆ. ಯುದ್ಧ ವಿರೋಧಿ ನಿಲುವನ್ನು ಅತ್ಯಂತ ಪ್ರಬಲವಾಗಿ ಗುರ್ ಮೆಹರಳ ಅಂತರಂಗ ಕವಿತೆಯಲ್ಲಿ ಕಟ್ಟಿಕೊಟ್ಟವರು. ಹಾಗಾಗಿ ಕನ್ನಡದ ಕಾವ್ಯ ಲೋಕದ ಮಹಿಳಾ ಲೇಖಕಿಯರಲ್ಲಿ ಭಿನ್ನವಾಗಿ ನಿಲ್ಲುತ್ತಾರೆ. ಅವರ ಅವ್ವ ಮತ್ತು ಅಬ್ಬಲಿಗೆ ಕೃತಿಯಿಂದ ಒಂದು ಕವಿತೆಯನ್ನು ಶಿಕ್ಷಕಿ, ಅನುವಾದಕಿ ಸಮತಾ ಅವರು ಸಂಗಾತಿ ಬ್ಲಾಗ್ ಗಾಗಿ ಅನುವಾದಿಸಿದ್ದಾರೆ. ಕನ್ನಡ ಭಾಷೆಯ ಬನಿ ಮತ್ತು ಧ್ವನಿ ಇಂಗ್ಲಿಷ್ ಕಾವ್ಯ ಓದುಗರಿಗೆ ದಕ್ಕುವಂತೆ ಸಮರ್ಥ ವಾಗಿ ಅನುವಾದಿಸಿದ್ದಾರೆ. ಸಮತಾ ಅವರಿಗೆ, ಸಂಗಾತಿ ಸಂಪಾದಕರಿಗೆ ಅಭಿನಂದನೆಗಳು. ಕಾವ್ಯದ ಮೂಲಕ ಯುದ್ಧ ವಿರೋಧಿ ನಿಲುವು ತಳೆದ ಶೋಭಾ ಅವರಿಗೂ ಅಭಿನಂದನೆಗಳು..
ಧನ್ಯವಾದಗಳು. ಕವಿತೆಯನ್ನು ಅನುವಾದಿಸಿದ ಸಮತಾ ಮೇಡಂ ರವರಿಗೂ, , ಮತ್ತು ಪ್ರಕಟಿಸಿದ ಸಾಹಿತ್ಯ ಸಂಗಾತಿ ಬಳಗಕ್ಕೂ ಪ್ರೀತಿಯ ವಂದನೆಗಳು. ಪ್ರತಿಕ್ರಿಯಿಸಿದ, ಗೆಳತಿ ಸ್ಮಿತಾ ಮತ್ತು ನಾಗರಾಜ್ ಹರಪನಹಳ್ಳಿ ಸರ್ ರವರಿಗೂ ವಂದನೆಗಳು
ಮೂಲ ಕವನ ಜಗತ್ತಿನಲ್ಲಿ ಶಾಂತಿಯ ಅನಿವಾರ್ಯತೆ ಎತ್ತಿ ತೋರಿಸಿದೆ ಯುದ್ಧ ಪ್ರತಿಷ್ಠೆಯ ವಿಷಯವಲ್ಲ ಎಂಬುದನ್ನು ಅಭಿವ್ಯಕ್ತಗೊಂಡಿದೆ. ಸಮತಾರವರ ಅನುವಾದ ಮೂಲ ಆಶಯವನ್ನು ಸಮರ್ಥವಾಗಿ ವ್ಯಕ್ತಪಡಿಸಿದೆ