ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

ರೇಮಾಸಂ

ಎದೆಯ ಗೂಡಲಿ ಅವಿತಿರು ಕಾಣದಂತೆ ಯಾರಿಗೂ
ಸಣ್ಣದನಿಲಿ ಹಾಡುತಿರು ಕೇಳಿಸದಂತೆ ಯಾರಿಗೂ

ಒಪ್ಪಿದ ಮನಗಳ ಆಳವನು ಇವರಾರು ಅರಿಯರು
ಕಣ್ಣ ಸನ್ನೆಯಲಿ ಕರೆಯದಿರು ಎಂದಿನಂತೆ ಯಾರಿಗೂ

ಲೋಕವು ಹುಚ್ಚನೆಂದು ಕೂಗಿದರೂ ಕೊರಗದಿರು
ಬೆಸುಗೆಯಲಿ ಹೆದರದಿರು ಬೆಪ್ಪನಂತೆ ಯಾರಿಗೂ

ಇಂದು ಇರುವಿಕೆಯನು ತೋರಬೇಕಾಗಿದೆ ಜಗಕೆ
ಬಂಧನದಲಿ ನೀ ಬೆಳಗುತಿರು ಸುಡದಂತೆ ಯಾರಿಗೂ

ಬಳಲದಿರು ಪ್ರೇಮವಿರದ ಬಿರುಸಿನ ಗಡಸು ನುಡಿಗಳಿಗೆ
ತಾಯಿ ಮಡಿಲಲಿ ಒರಗಿರು ಬೇಸರಿಸದಂತೆ ಯಾರಿಗೂ

*****************

About The Author

Leave a Reply

You cannot copy content of this page

Scroll to Top