Month: September 2021

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—42 ಆತ್ಮಾನುಸಂಧಾನ ಅಂಕೋಲೆಯ “ಕರ್ನಾಟಕ ಸಂಘ” ಮತ್ತು ನಾನು ೧೯೫೦ ರ ದಶಕದ ಆರಂಭದಲ್ಲಿಯೇ ಹುಟ್ಟಿ ಅಂಕೋಲೆಯ ಸಾಮಾಜಿಕ ಪರಿಸರದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆರಂಭಿಸಿದ ಅಂಕೋಲೆಯ “ಕರ್ನಾಟಕ ಸಂಘ” ವೆಂಬ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಯು ನನ್ನಂಥ ಹಲವರಿಗೆ ಸಾಂಸ್ಕೃತಿಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ವೇದಿಕೆಯಾದದ್ದು ಅಂಕೋಲೆಯ ಇತಿಹಾಸದಲ್ಲಿಯೇ ಒಂದು ಅಭೂತಪೂರ್ವ ಕಾಲಾವಧಿ ಎನ್ನಬಹುದು. ೧೯೫೨ ರಲ್ಲಿ ಸ್ಥಾಪನೆಗೊಂಡು ಅಂಕೋಲೆಯ ಸಾಹಿತ್ಯ-ಕಲೆ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ ಸಹಸ್ರಾರು ಜನರ ಆಶೋತ್ತರಗಳನ್ನು […]

ನಮ್ಮ ನಡುವಿನ ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ‌.

ಓದುಗನು ಮಾಡಿದ ಸತ್ಕಾರ.

ಕುರ್ಚಿಯಿಂದ ಎದ್ದು ಒಮ್ಮೆ ಮೈ ಮುರಿದುಕೊಂಡೆ. ಎರಡು ಹೆಜ್ಜೆ ಆಚೆ ಈಚೆ ನಡೆದರೆ ಮೈ ಹಗುರವಾಗುತ್ತದೆ ಎನಿಸಿ ಎರಡು ಹೆಜ್ಜೆ ಹಾಕಿ ಕಿಟಿಕಿಯ ಹತ್ತಿರ ನಿಂತುಕೊಂಡೆ. ದೂರದ ಕಡಲ ಮೇಲಿಂದ ಗಾಳಿ ಬೀಸುತ್ತಿತ್ತು. ವಿಶಾಖ ಸುಂದರಿ ವಜ್ರವೈಢೂರ್ಯಗಳಿಂದ ಅಲಂಕರಿಸಿಕೊಂಡವಳ ಹಾಗೆ, ಬೀದಿ ದೀಪಗಳ ತೋರಣಗಳಿಂದ ಮೆರೆಯುತ್ತಿದ್ದಳು

ಭಾವ ಜೀವಿ ಕಂಡ ಬಾಲ್ಕನಿಯ ನೋಟ- ಬಾಲ್ಕನಿ ಕಂಡ ಕವಿತೆಗಳು

ಪ್ರತಿಯಿರುಳು ಬೆಳದಿಂಗಳಾತ” ಈ ನುಡಿಯಲ್ಲಿ ತನ್ನೊಲವ ಪಡೆದ ಅವನನ್ನು ತಂಪು ಬೆಳದಿಂಗಳಿಗೆ ಹೋಲಿಸಿ ತನ್ನೆದೆಯ ಶುಭ್ರ ಮುಗಿಲನ್ನು ಆತ ಆವರಿಸಿಕೊಂಡ ಬಗೆಯನ್ನು ರಮ್ಯವಾಗಿಸಿದ್ದಾರೆ ವಿಭಾ. ಇಂತಹ ಮೋಹಕ ಕವಿತೆಗಳ ಜೊತೆಗೆ ಜೀವನದ ನೈಜ ವಾಸ್ತವತೆಯನ್ನು ಕಟ್ಟಿಕೊಡುವ ಕೆಲವು ಕವಿತೆಗಳು ಈ ಸಂಕಲನದಲ್ಲಿ ಕಾಣಸಿಗುತ್ತವೆ.

ಕೆಲವೊಮ್ಮೆ ವೈಯಕ್ತಿಕ ದ್ವೇಷಕ್ಕೂ ಸಾಕು ಪ್ರಾಣಿಗಳು ಬಲಿಯಾಗುತ್ತವೆ. ವಿಷ ಉಣಿಸಿಯೋ, ಅಪಘಾತ ಮಾಡಿಸಿಯೋ ಕೊಲ್ಲುವುದು ಮನುಷ್ಯರಾದವರು ಮಾತ್ರ ಮಾಡಬಹುದಾದ ನೀಚ ಕ್ರಿಯೆ. ಮತ್ತೆ ಕೆಲವು ಕಡೆ ತಮಗೆ ಆಗದವರ ಮೇಲೆ ನಾಯಿಗಳನ್ನು ‘ಚೂ..’ ಬಿಟ್ಟು ಕಚ್ಚಿಸುವುದೂ ಉಂಟೆಂಬ ವಿಷಯ ಗೊತ್ತಾದಾಗ ಭಯವಾಗುತ್ತದೆ.

ಮಿರಗಿನ ಮಳೆ

ಜಮೀನು ಕೆಲಸವೆಲ್ಲ ಅನುಭವಕ್ಕೆ ಇಲ್ಲದ್ದು .ಕೂಲಿ ಆಳಿಟ್ಟು ಕಳೆ ತೆಗೆದು ಹದ ಮಾಡೋಣವೆಂದರೆ ದಿನಗೂಲಿ ಮೂನ್ನುರು ರೂಪಾಯಿ,ಅದನ್ನ ಎಲ್ಲಿಂದ ಹುಟ್ಟು ಹಾಕೋದು? ನಾವೇ ಮಾಡಿದರಾಯಿತು…ಕಂದ್ಲಿ,ಸಲಿಕೆ,ಗುದ್ಲಿ,ಹಿಡಿದು ನಿಂತರೆ ಮುಂದೆ ಕಳೆ ತೆಗೆದು ಮುಗಿಸುವದರಲ್ಲಿ ಹಿಂದೆ ಬೆಳೆದು ನಿಲ್ಲುತ್ತೆ.ಇದ್ದಕ್ಕಿದ್ದಂತೆ ಕೃಷಿ ಕೆಲಸ ಬಾರದ್ದು,ಒಗ್ಗದ್ದು,ತಿಳಿಯದು…ಕಲಿತು ಕೃಷಿ ನೆಟ್ಟು ಬೆಳೆ ಕೊಯ್ದು ಉಂಬೋವರಿಗೂ ಈಗ ಹೊಟ್ಟೆಗೆ ಎನು ಉಂಬುವುದು? ಹಸಿವಾದ್ರು ಯಾಕೆ ಇಟ್ಟಿದ್ದಾನೆ ಆ ಭಗವಂತ!

ನಾಗರೇಖಾ ಗಾಂವಕರ್ ಹೊಸ ಕವಿತೆ

ಆ ತುಟಿಗಳಲ್ಲಿ ಮೂಡಿದ ಬಿರುಕಿಗೆ
ಗುಡ್ಡಬೆಟ್ಟಗಳು ಕುಸಿಯುತ್ತವೆ
ನೆಲವೊಡೆದು ಲಾವಾ ಉಕ್ಕುತ್ತದೆ

Back To Top