Day: September 1, 2021

ಗಜಲ್

ರಾತ್ರಿ ಮುರುಟಿ ಗಿಡದಿಂದ ಬಿದ್ದ ಸುಮ ಗೊಬ್ಬರವಾಗಿ ಅರಳಿ
ಮೊಗ್ಗಾಗಿ ಕೊಂಬೆಯಲಿ ಕೊನರಿ ಹೂವಾಗೋ ನಾಳೆಗೂ ಕಾದಿದೆ

ಗಜಲ್

ಅಮಾವಾಸ್ಯೆ ಆಭೀಲ ಛಾಯೆಗೆ ಚಂದ್ರ ಮರೆಯಾಗಿರಬಹುದು
ಜಗದಗಲ ನಸುನಗಲು ಶಶಿಗೂ ಕಾಲ ಪಕ್ವವಾಗುತ್ತಿದೆ ಅಂಜಬೇಡ

ಗಜಲ್

ಇರುಳ ಏಕಾಂತವಿಂದು ದುರ್ಭರವೆನಿಸದೇ ಹಿತ ನೀಡಿದೆ
ರಸಘಳಿಗೆಗಳ ಕನಸಲ್ಲೂ ನಾನಿನ್ನು ನೆನೆಯಲಾರೆ ಸಾಕಿ

ತರಹೀ ಎಂಬ ಹೆಜ್ಜೆಯ ನುಡಿಯ ಗೆಜ್ಜೆಯ ದನಿ

ಪುಸ್ತಕ ಸಂಗಾತಿ ತರಹೀಎಂಬಹೆಜ್ಜೆಯನುಡಿಯಗೆಜ್ಜೆಯದನಿ ಹಿರಿಯ ಗಜಲ್ಕಾರರಾದ ‘ಶ್ರೀಮತಿ. ಪ್ರಭಾವತಿ ಎಸ್. ದೇಸಾಯಿ’ ರವರು ಕನ್ನಡ ಗಜಲ್ ಸಾಹಿತ್ಯಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡು, ಹಲವು ಕೃತಿಗಳನ್ನು ರಚಿಸಿ, ಕಿರಿಯರಿಗೆ ಮಾರ್ಗದರ್ಶನ ನೀಡುತ್ತ ಏನಗಿಂತ ಕಿರಿಯರಿಲ್ಲ ಎಂಬ ಶರಣರ ನುಡಿಯಂತೆ ನಡೆಯುತ್ತ,  ಇಳಿವಯಸ್ಸಿನಲ್ಲೂ ಹರೆಯದ ಹುಮ್ಮಸ್ಸು ತೋರುತ್ತ, ಪಕ್ವ ಮನಸ್ಸಿಗೆ ವಯಸ್ಸಿನ ಭೀತಿಯಿಲ್ಲ, ಆಸಕ್ತಿಗೆ  ಎಲ್ಲೆಗಳಿಲ್ಲ ಎಂಬುದನ್ನು “ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ” ಎಂಬ ‘ತರಹೀ ಗಜಲ್’ ಗಳ ಸಂಕಲನವನ್ನು ಹೊರತರುವುದರ ಮುಖಾಂತರ  ಸಾಬಿತು ಪಡಿಸಿದ್ದಾರೆ. “ಮೌನದ ಚೂರಿಯಿಂದಿರಿದು ಮಾಡಿದ […]

ಗಜಲ್

ಕೆಂಪು ದೀಪದ ಕತ್ತಲು ಕೋಣೆ ದುಡಿಮೆ ಆಗುತಿದೆ ಇಂದು
ಹೊತ್ತಿಗೆಯಲ್ಲಿ ಇರುವ ಮೌಲ್ಯಗಳು ಜೀವನದಲ್ಲಿ ಏಕಿಲ್ಲ

ಕಾತ್ಯಾಯಿನಿಯವರಿಗೆ ‘2021 ರ ನಾಗಶ್ರೀ ಕಾವ್ಯ ಪುರಸ್ಕಾರ’

ಕಾತ್ಯಾಯಿನಿಯವರಿಗೆ ‘2021 ರ ನಾಗಶ್ರೀ ಕಾವ್ಯ ಪುರಸ್ಕಾರ’

ಗಜಲ್

ಮೂರು ದಿನದ ಸಂತೆಯಲ್ಲಿ ಎಂತ ನಾಟಕದ ತಾಲೀಮು ಕನ್ನಡಿಯ ಮುಂದೆ ರೂಪ ಮಾಸಿದೆ
ತಲೆಯಿಡುವ ತೊಡೆ ನೇವರಿಸುವ ಕರಗಳಿಗೂ ಭಂಗವಿದೆಯಿಲ್ಲಿ ಅವನು ಹೋದ ಮೇಲೆ

ಹೆಸರಿನಲ್ಲಿ ‘ಸಮಾಜಶಾಸ್ತ್ರಜ್ಞೆ’ ಎಂದು ಇರುವುದರಿಂದ ಆಕೆ ಯಾರು? ಎಂಬ ಕುತೂಹಲದೊಡನೆ ಕತೆಗೆ ಪ್ರವೇಶ ಪಡೆದರೆ, ‘ನನ್ನ ಕಾಲದಲ್ಲಿ ಹೀಗಿತ್ತೆ? ನಾಲ್ಕು ದಿನದ ಮದುವೆ. ಈಗಿನದೆಲ್ಲಾ ಎಂತದು, ಬರೀ ನಾಟಕದ ಹಾಗೆ’ ಎಂದು ಗೊಣಗುತ್ತಾ ಸಮಾಜದ ಬದಲಾವಣೆಯ ಬಗ್ಗೆ ತಮ್ಮ ಟೀಕೆ-ಟಿಪ್ಪಣಿಗೆ ತೊಡಗುವುದರಿಂದ ಎದುರಾಗುವ ವಾಗತ್ತೆಯೇ ಸಮಾಜಶಾಸ್ತ್ರಜ್ಞೆ ಇರಬಹುದೇ ಎಂದು ಸಂಶಯಪಡಬೇಕಾಗುತ್ತದೆ. ಆದರೆ ವಾಗತ್ತೆ ಹಾಗೆ ಸಂಶಯಪಡಲು ಒಂದು ನಿಮಿತ್ತ ಜೀವ.

Back To Top