Day: September 26, 2021

ಗಜಲ್

ಗಜಲ್ ಡಾ.ಯ.ಮಾ.ಯಾಕೊಳ್ಳಿ ನನ್ನ ಮಾತುಗಳು ಇಲ್ಲಿ ಅರಿಯದೆ ಹೊಗುತ್ತಿರುವದಕ್ಕೆ ವಿಷಾದವಿದೆಪದದೊಳಗಿನ ಅರ್ಥವೇ ಅಪಾರ್ಥವಾಗಿ ತಿರುಗಿ ಬೀಳುತ್ತಿರುವದಕ್ಕೆ ವಿಷಾದವಿದೆ ಪುಸ್ತಕದ ಸಾಲುಗಳು ವೇದಿಕೆಯ ತುಣುಕುಗಳು ವ್ಯರ್ಥ ಹರಡುತ್ತಿವೆಯಾರ ಎದೆಗೂ ತಟ್ಟದೆ ಅಂತರವುಂಟಾದುದಕ್ಕೆ ವಿಷಾದವಿದೆ ಕಾಲಕಾಲಕ್ಕೂ ಜನಿಸಿದ ಸಂತ ಮಹಂತರ ಜೀವ ತತ್ವಗಾಳಿಗೆ ತೂರಿವೆತೋರಿಕೆಯ ಆಚರಣೆಗಳು ಅವರವರ ಪ್ರತಿಷ್ಟೆಯೆನಿಸಿದ್ದಕ್ಕೆ ವಿಷಾದವಿದೆ ಎದೆಯ ದನಿ ಯಾರಿಗೂ ಕೇಳದೆ ಗಡಚಿಕ್ಕುವ ಅಬ್ಬರದಲ್ಲಿ ಅನಾಥವಾಗಿದೆಕೋಗಿಲೆಯ ಮಧುರ ಹಾಡು ಮೆರವಣಿಗೆಯಲ್ಲಿ ಮೌನವಾದುದಕ್ಕೆ ವಿಷಾದವಿದೆ ಸಾವಿರ ಸಾವಿರ ಪುಸ್ತಕಗಳು ನಾಗೊಂದಿಯ ಮೇಲೆ ಮೌನವಾಗಿ ಅಳುತ್ತಿವೆಯಯಾ ನಿನ್ನ ಲಾಲಿಹಾಡು […]

ಗಝಲ್

ಗಝಲ್ ಶಂಕರಾನಂದ ಹೆಬ್ಬಾಳ ಗುಡಿಯೊಳಗೆ ಕಲ್ಲಾಗಿರುವೆ ದೇವಬತ್ತಳಿಕೆಯಲಿ ಬಿಲ್ಲಾಗಿರುವೆ ದೇವ ಅರಿವಿರದ ಜನ್ಮಕ್ಕೆ ಅನುಭವ ತಂದೆಹಸಿರ ಸೂಸುವ ಹುಲ್ಲಾಗಿರುವೆ ದೇವ ಆತ್ಮಸ್ತೈರ್ಯವ ತುಂಬುತಿರುವೆಯಲ್ಲಅಳುವ ಕಂದನ ಜೊಲ್ಲಾಗಿರುವೆ ದೇವ ಮಡುವಿನ ಮಂಡೂಕವ ಸಲಹಿರುವೆಹಸಿದ ಉದರಕೆ ನೆಲ್ಲಾಗಿರುವೆ ದೇವ ಕಷ್ಟಕಾಲದಿ ಕೈಹಿಡಿಯುವ ಮೃಡಹರನೇಅಭಿನವ ಕವಿಗೆ ಸೊಲ್ಲಾಗಿರುವೆ ದೇವ

ಸೀರೆಯ ಸೆರಗು

ಕಾವ್ಯಯಾನ ಸೀರೆಯ ಸೆರಗು ಶಿವಲೀಲಾ ಹುಣಸಗಿ ಸೀರೆಗೊಂದು ಸೆರಗು ಮನಸಿಗೆ ಮೆರಗುಅತ್ತು ಕರೆವಾಗ ಕಣ್ಣೊರೆಸುವ ಸಾಧನವುಕಂಬನಿಯು ಮುತ್ತಾಗಿ ಅರಳಿದ ಸೊಬಗುಆಟಪಾಟಕೆ ಬೆವೆತ ಮೈಮನಕೆ ಬೆರಗುಬೀಸಕೆಯಾಗಿ ಕೈಯಂಚಲಿಹುದು ಸೆರಗುಆಸತ್ತು ಬೆಸತ್ತ ಬೆವರಿಗಿದೋ ಪ್ಯಾನು!ಅಡಿಗೆಮನೆಯ ಸಿದಾಸಾದಾ ಮಸಿಅರಿವೆತಲೆನೆಂದು ಬಂದವಗೆ ಟವಾಲ್ ಯಿದುನೇಸರನ ತಾಪಕೆ ಕೊಡೆಯಂತೆ ಅರಳಿಹುದುನಾಚಿ ನೀರಾಗೋ ಗಳಿಗೆಗೆ ಬಳ್ಳಿಯಾಗಿಹುದುಹೊಸಬರೆದುರು ಅಸ್ತ್ರದಂತೆ ಈ ಸೆರಗುಉಡಿಯಕ್ಕಿ,ಬಾಗಿನ ಪಡೆವ ಸೌಭಾಗ್ಯವಿದುಹೂಗಳ ಸೆಳೆತಕ್ಕೆ ಬುಟ್ಟಿಯಂತಾಗಿಹುದುತಿಂಡಿತಿಸುಗಳ ಬಚ್ಚಿಡಲು ಜೊತೆಗಿಹುದುತಲಿಮ್ಯಾಲೆ ಗೌರವದ ಕಿರೀಟದಂತಿಹುದುಅಮ್ಮನ ಸೆರಗಿನ ಅಂಚಿಡಿದು ಹೊಂಟರೆವಿಶ್ವಪರ್ಯಟನವಾದಂತೆಯೇ..ಸರಿ!ಸೆರಗೊಂದು ಮಾಂತ್ರಿಕ ದಂಡದಂತೆಗಿರಗಿಟ್ಲಿತರ ಸುತ್ತುವ ಅಪ್ಪನೆ ಚಂದಸಿಟ್ಟಿಗೆದ್ದು ಸೊಂಟಕೆ ಸೆರಗ […]

ವಿ.ಜೇ. ನಾಯಕ ಅವರ ತರುವಾಯ ಜಿಲ್ಲಾ ಘಟಕದ ಅಧ್ಯಕ್ಷಗಾದಿಯೇರಿದ ಟಿ.ಕೇ.ಮಹಮೂದ ಎಂಬ ಹಿರಿಯರು ಇಪ್ಪತ್ತೊಂದು ವರ್ಷಗಳ ಕಾಲ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿಯೂ ಜಿಲ್ಲಾಧ್ಯಕ್ಷರಾಗಲೀ, ತಾಲೂಕು ಘಟಕದ ಅಧ್ಯಕ್ಷರಾಗಿದ್ದ ಹಿರಿಯರಾಗಲೀ, ಅಂಕೋಲಾ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸುವುದಾಗಲೀ, ಘಟಕವನ್ನು ಕ್ರಿಯಾಶೀಲ ಚಟುವಟಿಕೆಗಳಿಂದ ಮುನ್ನಡೆಸುವುದು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ.

Back To Top