ಅರಿತು ಮರೆತು
ಕಾವ್ಯಯಾನ ಅರಿತು ಮರೆತು ಲಕ್ಷ್ಮೀ ಮಾನಸ ನೆರಳ ಬೆಳಕಿನಕದನದಲ್ಲಿ,ಪ್ರತಿಬಿಂಬ ಅರಿಯದದರ್ಪಣವನ್ನು,ನೆರಳು ಎಂದೋ ತೊರೆದರೂ, ಬೆಳಕ ಗೈರುಹಾಜರಿಯಲ್ಲಿ,ಮೋಡ ಕವಿದಬಣ್ಣದ ಬಿಂಬವುಮರುಭೂಮಿಯಲ್ಲಿ ನೀರನ್ನರಸಿಹಾಕುವ ಹೆಜ್ಜೆಗಳುಎದೆಗೂಡಲ್ಲಿ ಪಿಸುಗುಟ್ಟುತ್ತಲಿವೆ..ಕಣ್ರೆಪ್ಪೆಯ ಶಬ್ಬಕ್ಕೆಎದುರುನಿಲ್ಲಲಾಗದೆ….. ಭಾವನೆಯ ಬಳ್ಳಿಯಲ್ಲಿಮುದುಡದ ಕುಸುಮಾಗಳಿಗೆಕಪ್ಪು ವರ್ಣವ ಪೂಸಿದರೂ, ಅರಿತು ಮರೆತು,ಗೀಚಿದ ಗೆರೆಯ ದಾಟಿ,ಕಾರ್ಮೋಡದ ಮಡಿಲಲ್ಲಿನಸುಖ ನಿದ್ರೆಯ ತೊರೆದು, ಬಯಸುತಲಿವೆಮಾತನರಿಯದ ಮೌನವಗೀತೆಯಾಗಿ ಬದಲಿಸಿ,ವಸಂತ ಕೋಗಿಲೆಯೊಡಗೂಡಿಮರೆತ ಹಾಡನ್ನುಮರಳಿ ಹಾಡಲು,ಅರಿತ ರಾಗದಲ್ಲಿಚಿರನಿದ್ರೆಗೆ ಜಾರಲು… ******