ಗಜಲ್
ಗಜಲ್ ಅರುಣಾ ನರೇಂದ್ರ ನಿನ್ನ ಕಿರು ನಗೆ ನನ್ನೊಂದಿಗೆ ಮುನಿಸಿಕೊಂಡಾಗ ನಾ ಯಾರಿಗೆ ಹೇಳಲಿತೋಳ ತಲೆದಿಂಬು ಸರಿಸಿ ಹೊರಳಿ ಮಲಗಿಕೊಂಡಾಗ ನಾ ಯಾರಿಗೆ ಹೇಳಲಿ ಮುತ್ತಿನಲಿ ಸಿಂಗರಿಸಿ ಮುಖ ನೋಡಿ ಹಿಗ್ಗುತ್ತಿದ್ದವನು ನೀನುಪ್ರೀತಿಯ ಕರೆ ಧ್ವನಿ ಕಳೆದುಕೊಂಡಾಗ ನಾ ಯಾರಿಗೆ ಹೇಳಲಿ ಹೂವಾಗುವ ಮೊಗ್ಗಿನ ನಿದ್ರೆಯಲಿ ಬರಿ ಚಿಟ್ಟೆಯದೇ ಕನಸುಸತ್ಯ ಮುಸುಕು ಹಾಕಿಕೊಂಡಾಗ ನಾ ಯಾರಿಗೆ ಹೇಳಲಿ ನದಿಯಾಗಿ ನಿನ್ನೆದೆಯೊಳಗೆ ಹರಿದ ಧನ್ಯತೆ ಇದೆ ಸಾಜನ್ಬೆಳಕನೆ ಕುಡಿದು ಮತ್ತೇರಿಸಿಕೊಂಡಾಗ ನಾ ಯಾರಿಗೆ ಹೇಳಲಿ ಮತ್ತೆ ಮತ್ತೆ ಸೋಲುತ್ತಾಳೆ […]
ಹಿರಿಯರು ಹೊರೆಗಳಾಗದಿರಲಿ
ಲೇಖನ ಹಿರಿಯರು ಹೊರೆಗಳಾಗದಿರಲಿ ವಿಶ್ವನಾಥ ಎನ್ ನೇರಳಕಟ್ಟೆ [6:36 am, 26/09/2021] ಸಂಗಾತಿ ಸಾಹಿತ್ಯ ಪತ್ರಿಕೆ: ಸುರಕ್ಷಾ ವೃದ್ಧಾಶ್ರಮ’ ಹೀಗೆಂದು ಕೆಂಪು ಅಕ್ಷರಗಳಲ್ಲಿ ಬರೆದಿದ್ದ ಬೋರ್ಡನ್ನು ನೆತ್ತಿ ಮೇಲೆ ಹೊತ್ತುಕೊಂಡಂತೆ ಕುಳಿತಿದ್ದ ನಾರಾಯಣರಾಯರ ಕಣ್ಣಿನ ತುಂಬ ಅಸಹಾಯಕತೆಯಿತ್ತು. ‘ಎರಡು ದಿನಗಳ ಇಲ್ಲಿಯ ಬದುಕೇ ಸಾಕಾಗಿಹೋದಂತಿದೆ ನಿಮಗೆ’, ಪಕ್ಕದಲ್ಲಿ ಕುಳಿತಿದ್ದ ವೃದ್ಧರು ಪ್ರಶ್ನಿಸಿದರು. ಉತ್ತರಿಸಬೇಕೆಂದು ಇವರಿಗೆ ಅನಿಸಲಿಲ್ಲ. ಮಗ ತನ್ನನ್ನು ಇಲ್ಲಿ ಬಿಟ್ಟುಹೋದ ಸನ್ನಿವೇಶ ಅವರ ಕಣ್ಣೆದುರು ತಾಂಡವವಾಡತೊಡಗಿತ್ತು. “ಅಪ್ಪಾ, ನಿಧಾನಕ್ಕೆ ಬನ್ನಿ. ಅಲ್ಲಿ ಮೆಟ್ಟಿಲು ಇದೆ ನೋಡಿ. […]
ಮಿಸ್ ಯೂ ಡ್ಯಾಡಿ
ನೆನಪು ಮಿಸ್ ಯೂ ಡ್ಯಾಡಿ ಮೌಲ್ಯಗಳ ಸಂಪುಟ ನನ್ನಪ್ಪ ಎಪ್ರಿಲ್ ತಿಂಗಳ ಸಮಯ ಬೆಂಗಳೂರಿನ ಸೆಂಟ್ರಲ್ ಸ್ಕೂಲಲ್ಲಿ ಇಂಗ್ಲಿಷ್ ಮೌಲ್ಯಮಾಪನ ನಡೆದಿತ್ತು.ನನ್ನ ತಂದೆ ಮಲ್ಲಣ್ಣ ಭರಮಪ್ಪ ತಿರ್ಲಾಪುರ ಇಂಗ್ಲಿಷ್ ಪ್ರಾಧ್ಯಾಪಕರು, ಮಾಮಲೆ ದೇಸಾಯಿ ಹೈಸ್ಕೂಲ್ ಶಿಗ್ಗಾವಿ, ಮೌಲ್ಯಮಾಪನಕ್ಕೆ ಅಲ್ಲಿ ಹಾಜರಿದ್ದರು. ಬೆಂಗಳೂರಿಗೆ ಬರುವಾಗ ತುಂಬು ಗರ್ಭಿಣಿಯಾದ ಕಿರಿ ವಯಸ್ಸಿನ ಹೆಂಡತಿಯನ್ನು ಅರೆಮನಸ್ಸಿನಿಂದಲೇ ಬಿಟ್ಟು ಬಂದಿದ್ದರು. ಬೆಂಗಳೂರಿಗೆ ಬಂದು ಒಂದು ವಾರಕ್ಕೆ ಅವರಿಗೆ ಒಂದು ಪತ್ರ ಬರುತ್ತದೆ. ಅದು ಮೊದಲ ಮಗುವಿನ ಜನನದ ಕುರಿತಾದ ಪತ್ರ. ಅಕಸ್ಮಾತಾಗಿ ಆ […]
ಆಮೆಯೂ ಮೊಲವೂ
ಕಥನಕಾವ್ಯ ಆಮೆಯೂ ಮೊಲವೂ ಬೆಂಶ್ರೀ ರವೀಂದ್ರ ಭಾಗ ಒಂದು ಸ್ಪರ್ಧೆಗೆ ಆಮೆಯೂ ಮೊಲವುಟ್ರ್ಯಾಕಿನ ಗೆರೆಯಲಿ ನಿಂತಿಹವುಓಟದ ರೇಸಿಗೆ ಅಣಿಯಾಗಿಹವು ಇದೆಂತಹ ಆಟ ತಮಾಷೆ ಜೂಟಾಟಮಜವಿದೆ ನೋಟ ಆಮೆ ಮೊಲದೋಟಕಾಡಿನ ಪ್ರಾಣಿಗಳಿಗೆ ಮೋಜಿನ ಮಾಟ ಕಿವಿಯನು ನಿಗುರಿಸಿ ಕಣ್ಣನು ಪಿಳುಕಿಸಿಸಮ ಎನಗಾರೆಂದು ಬೀಗಿಹ ಭೂಪಬೆಳ್ಳನೆ ಬೆಳುಪಿನ ಮೊಲ ಮಹರಾಯ ಕಾಲನು ಜಾಡಿಸಿ ಕತ್ತನು ಆಡಿಸಿಸುತ್ತಲೂ ನೋಡಿ ದೇವಗೆ ಪ್ರಾರ್ಥಿಸಿಓಟಕೆ ಸಿದ್ದವಾದನು ಆಮೆರಾಯ ಕತ್ತನು ಕೊಂಕಿಸಿ ಕಾಲನು ಜಾಡಿಸಿಕಣ್ಣನು ಕೀಲಿಸಿ ಟ್ರ್ಯಾಕನು ವೀಕ್ಷಿಸಿಅಂಪೈರ್ ಸೀಟಿಯು ಜಿರಾಫೆರಾಯ ಮಿಂಚಿನ ವೇಗದಿ ಓಡಿತು […]
ಹೃದಿಹೃದಯಲು ಒಲವುದಿಸಿ
ಬೈಸಾಕಿಯು ಬೇಸರಿಸಿ,
ಚಿಗಿ ಚೈತ್ರದ ಪಡಿಯರಸಿ
ಮಗುವಂತೆ ಮುನಿಸೊಡೆಸಿ,
ಮೋತ್ಕರಿಸಿದೆ ಮಿಗಿಮಿಗಿಸಿ…
ದೇವರ ಕೊಡುಗೆಗಳು.
( ಇಂಗ್ಲೀಷ್ ಕವಿತೆಯೊಂದರ ಭಾವಾನುವಾದ )
God”s gifts – Alon calunao
ಎಂ. ಅರ್. ಅನಸೂಯ
ಮರೆಯದ ನೆನಪು
ಕಾವ್ಯಯಾನ ಮರೆಯದ ನೆನಪು ಶೃತಿ ಮೇಲುಸೀಮೆ ಬೆಳಕು ಗಾಳಿ ಇಲ್ಲದಿದ್ರು,ಮನಿತುಂಬಾ ನಮ್ದೆ ಹವಾ,ಸದ್ದು ಗದ್ದಲ,ಯಾವಾಗ್ಲೂ ಆಟೋಟ,ಬೀದಿಯೆಲ್ಲಾ ರಂಪಾಟ ಚಪ್ಪರದ ಮನಿಯಾದ್ರೂ,ಅರಮನಿಗಿಂತ ಕಮ್ಮಿರ್ಲಿಲ್ಲಮನೆಗೂ,ಮನಸಿಗೂ ತೂತು ಬಿದ್ದು ಸೋರುತಿರ್ಲಿಲ್ಲ ನಿಷ್ಕಲ್ಮಶ ಸಣ್ಮನಸು,ಏನು ಅರಿಯದ ವಯಸುದೊಡ್ಡೋರಂದ್ರೆ ಭಯ,ಚಿಕ್ಕೋರಂದ್ರೆ ತಂಟೆ ತಕರಾರು ಹೊತ್ತೊತ್ತು ಊಟಕ್ಕೂ ,ಗಂಜಿಯ ಘಮಲುಸಾಲಾಗಿ ಕೂತ್ರೆ,ಸಾಲಿನ ಕೊನೆಯೊರಿಗೆ ಸಾಲುತ್ತಿರ್ಲಿಲ್ಲ ಕಿತ್ತು ತಿನ್ನೋ ಬಡತನಿದ್ರೂ,ಕತ್ತೆತ್ತಿ ನಡಿಯೋ ಶಕ್ತಿಕತ್ತಿಯಂತೆ ಇರಿಯೋ ತೊಂದ್ರೆತಾಪತ್ರೆ,ಕಿತ್ತೆಸೆಯಲು ದಾರಿ ನೀಡಿದ ಅಕ್ಷರದ ದ್ಯಾವರು ಬದುಕಿಗೆ ಒಂದರ್ಥ ಸಿಕ್ಕಿದ್ದೇ ಆ ಬಾಲ್ಯದ ದಿವಸದಲ್ಲಿತಂದಿ ಗದರಿಕೆ ಧ್ವನಿಲೇ ಕಾಳಜಿತ್ತು,ಅವ್ವನ ಪ್ರೀತಿಲೇ ನಗು […]
ಅಂಕಣ ಬರಹ ತೊರೆಯ ಹರಿವು ಆಟಕ್ಕುಂಟು ಲೆಕ್ಕಕ್ಕಿಲ್ಲ ಬಾಲ್ಯದಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬ ಮಾತನ್ನು ಸಾಕಷ್ಟು ಬಾರಿ ಕೇಳಿಸಿಕೊಂಡಿರ್ತೀವಿ ಅಥವಾ ಹೇಳಿರ್ತೀವಿ. ಅದರಲ್ಲೂ, ಸಮಾನ ವಯಸ್ಕ ಗೆಳೆಯರೊಡನೆ ಆಡುವಾಗ, ಚಿಕ್ಕವಯಸ್ಸಿನ ಮಕ್ಕಳು ತಮ್ಮನ್ನೂ ಆಟಕ್ಕೆ ಸೇರಿಸಿಕೊಳ್ಳಿರೆಂದು ಹಠ ಹಿಡಿದಾಗಲೋ ಅಥವಾ ಹಿರಿಯರು ಗದರಿಸಿ ಸಣ್ಣಮಕ್ಕಳನ್ನು ಆಟಕ್ಕೆ ಸೇರಿಸಿ ಹೋದಾಗಲೋ ಈ ಮಾತು ಬಳಕೆಯಾಗಿರುತ್ತೆ. ಎಂದರೆ, ಆಟದ ನಿಯಮಗಳು ಅರ್ಥವಾಗದ, ಅನುಸರಿಸಲಾಗದ ವಯಸ್ಸು ಹಾಗೂ ಮನಃಸ್ಥಿತಿ ಇರುವವರೊಡನೆ ಗುದ್ದಾಡಿಕೊಂಡು ಆಟದ ಮಜಾ ಹಾಳು ಮಾಡಿಕೊಳ್ಳಲಾರದೆ ,ಅವರೂ ಇದ್ದರೆ ಇರಲಿ […]