ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಮಾಗಿಯ ಪದ್ಯಗಳು

ಪ್ರೇಮಲೀಲಾ ಕಲ್ಕೆರೆ

Download free photo of Tree,plane,winter,aesthetic,crown - from needpix.com

ಕೌದಿ ಕವುಚಿ
ಕಂಬಳಿ ಹುಳುವಾದರೂ
ಅಡಗಲೊಲ್ಲದ ಚಳಿ

ಬೆಳಗಾಗ ಬರುವ
ಚುರುಕು ಬಿಸಿಲಿನ ನೆನಪೇ
ಬಿಸಿ ಹುಟ್ಟಿಸಬಲ್ಲದು
ಒಳಗೆ

ಉರಿಮುಖದ ಸೂರ್ಯ, ನಿನ್ನ ಆಗಮನ
ಅದೆಷ್ಟು ಬೆಚ್ಚಗೆ
ಜಡ ಮಾಗಿಗೆ !!


2

ತುಂಟ ಸೂರ್ಯ,
ಎಲ್ಲಿ ಅಡಗಿದ್ದೆ ನೀನು ?
ಇಷ್ಟೊಂದು ತಡವೇಕೆ
ಮನೆಗೆ ಬರಲು ??

ಗುಟ್ಟೇನಿದೆ ,
ಆ ನಿಶೆಯ ಜೊತೆ
ನಿನ್ನ ಚೆಲ್ಲಾಟ
ಜಗಕೇ ಗೊತ್ತು!

ತರವಲ್ಲ ಬಿಡು,
ತರವಲ್ಲ ಬಿಡು,

ಆ ಕಪ್ಪುನಿಶೆಯಲಿ
ಏನುಂಟು ಚೆಲುವು?
ಬಿತ್ತಿದ್ದ ಬೆಳೆಯುವ
ಇಳೆಗೆ ಮಿಗಿಲು??

******************************************

About The Author

Leave a Reply

You cannot copy content of this page