ಪ್ರಸ್ತುತ
ಕರೋನ ಅಬ್ಬರದಲ್ಲಿ ಕುಸಲಾಳ ಮನಸ್ಸಿನ
ಏಕಾಂತ ಹೊಯ್ದಾಟ..!
ಕೆ.ಶಿವು.ಲಕ್ಕಣ್ಣವರ
ಹೌದಾ.. ನಿಜಾನಾ.. ಇದು ಹೇಗೆ ಸಾಧ್ಯ..? ನಿಜಕ್ಕೂ ಕೊರೊನಾ ವೈರಸ್ ಹಿಂದಿರೋ ಕರಾಳ ಸತ್ಯ ಇದೇನಾ..? ಇಡೀ ಜಗತ್ತನ್ನೇ ಕಿರುಬೆರಳಲ್ಲಿ ಆಡಿಸ್ತಿರೋ ಕೊರೊನಾ ವೈರಸ್ ಹುಟ್ಟಿನ ಹಿಂದೆ ದೊಡ್ಡ ಷಡ್ಯಂತ್ರವೇ ಇದ್ಯಾ..? ಸೋಶಿಯಲ್ ಮೀಡಿಯಾದಲ್ಲಿ ಕಳೆದೊಂದು ವರ್ಷದಿಂದ ವೈರಲ್ ಆಗ್ತಿರೋ ಒಂದು ವಿಡಿಯೋನ ನೋಡಿದವರ ತಲೆಯಲ್ಲಿ ಇಷ್ಟೊಂದು ಪ್ರಶ್ನೆಗಳು ಹರಿಡಾದ್ತಿವೆ. ಕೊರೊನಾ ವೈರಸ್ ಕಾಣಿಸಿಕೊಂಡ ಆರಂಭದಲ್ಲಿ ಶುರುವಾಗಿದ್ದ ಚರ್ಚೆಯೊಂದಕ್ಕೆ ಈ ವಿಡಿಯೋದಿಂದ ಮತ್ತೆ ಪುಷ್ಟಿ ಪುಷ್ಟಿ ನೀಡುತ್ತಿದೆ.
ಏನಿದು ವಿಡಿಯೋ..? ಜಗತ್ತು ತಲೆ ಕೆಡಿಸಿಕೊಂಡಿರೋದೇಕೆ..? ಇದು ಆ ಕುಸಲಾಳ ಮನದಾಳದಲ್ಲಿ ಹೀಗೆಯೇ ಆ ಒಂದು ರಾತ್ರಿಯಿಂದ ಪದೆಪದೇ ಮೇಲೇಳಿತ್ತಿರುವ ಪ್ರಶ್ನೆ.
ಅದುವೇ ಎಪಿಸೋಡ್ 10. 2018ರಲ್ಲಿ ಪ್ರಸಾರವಾದ ವೆಬ್ ಸಿರೀಸ್ ಇದು. ಸದ್ಯ ಈ ಕಂಟೆಂಟ್ ಯುಎಸ್‌ಎ ಹಾಗೂ ಯುಕೆಗೆ ಮಾತ್ರ ಲಭ್ಯವಿದೆ. 10ನೇ ಎಪಿಸೋಡ್‌ನಲ್ಲಿ ಬರುವ ಕೆಲ ಸೀನ್‌ಗಳಲ್ಲಿ ಕೊರೊನಾ ವೈರಸ್‌ನ ಉಲ್ಲೇಖ ಇದೆ. ಈ ವೈರಸ್ ಬಗ್ಗೆ, ಅದ್ರ ಹುಟ್ಟಿನ ಬಗ್ಗೆ, ಅದರ ಲಕ್ಷಣಗಳ ಬಗ್ಗೆ ಸಂಭಾಷಣೆ ಇದೆ.
ಇದು ಕುಸಲಾಳನ್ನು ಕಂಗೆಡುಸುತ್ತಲೇ ಇದೆ. ಆ ಒಂದು ಕುಸಲಾಳ ಮನಸ್ಸಿನ ನಾಟಕದ ಪಾತ್ರದಾರಿಗಳ ಸಂಭಾಷಣೆ ಕುಸಲಾಳ ಮನಸ್ಸಿನ ಮೇಲೆ ಗಾಯ ಮಾಡಿದವು. ಆ ಪಾತ್ರಧಾರಿಗಳ ಸಂಭಾಷಣೆಗಳು ಹೀಗಿವೆ ನೋಡಿ…
ಸೀನ್ ನಂಬರ್ 1:
ಪಾತ್ರಧಾರಿ 1 -ನಾವು ಇದರ ಬಗ್ಗೆ ಮತ್ತಷ್ಟು ಸಂಶೋಧನೆ ಮಾಡಬೇಕಿದೆ.
ಪಾತ್ರಧಾರಿ 2 -ಆದ್ರೆ ಅದು ಕೊರೊನಾ ವೈರಸ್ ರೀತಿ ಕಾಣುತ್ತಿದೆ..!
ಪಾತ್ರಧಾರಿ 1 -ಕೊರೊನಾ..? MERS?
ಪಾತ್ರಧಾರಿ 2 -MERS, SARS ಇವು ಸಾಮಾನ್ಯ ಜ್ವರಗಳಾಗಿದ್ವು. ಅವೆಲ್ಲವೂ ಒಂದು ವಿಧಕ್ಕೆ ಸೇರಿದ ಜ್ವರಗಳು. ಅವುಗಳ ಜೀನ್ ಇನ್ಫರ್ಮೇಶನ್ ಕೂಡ ಒಂದೇ ಆಗಿತ್ತು. ಆದ್ರೆ ಕೊರೊನಾ ವೈರಸ್ ರೆಸ್ಪಿರೇಟರಿ ಸಿಸ್ಟಮ್( ಉಸಿರಾಟ)ಗೆ ಅಟ್ಯಾಕ್ ಮಾಡುತ್ತೆ. 2015ರಲ್ಲಿ MERS ಸಾಂಕ್ರಾಮಿಕ ಕಾಯಿಲೆ ಬಂದಾಗ ಅದರ ಮರಣ ಪ್ರಮಾಣ 20% ಇತ್ತು.
ಪಾತ್ರಧಾರಿ 1 -ಆಯುಧವಾಗಿ ಬಳಸೋಕೆ ಅದು ಸಾಕಾಗ್ತಾ ಇರ್ಲಿಲ್ವಾ?
ಪಾತ್ರಧಾರಿ 2 -ನಾನ್ ಹೇಳಿದ ಹಾಗೆ ಕೊರೊನಾ ರೂಪಾಂತರಗೊಂಡ ವೈರಸ್. ಸಾವಿನ ಪ್ರಮಾಣ ಹೆಚ್ಚಾಗುವಂತೆ ಯಾರೋ ಅದನ್ನ ತಿರುಚಿದ್ದಾರೆ. ಇದರ ಮರಣ ಪ್ರಮಾಣ 90%.
ಪಾತ್ರಧಾರಿ 1 -90%..!!!
ಪಾತ್ರಧಾರಿ 2 -ಕೊರೊನಾ ಬಗ್ಗೆ ಅದಕ್ಕಿಂತಲೂ ಗಂಭೀರ ವಿಚಾರ ಏನು ಅಂದ್ರೆ ಈ ಕೊರೊನಾ ವೈರಸ್ ಬೆಳೆಯೋದಕ್ಕೆ 2 ರಿಂದ 14 ದಿನಗಳ ಸಮಯ ತೆಗೆದುಕೊಳ್ಳುತ್ತೆ. ಈ ವೈರಸ್ ಕಾಣಿಸಿಕೊಂಡ 5 ನಿಮಿಷಗಳಲ್ಲಿ ನೇರ ಶ್ವಾಸಕೋಶಕ್ಕೆ ಅಟ್ಯಾಕ್ ಮಾಡುವಂತೆ ರೂಪಿಸಲಾಗಿದೆ.
ಪಾತ್ರಧಾರಿ 1 -ಇದಕ್ಕೆ ಔಷಧ ಇಲ್ವಾ..?
ಪಾತ್ರಧಾರಿ 2 -ಈ ಸಮಯದಲ್ಲಿ ಈ ವೈರಸ್‌ಗೆ ಯಾವುದೇ ರೀತಿಯ ವ್ಯಾಕ್ಸಿನ್ ಲಭ್ಯವಿಲ್ಲ. ಅದನ್ನ ಅಭಿವೃದ್ಧಿಪಡಿಸೋದು ಕೂಡ ತುಂಬಾ ಕಷ್ಟ.
ಸೀನ್ ನಂಬರ್ 2:
ಪಾತ್ರಧಾರಿ 3 -ಮನುಷ್ಯನೇ ರೂಪಿಸಿದ ವೈರಸ್..???
ಪಾತ್ರಧಾರಿ 4 -ಹೌದು.
ಪಾತ್ರಧಾರಿ 3 -ಮರಣ ಪ್ರಮಾಣ..?
ಪಾತ್ರಧಾರಿ 4 -90%
ಪಾತ್ರಧಾರಿ 3 -ಅವ್ರು ಬಯೋಕೆಮಿಕಲ್ ಟೆರರಿಸ್ಟ್ ಅಟ್ಯಾಕ್‌ಗೆ ಪ್ಲ್ಯಾನ್ ಮಾಡ್ತಿದ್ದಾರೆ. ನಾವು ಸಮಯ ಮತ್ತು ಸ್ಥಳವನ್ನು ಫೈಂಡ್ ಔಟ್ ಮಾಡಬೇಕು.
ಸೀನ್ ನಂಬರ್ 3:
ಪಾತ್ರಧಾರಿ 5 -ನಾನು ಮನುಷ್ಯನ ದೇಹದ ಮೇಲಿನ ಟೆಸ್ಟ್‌ನ ಪೂರ್ತಿ ಮಾಡಿದ್ದೇನೆ.
ಪಾತ್ರಧಾರಿ 6 -ಹೇಗಾಯ್ತು ಟೆಸ್ಟ್..?
ಪಾತ್ರಧಾರಿ 5 -ನಾವು ಜೆನೆರಿಕ್ ಮೆಟೀರಿಯಲ್‌ನ ಯಶಸ್ವಿಯಾಗಿ ಆತನ ದೇಹಕ್ಕೆ ಇಂಜೆಕ್ಟ್ ಮಾಡಿದ್ವಿ. ಕೋರ್ಸ್ ಪ್ರಾಜೆಕ್ಟ್‌ನ ಸ್ಟಾರ್ಟ್ ಮಾಡೋಕೆ ಇದು ಸೂಕ್ತ ಸಮಯ.
ಇವಿಷ್ಟು ಪಾತ್ರಧಾರಿಗಳ ನಡುವೆ ಬರುವ ಸಂಭಾಷಣೆ. ಸೌತ್ ಕೊರಿಯಾದ ಭದ್ರತಾ ಸಂಸ್ಥೆಯ (ಎನ್‌ಎಸ್‌ಎ – ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ) ಏಜೆಂಟ್ ಒಬ್ಬನ ಸ್ನೇಹಿತ ನಿಗೂಢವಾಗಿ ಸಾವನ್ನಪ್ಪಿರ್ತಾನೆ. ಈ ವಿಚಾರದ ಬಗ್ಗೆ ಎನ್‌ಎಸ್‌ಎ ತನಿಖೆ ಆರಂಭ ಮಾಡಿದಾಗ ಶತ್ರುಗಳು ಕೊರೊನಾ ವೈರಸ್‌ನ ಬಯೋಕೆಮಿಕಲ್ ವೆಪನ್ ಆಗಿ ಬಳಸಿದ್ದಾರೆ ಅನ್ನೋದು ಬೆಳಕಿಗೆ ಬರುತ್ತೆ. ಇದು ಒಂದು ಕುಸಲಾಳ ಮನಸ್ಸಿನ ವೆಬ್ ಸಿರೀಸ್‌ನ ಆ ಎಪಿಸೋಡ್‌ನಲ್ಲಿ ಬರುವ ಸ್ಟೋರಿ.
ಅಚ್ಚರಿಯ ವಿಷಯ ಏನು ಅಂದ್ರೆ ಚೀನಾದಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿದ್ದು 2019ರ ನವೆಂಬರ್‌ನಲ್ಲಿ. ಆದ್ರೆ ಈ ವೆಬ್ ಸಿರೀಸ್ ಪ್ರಸಾರವಾಗಿದ್ದು 2018ರಲ್ಲಿ ಇದು ಹೇಗೆ ಸಾಧ್ಯ? ಕೊರೊನಾ ವೈರಸ್ ಬಗೆಗಿನ ಭವಿಷ್ಯವಾಣಿಗಳು ಈ ಹಿಂದೆಯೇ ಕೆಲವು ಬಂದಿದ್ರೂ ಕೂಡ ಈ ವೆಬ್ ಸಿರೀಸ್‌ನಲ್ಲಿ ಹೇಳಿರುವ ಡೈಲಾಗ್‌ಗಳು ಕರಾರುವಕ್ಕಾಗಿವೆ. ಇದು ಯಾರದ್ದೋ ಷಡ್ಯಂತ್ರದ ಫಲ ಅನ್ನೋದನ್ನ ಸಿನಿಮಾ ಡೈಲಾಗ್ ಅಂದ್ರೂ ಕೊರೊನಾದ ಬಗ್ಗೆ ಹೇಳಿರೋ ಲಕ್ಷಣಗಳು 100ಕ್ಕೆ 100ರಷ್ಟು ಸತ್ಯ. ಇದು ಹೇಗೆ ಸಾಧ್ಯ..?
‘ಕೊರೊನಾ’ ಸೃಷ್ಟಿಸಿದ್ದೇ ಚೀನಾ ಅಂದಿದ್ರು ಹಲವರು..!
ಕೊರೊನಾ ಕಾಣಿಸಿಕೊಂಡ ಆರಂಭದಲ್ಲಿ ಚೀನಾದವರೇ ಈ ವೈರಸ್‌ನ ತಮ್ಮ ಲ್ಯಾಬ್‌ನಲ್ಲಿ ರೂಪಿಸಿದ್ರು. ಜಗತ್ತಿನ ಮೇಲೆ ಇದ್ರ ಮೂಲಕ ದಾಳಿ ನಡೆಸೋಕೆ ಮುಂದಾಗಿದ್ರು. ಆದ್ರೆ ಬೈ ಮಿಸ್ಟೇಕ್ ಅಲ್ಲಿನ ಲ್ಯಾಬ್‌ನಿಂದಲೇ ವೈರಸ್ ಲೀಕ್ ಆಗಿದೆ ಅನ್ನೋ ವದಂತಿಗಳು ಹರಿದಾಡಿದ್ವು. ಅದ್ರ ಸತ್ಯಾಸತ್ಯತೆ ಯಾರಿಗೂ ಗೊತ್ತಿಲ್ಲ. ಆದ್ರೀಗ ವೆಬ್‌ಸಿರೀಸ್‌ನಲ್ಲಿ ತೋರಿಸಿರುವ ಷಡ್ಯಂತ್ರದ ಸೀನ್, ನಿಜಕ್ಕೂ ಹಾಗೆಯೇ ಆಗಿದ್ಯಾ ಅನ್ನೋ ಅನುಮಾನ ಹುಟ್ಟುಹಾಕಿದೆ.
ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‌ಗೂ ಸೌತ್ ಕೊರಿಯಾದ ವೆಬ್ ಸಿರೀಸ್‌ಗೂ ಏನ್ ಸಂಬಂಧ..? ನೆಟ್‌ಫ್ಲಿಕ್ಸ್‌ನಲ್ಲಿ ಈ ಬಗ್ಗೆ ಸ್ಟೋರಿ ಬಂದಿದೆ ಅಂದ್ರೆ ಇದ್ರ ಬಗ್ಗೆ ಮೊದಲೇ ಅರಿವಿತ್ತು ಅಂತ ಅರ್ಥ. ಅದು ಗೊತ್ತಿದ್ದೂ ಮುಂಜಾಗ್ರತ ಕ್ರಮ ತೆಗೆದುಕೊಳ್ಳೋಕೆ ತಡವಾಗಿದ್ದು ಏಕೆ? ಇಡೀ ಚೀನಾಗೆ ಹಬ್ಬುವವರೆಗೂ ಯಾಕೆ ತಲೆಕೆಡಿಸಿಕೊಂಡಿರಲಿಲ್ಲ. ಇಡೀ ಜಗತ್ತಿಗೇ ವೈರಸ್ ಈಗ ಹರಡಿಬಿಟ್ಟಿದೆ. ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದೆ. ಇದ್ರ ಹಿಂದೆ ನಿಜಕ್ಕೂ ಷಡ್ಯಂತ್ರ ಇದ್ದಿದ್ದು ಹೌದಾ ಅನ್ನೋ ಬಗ್ಗೆ ನೆಟ್ಟಿಗರು ಈಗ ತಲೆಕೆಡಿಸಿಕೊಳ್ತಿದ್ದಾರೆ.
ಹೀಗೆಯೇ ಆ ಕುಸಲಾಳ ಏಕಾಂತ ಮನಸ್ಸಿನ ಅಲೆಗಳು ಏಳುತ್ತಲೇ ಇದ್ದವು. ಆ ಏಕಾಂತ ಮನಸ್ಸಿನ ತಾಕಲಾಟ ತಾಳಲಾರದೇ ಅವಳು ದಿಗ್ಗನೇ ಆ ಒಂದು ಬೆಡ್ ರೂಮಿನಿಂದ ಎದ್ದು ಹೊರ ಬಂದು ದೇವಾಲಯಕ್ಕೆ ಹೊರಡಲು ಅಣಿಯಾದಳು.
ದೇವಾಲಯಕ್ಕೆ ಹೋಗಿ ಆ ದೇವರ ದರ್ಶನ ಪಡೆದುಕೊಂಡು ಮನಸ್ಸಿನಲ್ಲೇ ಆ ದೇವರನ್ನು ಬೇಡಿಕೊಂಡಳು ಅಯ್ಯೋ ದೇವರೇ ಈ ಕರೋನ ಸಂದರ್ಭದಲ್ಲಿ ನೀನೇ ಗತಿ ಈಗ ನಮಗೆ. ನಮ್ಮನ್ನು ಅಂದರೆ ಮಾನವರನ್ನು ನೀನೇ ಕಾಪಾಡಪಾ ಈಗ. ಹೀಗೆಯೇ ಆ ದೇವರನ್ನು ಬೇಡಿಕೊಳ್ಳುತ್ತಲೇ ಮಕ್ಕಳು ಮತ್ತು ಗಂಡನು ಆಫೀಸಿನಿಂದ ಮನೆಗೆ ಬರುವುದು ಸಮಯವಾಗಿದೆ ಎಂದು ದೇವಸ್ಥಾನದಿಂದ ಮನೆಗೆ ವಾಪಾಸಾದಳು ಕುಸಲಾಳು…
*************************************