ಕವಿತೆ
ಗೆಜ್ಜೆನಾದ
ಅಕ್ಷತಾ ಜಗದೀಶ್
ಸಾವಿರ ಸಾಲಿನ ಪದಗಳಲಿ
ಅಡಗಿ ಕುಳಿತವಳು….
ಯಾರಿಗೂ ಕಾಣದಂತೆ
ನಾ ಬರೆವ ಕವನಗಳಲಿ ಮೂಡುತಿರುವಳು……..
ಕವನದ ಸಾಲುಗಳು
ಅವಳ ಗೆಜ್ಜೆಯನಾದದ
ಹೆಜ್ಜೆಯ ಗುರುತುಗಳು..
ಹಾಡಿನ ಪಲ್ಲವಿಯೂ
ಅವಳು ಬಿರುವ ಕಿರುನಗೆಯೂ….
ಆಕೆಯ ಸಿಹಿ ಮುತ್ತುಗಳೇ..
ಮಳೆಯ ಆ ತುಂತುರು ಹನಿಗಳು..
ಬಾನಲ್ಲಿ ಬಂದು ಹೋಗುವ
ಕಾಮನಬಿಲ್ಲಿನಂತೆ ನೀನು..
ಬಣ್ಞಬಣ್ಣದ ನೆನಪು ಬಿತ್ತಿ ಹೋದೆಯೇನು….?
ನನ್ನ ಹಾಡಿನ ಅಂತರಾಳ ಅವಳು
ನನ್ನ ಬಾಳಿನ ಒಡತಿ ಇವಳು..
ಹಾಡಿಗೆ ಸ್ಪೂರ್ತಿಯಾಗಿ….
ಪದಗಳಿಗೆ ಭಾವವಾಗಿ…
ನನ್ನೊಡನೆ ಸೇರು ಮೆಲ್ಲಗೆ..
*********************************
Good