ಹಾಯ್ಕುಗಳು
ಭಾರತಿ ರವೀಂದ್ರ
ಸ್ವರ್ಗ
ತಾಯಿ ಸ್ವರೂಪ :
ಅಕ್ಕನ ಮಡಿಲದು,
ಇದುವೇ ಸ್ವರ್ಗ.
ಮನ
ಹಸಿದ ಹೊಟ್ಟೆ :
ನಿದ್ರೆಗೆ ಜಾಗವೆಲ್ಲಿ,
ಜಾಗ್ರತ ಮನ.
ನೆಮ್ಮದಿ
ಇರೆ ನೆಮ್ಮದಿ :
ಒಬ್ಬರಿಗೊಬ್ಬರದು,
ಚಿಂತೆ ಮಾತೆಲ್ಲಿ.
ಹೃದಯ
ಶಿಲೆ ಹೃದಯ :
ಈ ಜಗ, ಮಮತೆಯ
ಸೆಲೆ ಸಿಗದು.
ಸ್ನೇಹ
ತುಂಟು ಮನಸ್ಸು :
ಬಳಲಿದ ತೃಷೆಗೆ,
ಸ್ನೇಹ ಸಿಂಚನ.
*************************
ಬಹಳ ಸುಂದರ
ನೀವು ಇಷ್ಟು ಚೆನ್ನಾಗಿ ಬರೆಯುತ್ತೀರಿ ಎಂದು ಗೊತ್ತಿರಲಿಲ್ಲ ತುಂಬಾ ಚೆನ್ನಾಗಿವೆ ಹಾಯ್ಕು ಗಳು