ಅನುವಾದ ಸಂಗಾತಿ

ಕವಿತೆ

ಕನ್ನಡ ಮೂಲ: ಪೂರ್ಣಿಮಾ ಸುರೇಶ್

ಇಂಗ್ಲೀಷಿಗೆ: ನಾಗರೇಖಾ ಗಾಂವಕರ್

ಸಂವಿಧಾನ ಶಿಲ್ಪಿಗೆ

ಗಂಡು ಹುಡುಗ ಆಗಬಾರದಿತ್ತೇ!
ಆ ನಿಡುಸುಯ್ಲು
ಹರಿತ ಚೂರಿಯಾಗಿ
ಮರ್ಮವನ್ನು ಇರಿಯುತ್ತಿತ್ತು.
ಪಾದದ ಕೆಳಗಿನ ಮಣ್ಣ
ಜಾರದಂತೆ ಒತ್ತಿಟ್ಟುಕೊಳ್ಳಬೇಕು.
ನೆಟ್ಟ ನೋಟದಿಂದ ನೋಡುತ್ತಿದ್ದೆ

ನೀವು ನೆನಪಾಗುವಿರಿ.

ನಿನ್ನ ಮಗಳು ದೊಡ್ಡವಳಾದಳೇ!
ಒಳಕೋಣೆಗೆ ಸರಿಸಿಡು ಒಳಗೇ ಇರಲಿ
ನೋವು ಎದೆಯಾಳಕೆ ಬಸಿದು
ಒಡಲನುರಿಸಿ ಸಾಗುತ್ತಿದೆ
ಲಾವಾರಸ ಬಸಿದಿಟ್ಟು ಕೊಳ್ಳಬೇಕು
ಹರಿದ ದೃಷ್ಟಿಯಿಂದ ಕಾಣುತ್ತಿದ್ದೆ

ನೀವು ನೆನಪಾಗುತ್ತೀರಿ

ನೀನೀಗ ಅವನ ಹೆಂಡತಿ ನೆನಪಿರಲಿ!
ಅವನ ಹೆಜ್ಜೆಯ ಹಣೆಗೊತ್ತಿ ನಡೆ
ಸರ್ರನೆ ಜಾರಿ ಬಿದ್ದಿದ್ದೆ
ನನ್ನೊಳಗಿನಾಕೆಗೆ ಆತ್ಮಶಕ್ತಿ ತುಂಬಬೇಕು
ಇರಿವ ಕಣ್ಣಿಂದ ಕಂಡೆ

ನೀವು ನೆನಪಾಗುವಿರಿ.

ಅವಮಾನದ ಗಾಯ
ತಿರಸ್ಕೃತರಾಗುವ ನೋವು
ನೀವು ಉಂಡು,ಸೆಟೆದು ನಿಂತವರಲ್ಲವೇ?
ಶತಮಾನದ ಸಂಕೋಲೆ
ತುಕ್ಕು ಹಿಡಿದು ವಿಷವಾಗಿದೆ
ಅಪಮಾನದ ಬೂದಿಯಿಂದ
ಹೊಸ ಹುಟ್ಟನ್ನು
ಕಟ್ಟಿ ನಡೆದಾಡಬೇಕು.

ಇದೋ,ಹೆಜ್ಜೆ ಎತ್ತಿಟ್ಟಿದ್ದೇವೆ.
ನೀವು ನಮ್ಮೊಳಗಿದ್ದೀರಿ.

*************************

To the father of constitution

Wouldn’t you be a boy?
a sharp sickle of
her painful sigh
was piercings hard
my inner core.
Soil under my foot
to be held pressed
not to be slipped off.
I were looking at her.
….I remember thee.

Is your daughter,
matured?
push her inside the room.
The burning pain,
from my heart, spreaded
throughout the body.
Yes! The lava also tobe preserved.
I were looking through.
…I remember thee.

Forget not! Now you’re a wife!
bend your head at his feet.
follow him unto the last.
at once I had slipped off.
but she was tobe confident.
who was within me.
I were looking sharp
…I remember thee.

The wound of insult
pain of rejection
you injested.
still stood strong.
centuries restraints of society
rusted and poisonous

Must build a new life
out of this exploitation ash.
and walk with firm steps

Now! We are on our way
You are within us.

********************

Leave a Reply

Back To Top