Month: August 2020

ಕಥಾ ಯಾನ

ಕಥೆ ಸ್ವಾತಂತ್ರ್ಯ ಡಾ.ಪ್ರೇಮಲತ ಬಿ. ನನಗೀಗ ೧೯ ವರ್ಷ. ಕೆಲವೊಮ್ಮೆ ಆಲೋಚನಾ ಲಹರಿಯಿಂದ ನಾನು ಇತರರಿಗಿಂತ ವಿಭಿನ್ನ ಮಿಡಿತಗಳನ್ನು ಹೊಂದಿರುವಂತೆ ಅನಿಸಿದರೂ ತಾರುಣ್ಯದ ದಿನಗಳ ಎಲ್ಲ ಭಾವನೆಗಳ ಉಗಮದ ಪ್ರತಿ ಅನುಭವ ನನಗಾಗಿದೆ. ಮಧ್ಯಮವರ್ಗದ ಸಾಂಪ್ರದಾಯಿಕ ಕುಟುಂಬದಿಂದ ಬಂದಿರುವ ಕಾರಣದಿಂದಲೋ ಏನೋ, ಪ್ರೀತಿ-ಪ್ರೇಮದ ಅಲೆಗಳಲ್ಲಿ, ಡಿಸ್ಕೋ-ಕುಡಿತಗಳ ಅಮಲಿನಲ್ಲಿ ಕೊಚ್ಚಿಹೋಗುವ ಉನ್ಮಾದಕ್ಕಾಗಿ ಮನಸ್ಸು ತೀವ್ರವಾಗಿ ಮಿಡಿದಿಲ್ಲ. ಬದಲು ಸಮಾಜದಲ್ಲಿ ಮುಕ್ತತೆಯನ್ನು ಕಾಣುವ, ಸ್ವಾತಂತ್ರದ ಸಂಪೂರ್ಣ ಸ್ವೇಚ್ಚೆಗಾಗಿ ನನ್ನ ಮನಸ್ಸು ತುಮಲಗೊಳ್ಳುತ್ತದೆ. ಧೀಮಂತ ಯುವ ಶಕ್ತಿಯನ್ನು ಬಳಸಿ ಈ ಸಂಕುಚಿತ […]

ಕಾವ್ಯಯಾನ

ಕವಿತೆ ನನ್ನ ಶ್ರಾವಣ ಅನಿತಾ ಪಿ. ಪೂಜಾರಿ ತಾಕೊಡೆ. ಕರುಳ ನಂಟಿನ ಪ್ರೀತಿ ಪ್ರತಿರೂಪಗಳಕಂಡುಂಡು ಬೆಳೆದ ಮನೆಯಹೊಸ್ತಿಲು ದಾಟಿದೆನಲ್ಲ ಅಂದುಬಾಳಿ ಬದುಕುವ ಮನೆಗೆ ಬಲಗಾಲಿಟ್ಟು ನೆನಪಿನ್ನೂ ಹಸಿರೇ ಶ್ರಾವಣ ಸಿರಿಯಂತೆಅಂದು ಮೊದಲ ಬಾರಿ ತವರಿಗೆ ಬಂದಾಗಮುಳ್ಳನ್ನು ಬದಿಗೊತ್ತಿ ಖುಷಿಯ ಹೂವುಗಳನ್ನೇ ಬಿಡಿಸಿಟ್ಟಿದ್ದು… ಶ್ರಾವಣ ಕಳೆದುಒಲ್ಲದ ಮನಸನು ಮೆಲ್ಲನೆ ಒಲಿಸಿ ಮುಂದೆ ನಡೆದಾಗಕಳೆದ ದಿನಗಳು ಸುತ್ತ ಸುಳಿದು.ಶ್ರಾವಣವೇ ನಿಲ್ಲು ನಿಲ್ಲೆಂದು ಮರುಗಿದ್ದು ಈಗಲೂ ಶ್ರಾವಣವೆಂದರೆ ಅದೇನೋ ಸೆಳವುಅಲ್ಲಿರುವ ಸಲುಗೆ ಇಲ್ಲಿರುವ ಬೆಸುಗೆಅಲ್ಲಿರುವ ಪ್ರೀತಿ ಇಲ್ಲಿರುವ ನೀತಿಎಲ್ಲವೂ ಬೇರೆ ಬೇರೆ […]

ಕಬ್ಬಿಗರ ಅಬ್ಬಿ – ಸಂಚಿಕೆ -7 ಕಾವ್ಯ, ವಾಸ್ತವ ಮತ್ತು ‌ವಿಜ್ಞಾನಗಳು ಮುಖಾಮುಖಿಯಾದಾಗ ಕಾವ್ಯ, ವಾಸ್ತವ ಮತ್ತು ‌ವಿಜ್ಞಾನಗಳು  ಮುಖಾಮುಖಿಯಾದಾಗ ಓಹ್! ನಮಸ್ಕಾರ ಸಾರ್!.. ಬನ್ನಿ..ಬನ್ನಿ.. ಹೀಗೆ ಬನ್ನಿ! ಇದೇ ನೋಡಿ! ನಮ್ಮ ಕವಿಗಳ ಮನೆಯ ಡ್ರಾಯಿಂಗ್ ರೂಂ,  ಎಷ್ಟು ವಿಶಾಲವಾಗಿದೆ ಅಲ್ವಾ. ಕೆಲವೇ ಕೆಲವು ಪೀಠೋಪಕರಣಗಳು, ಅವರಿವರು ಬಂದಾಗ, ಮುಖಕ್ಕೆ ಮುಖ ಕೊಟ್ಟು ಮಾತಾಡಲು, ಕೆಲವೊಮ್ಮೆ ಮುಖವಾಡ ತೊಟ್ಟು ಮಾತಾಡಲೂ. ಸ್ವರಗಳು ಕಂಪಿಸುವ ಮಾತುಗಳು, ಸ್ವರಗಳು ಸರೀಸೃಪದ ಹಾಗೆ ಹರಿದಾಡುವ ಮಾತುಗಳು, ಹಾವಿನಂತೆ ಬುಸುಗುಟ್ಟುವ ಮಾತುಗಳು, […]

ಏಕಾಂತದ ನಿರೀಕ್ಷೆಯಲ್ಲಿ

ಕವಿತೆ ಏಕಾಂತದ ನಿರೀಕ್ಷೆಯಲ್ಲಿ ತೇಜಾವತಿ.ಹೆಚ್.ಡಿ. ಬಹಳ ಖುಷಿಯಾಗಿದ್ದೆ ನಾನುಹರೆಯದ ವಯಸ್ಸಿನಲ್ಲಿ ಮೂಡಿದಅಸ್ಪಷ್ಟ ಕನಸುಗಳಿಗೆ ರೆಕ್ಕೆಪುಕ್ಕ ಕಟ್ಟಿಕೊಂಡುನನ್ನದೇ ಕಲ್ಪನಾ ಲೋಕದಲ್ಲಿ ತಾರೆಯಾಗಿ ಪ್ರಜ್ವಲಿಸಿದ್ದೆ ದಿಂಬಿಕೆ ತಲೆಗೊಡುವುದೇ ತಡನಿದ್ರಾದೇವಿಗೆ ಶರಣಾಗುತ್ತಿದ್ದೆಗುಡಿಸಿಲಿನ ಅಂಗಳದಿ ಕುಳಿತುಅರಮನೆಯ ರಾಣಿಯಾಗಿದ್ದೆಅತೀ ಸೂಕ್ಷ್ಮ ಸಂವೇಗಗಳಿಗೂ ಪ್ರತಿಕ್ರಿಯಿಸುತ್ತಾಚಳಿಗೆ ಬೆಂಕಿ ಕಾಯಿಸುವಾಗಮಾರು ದೂರವಿರುವಾಗಲೇನೆಗೆದು ಹೌಹಾರಿ ಬೀಳುತ್ತಿದ್ದೆ ಎಡವಿದ ಕಲ್ಲಿಗೂ ಕಂಬನಿಗರೆದುಮಳೆಯಲ್ಲಿ ತೋಯುತ್ತಿದ್ದೆಪುಟ್ಟ ಪುಟ್ಟ ಕಂಗಳಲಿ ದೊಡ್ಡ ದೊಡ್ಡ ಖುಷಿಯ ಕ್ಷಣಗಳನ್ನು ಸೆರೆಹಿಡಿಯುತ್ತಿದ್ದೆ ಪ್ರತಿ ವೀಕೆಂಡ್ ಬಂತೆಂದರೆ ಸಾಕುಕಾಲಿಗೆ ಚಕ್ರ ಕಟ್ಟಿದವಳಂತೆ ಗರಗರ ಗಿರಕಿ ಹೊಡೆಯುತ್ತಿದ್ದೆ ಬರುಬರುತ್ತಾ….ಕಾಯ ಗಟ್ಟಿಗೊಂಡುಮನಸ್ಸು ಪಕ್ವವಾಗಿಚರ್ಮ ಸುಕ್ಕುಗಟ್ಟಿಅಂತರಂಗ […]

ನನ್ನ ತಂದೆ, ನನ್ನ ಹೆಮ್ಮೆ

ನೆನಪು ಶ್ರೀನಿವಾಸ ಖರೀದಿ ತಂದೆಯವರ ಹೆಸರು: ಶ್ರೀ ಕೆ.ಎನ್. ಶ್ರೀಧರಮೂರ್ತಿ ಭದ್ರಾವತಿ ಹುಟ್ಟಿ ಬೆಳೆದದ್ದು : ತರೀಕೆರೆ / ರಂಗೇನಹಳ್ಳಿ ವ್ಯವಹಾರ ಸ್ಥಳ : ಭದ್ರಾವತಿ ಸ್ವಾತಂತ್ರಕ್ಕಾಗಿ ಬ್ರಿಟೀಷರ ವಿರುದ್ದದ ಹೋರಾಟದಲ್ಲಿ ಭಾಗಿಯಾಗಿದ್ದ ನನ್ನ ತಂದೆ ಭದ್ರಾವತಿಯ ದಿವಂಗತ ಶ್ರೀ ಕೆ. ಎನ್.ಶ್ರೀಧರಮೂರ್ತಿ ಯವರು. 1931ರಲ್ಲಿ ಜನಿಸಿದ ಇವರು, ತಮ್ಮ ಹತ್ತನೇ ವಯಸ್ಸಿನಲ್ಲಿ ಮಹಾತ್ಮ ಗಾಂಧೀಜಿ ರವರ ಪಾದಗಳ ಸ್ಪರ್ಷಿಸುವ ಮೂಲಕ ತನ್ನಲ್ಲಿ ಸ್ವಾತಂತ್ರ ಹೋರಾಟದ ಕಿಚ್ಚು ರೂಡಿಸಿಕೊಂಡವರು. ಚಿಕ್ಕಂದಿನಲ್ಲೇ ನಾಯಕತ್ವಗುಣಗಳನ್ನು ಬೆಳೆಸಿಕೊಂಡಿದ ಇವರು, ತರೀಕೆರೆಯಲ್ಲಿ ತನ್ನ […]

ಕಾವ್ಯಯಾನ

ಮತ್ತೆ ಮಳೆಯಾಗಲಿ ಸುನೀಲ್ ಹೆಚ್ ಸಿ ಎದೆಯಲ್ಲಿ ಹಾಗೆ ಕುಳಿತಿರುವ ನೋವುಗಳೆಲ್ಲಾಅಳಿಸಿ ಹೋಗುವ ಹಾಗೆಮನಸಲ್ಲಿ ಬೆಂದು ಬೆಂಡಾಗಿರುವ ದುಃಖ ಗಳೆಲ್ಲಾತೊಳೆದು ಹೋಗುವ ಹಾಗೆಕಳೆದು ಹೋಗಿರುವ ಕಣ್ಣೀರ ಕ್ಷಣಗಳು ಮತ್ತೆನೆನಪಾಗದ ಹಾಗೆಒಣಗಿ ಬಣ ಗುಟ್ಟಿದ್ದ ಕಣ್ಣುಗಳು ಆನಂದದಲ್ಲಿ ತುಂಬಿ ತುಳುಕುವ ಹಾಗೆಹೃದಯದ ಕಿಟಕಿ ಬಳಿ ಮತ್ತದೇ ಶಬ್ದಇಂಪಾಗಿ ಕೇಳುವ ಹಾಗೆಹೆಜ್ಜೆ ಇಡಲು ಹೆದರುತ್ತಿದ್ದ ಕಾಲುಗಳಿಗೆ ಶಕ್ತಿಸಿಂಪಡಿಸುವ ಹಾಗೆಬರಹಗಳೇ ಅಳಿಸಿ ಹೋಗಿದ್ದ ಹಣೆಯಲ್ಲಿ ಕೇಸರಿ ತಿಲಕ ಸದಾ ನಗುವ ಹಾಗೆಎಲ್ಲಾ ಕಳೆದು ಹೃದಯದಲ್ಲಿ ಪ್ರೀತಿ ಎಂಬ ಹಸಿರುಮತ್ತೆ ಚಿಗುರುವ ಹಾಗೆನಮ್ಮ […]

ಕಾವ್ಯಯಾನ

ಬಿಡುಗಡೆ ರುಕ್ಮಿಣಿ ನಾಗಣ್ಣವರ ನಂಬಿಗಸ್ಥ ಕುನ್ನಿಯಂತೆ ಪಾಲಿದತಲೆತಲೆಮಾರಿನ ಮೌನವನ್ನುಮತ್ತೊಮ್ಮೆ ಮುರಿದುದವಡೆಯಲ್ಲಿ ಒತ್ತಿ ಹಿಡಿದಸಿಟ್ಟು ಬಳಸಿ ಹೊಟ್ಟೆಬಾಕರಹುಟ್ಟಡಗಿಸಬೇಕಿದೆ ತುತ್ತು ಅನ್ನಕ್ಕೆ, ತುಂಡು ಭೂಮಿಗೆಕೈ ಕಟ್ಟಿ, ಬಾಯಿ ಮುಚ್ಚಿ,ಟೊಂಕದಲ್ಲಿರಿಸಿದಸ್ವಾಭಿಮಾನ ಗಾಳಿಗೆ ತೂರಿಜೀತದಾಳಾಗಿ ದುಡಿಯುವಕಾಲ ದೂರಿಲ್ಲಅರಿಯಬೇಕಿದೆ ಅಗೋ…ಉರುಳಿಹೋದ ದಿನಗಳುಮರುಕಳಿಸುವ ಕರಾಳಕ್ರೌರ್ಯದ ಕೂಗುಇತ್ತಲೇ ಹೆಜ್ಜೆ ಇರಿಸಿದೆ ನರಳಾಟದ ಕೆಂಡದಲಿಅಂಡು ಸುಡುವ ಮೊದಲುಎಚ್ಚೆತ್ತುಕೊಳ್ಳಬೇಕಿದೆಕ್ರಾಂತಿಯ ಕಹಳೆ ಮೊಳಗಿಸಿನಮ್ಮವರಿಂದಲೇ ನಾವುಬಿಡುಗಡೆ ಹೊಂದಬೇಕಿದೆ.. *****************

ನಿಮ್ಮೊಂದಿಗೆ….

ಮನುಷ್ಯ ಭ್ರಮೆಗಳಲ್ಲಿ ಬದುಕಬಾರದೆಂದು ನಂಬಿದವನು ನಾನು. ಹೀಗಾಗಿಯೇ ಸಂಗಾತಿಬ್ಲಾಗ್ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರವಾದುದೇನೊ ಮಾಡಿಬಿಡುತ್ತದೆ ಮತ್ತು ಅತ್ಯುತ್ತಮ ಸಾಹಿತ್ಯ ಸೃಷ್ಠಿಗೆ ಕಾರಣವಾಗುತ್ತದೆಯೆಂಬ ಹುಸಿಭ್ರಮೆನನ್ನೊಳಗಿರಲಿಲ್ಲ ಮತ್ತು ಮುಂದೆಯೂ ಇರುವುದಿಲ್ಲ

ಪುಸ್ತಕ ಸಂಗಾತಿ

ಬೀಳದ ಗಡಿಯಾರ. ಕೃತಿಯ ಹೆಸರು: ಬೀಳದ ಗಡಿಯಾರ.ಪ್ರಕಟಣೆ: 2018ಬೆಲೆ: 90ರೂ.ಪ್ರಕಾಶಕರು: ಪ್ರೇಮ  ಪ್ರಕಾಶನ, ಮೈಸೂರು-570029 ಡಾ. ಬಸು ಬೇವಿನಗಿಡದ ಅವರ “ಬೀಳದ ಗಡಿಯಾರ” ಹಿಂದೆಲ್ಲ ಕೆಲವು ಮನೆಗಳಲ್ಲಿ ಎಷ್ಟು ಗಂಟೆಯಾಗಿದೆಯೋ ಅಷ್ಟುಸಲ ಢಣ್ ಢಣ್ ಎಂದು ಗಂಟೆ ಹೊಡೆಯುವ ಗಡಿಯಾರಗಳಿದ್ದವು. ಅಂತಹ ಗಡಿಯಾರ ಆಗ ಮಕ್ಕಳಾಗಿದ್ದ ನಮಗೆ ಆಕರ್ಷಣೆಯ ಕೇಂದ್ರವಾಗಿತ್ತು. ಹನ್ನೆರಡು ಗಂಟೆಯಾಗುವಾಗ ಅದು ಹನ್ನೆರಡುಸಾರಿ ಗಂಟೆ ಬಾರಿಸುವುದರಿಂದ ಅದನ್ನು ಕೇಳಲು ಗಡಿಯಾರದ ಮುಂದೆ ಕಾತುರದಿಂದ ನಿಂತಿರುತ್ತಿದ್ದುದೂ ಇದೆ. ಆದರೆ ಹಾಗೇ ಮುಂದುವರಿದು ಹದಿಮೂರು, ಹದಿನಾಲ್ಕು ಹೀಗೆ […]

ಕಾವ್ಯಯಾನ

ದೇಶಪ್ರೇಮ ಗೋಪಾಲತ್ರಾಸಿ ದೇಶಎಂದರೆಸೀಮೆಯೊಳಗಿನಬರೇಭೂಭಾಗವಲ್ಲ ದೇಶಪ್ರೇಮಕೋಟೆಯೇರಿಊದುವತುತ್ತೂರಿಯೇನಲ್ಲ ದೇಶಪ್ರೇಮ,ವ್ವವಹಾರ, ರಾಜಕೀಯಧರ್ಮ-ರೀತಿ-ರಿವಾಜುಪೊರೆಕಳಚುವಸಹಜಮಾನವಪಥ ನಮ್ಮಷ್ಟೇ, ನಮ್ಮಂತಹಸಹಜೀವದಕುರಿತಷ್ಟುಕಾಳಜಿ ಸಕಲಜೀವಜಂತುಗಳತೆಕ್ಕೆಯೊಳಗೆಆಹ್ವಾನಿಸಿಕೊಳ್ಳುವಕಾರುಣ್ಯ ದೇಶಪ್ರೇಮಎಂದರೆದೇಶದಕೊನೇಯನಿರ್ಗತಿಕನಯೋಗಕ್ಷೇಮ. ******************

Back To Top