ನಿಮ್ಮೊಂದಿಗೆ….

ಎರಡು ಮಾತು

ಗೆಳೆಯರೆಲ್ಲರಿಗೂ ಸ್ವಾತಂತ್ರ್ಯ ದಿನ ಶುಭ ಹಾರೈಕೆಗಳು

ಮನುಷ್ಯ ಭ್ರಮೆಗಳಲ್ಲಿ ಬದುಕಬಾರದೆಂದು ನಂಬಿದವನು ನಾನು. ಹೀಗಾಗಿಯೇ ಸಂಗಾತಿಬ್ಲಾಗ್ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರವಾದುದೇನೊ ಮಾಡಿಬಿಡುತ್ತದೆ ಮತ್ತು ಅತ್ಯುತ್ತಮ ಸಾಹಿತ್ಯ ಸೃಷ್ಠಿಗೆ ಕಾರಣವಾಗುತ್ತದೆಯೆಂಬ ಹುಸಿಭ್ರಮೆನನ್ನೊಳಗಿರಲಿಲ್ಲ ಮತ್ತು ಮುಂದೆಯೂ ಇರುವುದಿಲ್ಲ

ಕಳೆದ ವರ್ಷ ನಾನೀ ಬ್ಲಾಗ್  ಶುರು ಮಾಡಿದಾಗ ಈ ಮಟ್ಟದಲ್ಲಿ ಬರಹಗಾರರು-ಓದುಗರು ಸ್ಪಂದಿಸುತ್ತಾರೆಂದು ಸ್ವತ: ನಾನೇ  ಊಹಿಸಿರಲಿಲ್ಲ.

ಯಾವುದೇ ನಿರ್ದಿಷ್ಠ ಗುಂಪಿನೊಂದಿಗೆ ಗುರುತಿಸಿಕೊಳ್ಳದ ಮತ್ತು ಪೂರ್ವಾಗ್ರಹ ಪೀಡಿತ ಸಿದ್ದಾಂತಗಳ ಹೆಣಬಾರವನ್ನು ಹೆಗಲ ಮೇಲೆ ಹೊತ್ತುಕೊಂಡಿರದ ಸಂಗಾತಿ ಪುಟ್ಟಹೆಜ್ಜೆಗಳನ್ನಿಡುತ್ತಲೇ ಬಹುದೂರ ಸಾಗಬೇಕಿದೆ.

ಈ ಪಯಣದಲ್ಲಿ ಬರಹಗಾರರು- ಓದುಗರು ಸಂಗಾತಿಯ ಜೊತೆಗಿರುತ್ತಾರೆಂಬ ನಂಬಿಕೆ ನನಗಿದೆ.

ಕು.ಸ.ಮದುಸೂದನ ರಂಗೇನಹಳ್ಳಿ

11 thoughts on “ನಿಮ್ಮೊಂದಿಗೆ….

  1. ಬರಹಗಾರರಿಗೆ ಬರೆಯಲೊಂದು ವೇದಿಕೆ ಕಲ್ಪಿಸಿದ ನಿಮಗೆ ಧನ್ಯವಾದಗಳು

  2. ನಾನು ಈಗಷ್ಟೇ ಸಂಗಾತಿಯಲ್ಲಿ ಅಂಬೆಗಾಲನ್ನಿಡುತ್ತಿದ್ದೇನೆ. ಸಂಪಾದಕರ ಸಹೃದಯತೆ ಮೆಚ್ಚತಕ್ಕದ್ದು……..ನಿಮಗೆ ನನ್ನ ಹೃತ್ಪೂರ್ವಕ ನಮನಗಳು
    ಅರುಣ ರಾವ್

  3. ಯಾವುದೇ ಗುಂಪನ್ನು ಸೇರದ ಸ್ವತಂತ್ರ ಸಂಗಾತಿ ಅತ್ಯಂತ ಆಪ್ತವೆನಿಸುತ್ತದೆ. ಹಾಗಾಗಿಯೇ ಸಂಗಾತಿಗೆ ಗೆಳೆಯರು ಬೇಗ ಒಲಿಯುತ್ತಾರೆ. ಹೀಗೆಯೇ ಸಾಗಲಿ. ನಿರಂತರ.

    ಸಂಗಾತಿಯನ್ನು ಹುಟ್ಟುಹಾಕಿದವರಿಗೆ ಅನಂತ ವಂದನೆಗಳು.

  4. ಅಪ್ರತಿಮ ಅದ್ವಿತೀಯ ಪ್ರಯತ್ನ
    ಸಂಪಾದಕರಿಗೆ ಹಾಗೂ ಬಳಗಕ್ಕೆ
    ಅಭಿಮಾನದ ಅಭಿನಂದನೆಗಳು

    1. ಒಳ್ಳೆಯ ಉದ್ದೇಶ ನಿಸ್ವಾರ್ಥ ಸಾಹಿತ್ಯ ಸೇವೆ ನಿಮ್ಮದು ಎಷ್ಟೋ ಪ್ರತಿಭೆಗಳ ಬೆಳಕಿಗೆ ಕಾರಣರಾಗಿದ್ದೀರಿ ಅಪ್ರತಿಮ ಸಹೃದಯತೆ ಕನ್ನಡದ ಕಳಕಳಿಯನ್ನು ತೋರಿಸುತ್ತ ಯಾವುದೇ ತಂಡ ವಿಲ್ಲದೆ ಏಕಾಂಗಿಯಾಗಿ ಇಂಥ ಸಾಹಸದ ಕೆಲಸ ಮಾಡುತ್ತಿದ್ದೀರಿ ಎಲ್ಲಾ ಕನ್ನಡಿಗರು ನಿಮ್ಮ ಕೈ ಬಲಪಡಿಸಲಿ ಕನ್ನಡದ ಸೇವೆ ಮಾಡಲು ಕನ್ನಡಾಂಬೆ ನಿಮಗೆ ಹೆಚ್ಚಿನ ಆಯುರಾರೋಗ್ಯ ಭಾಗ್ಯ ನೀಡಲಿ ಅಭಿನಂದನೆಗಳು ಮಧು ಸರ್ ಸ್ವಾತಂತ್ರ ದಿನದ ಶುಭಾಶಯಗಳು

      1. ಸಾಹಿತ್ಯ ಸಂಗಾತಿ ಹೊಸ ಪ್ರಯೋಗಗಳನ್ನು ಮಾಡಿದೆ..ಮಾಡುತ್ತಿದೆ.‌ಸಾಹಿತ್ಯ ಸಂಗಾತಿ ವೇದಿಕೆ ಏನು ಮಾಡಬಹುದು? ಕನ್ನಡದ ಬ್ಲಾಗ್ ಗಳು ಏನು ಮಾಡಬೇಕಿತ್ತು ? ಯಾವ ಕಾಲದಲ್ಲಿ ಏನು ಮಾಡಬೇಕಿತ್ತೋ ಅದನ್ನೇ ಮಾಡುತ್ತಿದೆ ಸಂಗಾತಿ . ನನಗೆ ಬರೆಯುವ ಸ್ವಾತಂತ್ರ್ಯ ಕಲ್ಪಿಸಿದ ಮಧುಸೂದನ್ ಸರ್ ಗೆ ಥ್ಯಾಂಕ್ಸ.ಹ
        ಜೊತೆಗೆ
        ಅವರ ಕವಿತೆಗಳು ವರ್ತಮಾನಕ್ಕೆ ಮುಖಾಮುಖಿಯಾಗಿವೆ.

  5. ಸರ್,
    ನಿಮ್ಮ ಪ್ರಯತ್ನ ನಮಗೆಲ್ಲಾ ರಂಗ ದೊರಕಿಸಿದೆ. ತುಂಬಾ ಒಳ್ಳೆಯ ಕವಿತೆಗಳನ್ನು, ಲೇಖನಗಳನ್ನು ನಾನು ‘ಸಂಗಾತಿ’ ಪತ್ರಿಕೆಯಲ್ಲಿ ಓದುತ್ತಿರುವೆ.
    ಅನಾಮಿಕ ಬರಹಗಾರರಿಗೆ ಮುಖವಾದ ಸಂಗಾತಿ ಪತ್ರಿಕೆಗೆ ಮತ್ತು ನಿಮಗೆಲ್ಲರಿಗೆ ಧನ್ಯವಾದಗಳು ಎದೆಯೊಳಗೆ ಅರಳಿದ ಅಕ್ಷರಮೊಗ್ಗುಗಳು.

  6. ಭಾವಯಾನಕ್ಕೆ ಅಗತ್ಯವಾಗಿ ಸಂಗಾತಿ ಬೇಕೇ ಬೇಕು.ತೆರೆಮರೆಯಲ್ಲಿರುವ ಬರಹಗಾರರಿಗೆ ಉತ್ತಮ ವೇದಿಕೆ ದೊರಕಿಸಿ ಕೊಡುತ್ತಿದ್ದೀರಿ ನಿಮ್ಮ ಈ ಸಾಹಿತ್ಯ ಸೇವೆ ಹೀಗೆ ಮುಂದುವರೆಯಲಿ.

  7. ಸಂಗಾತಿಗೆ ನಾನು ಹೊಸಬಳು. ಆದರೆ ಮಧುಸೂಧನ ಅವರ ಕವಿತೆಗಳನ್ನು ಬೇರೆಡೆಯೂ ಓದುತ್ತಲೇ ಇರುತ್ತೇನೆ. ಸ್ವತಃ ಅವಕು ಚಿಕ್ಕ ಕವಿತೆಗಳಲ್ಲಿ ದೊಡ್ಡ ಮಿಡಿತವೊಂದನ್ನು ಮುಂದಿಟ್ಟುಬಿಡುತ್ತಾರೆ. ಅದ್ಭುತವಾದ ಪ್ರತಿಭೆ.
    ಸಂಗಾತಿ ಎನ್ನುವ ಈ ಜಾಲಜಗುಲಿಯಲ್ಲಿ ಇನ್ನೂರಕ್ಕೂ ಹೆಚ್ಚು ಬರಹಗಾರರನ್ನು ಬರೆಯಲು ಹುರಿದುಂಭಿಸುತ್ತಿರುವ ಅವರ ಏಕಾಂಗಿ ಪ್ರಯತ್ನಕ್ಕೆ ಯಾವ ಪ್ರಶಸ್ತಿ ನೀಡಿದರೂ ಕಡಿಮೆಯೇ. ಮಧುಸೂಧನ ಅವರ ಈ ಪ್ರಯತ್ನವನ್ನು ಮತ್ತಷ್ಟು ಜನರಿಗೆ ತಿಳಿಸಿಕೊಟ್ಟು ಸಂಗಾತಿಯನ್ನು ಬರಹಗಾರರಾದ ನಾವೆಲ್ಲ ಮತ್ತಷ್ಟು ಬೆಳೆಸಬಹುದು.
    ಸಂಗಾತಿಗೆ ತುಂಬು ಹೃದಯದ ಅಭಿನಂಧನೆಗಳು ಮತ್ತು ಶುಭಾಶಯಗಳು

  8. ನಿಜ….ನಿರೀಕ್ಷೆಗಳು‌ ಹುಸಿಯಾಗಬಹುದು ಆದರೆ ದೃಢನಂಬಿಕೆಗಳು,ಆತ್ಮ ವಿಶ್ವಾಸಗಳು ಎಂದಿಗೂ ತಾರತಮ್ಯದ ಬದುಕಿನಿಂದ ಮೇಲೆ ಬರಬೇಕು.ಎಂಬ ಮನೋಭಾವ ತಮ್ಮದು…ಎಲ್ಲರ ಮನದಂಗಳದಲ್ಲಿಯೇ *ಸಂಗಾತಿ* ಎನ್ನುವ ಮಗುವನ್ನು ಬೆಳೆಯಲು ಬಿಟ್ಟರುವುದು ನಿಮ್ಮ ದಿಟ್ಟ ನಿಲುವಿಗೆ ಸಾಕ್ಷಿ……… ಶುಭವಾಗಲಿ ‌ಸರ್

  9. ನಿಜವಾದ ಸಾಹಿತ್ಯದ ಕಾಳಜಿಯಿಂದ ನಿಷ್ಪಕ್ಷಪಾತವಾಗಿ ಪ್ರಕಟವಾಗಿತ್ತರುವ ಸಂಗಾತಿ ಉತ್ತಮ ಸಾಹಿತ್ಯದ ರಸದೌರಸದೌತಣ ನೀಡುತ್ತಿದೆ. ಸಂಪಾದಕ ಕು.ಸ.ಮಧುಸೂದನ್ ರ ಪ್ರಯತ್ನ ಪ್ರಶಂಸಾರ್ಹ.

Leave a Reply

Back To Top