ಕಾವ್ಯಯಾನ

ಮತ್ತೆ ಮಳೆಯಾಗಲಿ

ಸುನೀಲ್ ಹೆಚ್ ಸಿ

ಎದೆಯಲ್ಲಿ ಹಾಗೆ ಕುಳಿತಿರುವ ನೋವುಗಳೆಲ್ಲಾ
ಅಳಿಸಿ ಹೋಗುವ ಹಾಗೆ
ಮನಸಲ್ಲಿ ಬೆಂದು ಬೆಂಡಾಗಿರುವ ದುಃಖ ಗಳೆಲ್ಲಾ
ತೊಳೆದು ಹೋಗುವ ಹಾಗೆ
ಕಳೆದು ಹೋಗಿರುವ ಕಣ್ಣೀರ ಕ್ಷಣಗಳು ಮತ್ತೆ
ನೆನಪಾಗದ ಹಾಗೆ
ಒಣಗಿ ಬಣ ಗುಟ್ಟಿದ್ದ ಕಣ್ಣುಗಳು ಆನಂದದಲ್ಲಿ ತುಂಬಿ ತುಳುಕುವ ಹಾಗೆ
ಹೃದಯದ ಕಿಟಕಿ ಬಳಿ ಮತ್ತದೇ ಶಬ್ದ
ಇಂಪಾಗಿ ಕೇಳುವ ಹಾಗೆ
ಹೆಜ್ಜೆ ಇಡಲು ಹೆದರುತ್ತಿದ್ದ ಕಾಲುಗಳಿಗೆ ಶಕ್ತಿ
ಸಿಂಪಡಿಸುವ ಹಾಗೆ
ಬರಹಗಳೇ ಅಳಿಸಿ ಹೋಗಿದ್ದ ಹಣೆಯಲ್ಲಿ ಕೇಸರಿ ತಿಲಕ ಸದಾ ನಗುವ ಹಾಗೆ
ಎಲ್ಲಾ ಕಳೆದು ಹೃದಯದಲ್ಲಿ ಪ್ರೀತಿ ಎಂಬ ಹಸಿರು
ಮತ್ತೆ ಚಿಗುರುವ ಹಾಗೆ
ನಮ್ಮ ಪ್ರೀತಿಯಲ್ಲಿ ನಮಗೆ ಅರಿವಿಲ್ಲದೆಯೇ ಪವಾಡಗಳೆ ನಡೆದು ಹೋಗುವ ಹಾಗೆ

*********************

12 thoughts on “ಕಾವ್ಯಯಾನ

Leave a Reply

Back To Top