Month: May 2020

ಹರಟೆ

ಇಲಿ ಪುರಾಣ ಶೀಲಾ ಭಂಡಾರ್ಕರ್ “ಇಲಿಗಳ ಸಂಸಾರದಲ್ಲೂ ಅಜ್ಜಿಯರು ಇರ್ತಾರಾ? ರಾತ್ರಿ ಮಲಗುವಾಗ ಒಳ್ಳೊಳ್ಳೆ ನೀತಿ ಕತೆಗಳನ್ನು ಹೇಳಿ ಮಲಗಿಸ್ತಾರಾ? ಹೇಗೆ ತಪ್ಪಿಸಿಕೊಳ್ಳುವುದು ಅನ್ನುವ ಟಿಪ್ಸ್ ಹೇಳಿ ಕೊಡ್ತಾರಾ?” ಗೊಣಗ್ತಾ ಇದ್ದೆ ನಾನು. ಮಕ್ಕಳಿಬ್ಬರೂ ಮುಖ ಮುಖ ನೋಡಿಕೊಂಡು “ಅಮ್ಮ ಶಶಿಕಪೂರ್” ಅಂತ ಮುಸಿ ಮುಸಿ ನಗ್ತಾ ಇದ್ರು. ನಮ್ಮನೇಲಿದ್ದ ಗೊಣಗುವ ಶೇಷಿಯ ಕತೆ ಹೇಳಿದ್ನಲ್ಲ. ಶೇಷಿಗೆ ದಿನ್ನು, ಶಶಿಕಪೂರ್ ಅಂತ ಹೆಸರಿಟ್ಟಿದ್ದನ್ನೂ ಹೇಳಿದ್ದೇನೆ. ನಿಮಗೆ ಮರೆತಿರಬಹುದು. ನನಗೆ ಕೋಪ ಬಂತು. “ನಿಮಗೇನು ಗೊತ್ತು? ನಗ್ತಿದಿರಲ್ಲ ನೀವು!” […]

ಕಾವ್ಯಯಾನ

ಎರಡು ಲಾಕ್ ಡೌನ್ ಕವಿತೆಗಳು ಶ್ರೀದೇವಿ ಕೆರೆಮನೆ ಮಾತು ಮುಗಿದ ಹೊತ್ತಲ್ಲಿ ನೀನು ಸಂಪರ್ಕಗಳೆಲ್ಲವನ್ನೂ ನಿಲ್ಲಿಸಿ ಅಂತರ ಕಾಯ್ದುಕೊಳ್ಳ ತೊಡಗಿದ ಮೇಲೆ ನಾನು ಫೋನು ಕೈಗೆತ್ತಿಕೊಂಡೆ ಅತ್ತಕಡೆಯ ನೀರಸ ಮಾತುಗಳ ಹೊರತಾಗಿಯೂ ಒಂದಿಷ್ಟು ಜೀವ ತುಂಬಲು ಯಾವುದೋ ಹಳೆ ನೆನಪುಗಳ ಹೆಕ್ಕಿ ಪೋಣಿಸುತ್ತ ಮಾಲೆ ಮಾಡಿದರೂ ಕಾಣದ ಉತ್ಸಾಹ ನಿನ್ನ ಮಾತಿನಲ್ಲಿ ಅರ್ಥವಿಲ್ಲದ ನೀರಸ ಮಾತುಗಳ ಆಡುವುದಾದರೂ ಅದೆಷ್ಟು ಸಮಯ ? ಹತ್ತೇ ನಿಮಿಷಗಳಲ್ಲಿ ಮಾತು ಸೋತು ಅಲ್ಲಿಯೂ ಅಂತರ ಇಣುಕಿ ವ್ಯರ್ಥ ಪ್ರಲಾಪವೆನಿಸಿದಾಗ ಮತ್ತದೇ ಅಂತರ […]

ಬುದ್ಧ ಪೂರ್ಣಿಮೆಯ ವಿಶೇಷ -ಕವಿತೆ

ಬುದ್ಧನಾಗಲಾರೆ…. ನಾಗರಾಜ ಹರಪನಹಳ್ಳಿ  ಗಾಳಿಯ ಮುಗಿಲಲ್ಲಿ ತೇಲಿದ ಮೋಡಗಳು ಒಲವಿನ ಸರಿಗಮ ಹಾಡಿದವು ದೂರದಲ್ಲಿದ್ದು ನೀನಾಡಿದ ಮಾತುಗಳು ಮನದಲ್ಲಿ ಪ್ರೇಮ ಪಲ್ಲವಿಯಾದವು ಸಿದ್ಧಾರ್ಥನಾಗಿಯೇ ಉಳಿಯುವೆ ಬುದ್ಧನಾಗಲಾರೆ…. ನೀ ನಿದ್ರಿಸಿ ನನ್ನ ಕನಸು ಕಾಣುವಾಗ ಕಾರಣ ಹೇಳದೇ ಹೋಗಲಾರೆ ಮೋಕ್ಷದ ಬೆನ್ನು ಹತ್ತಲಾರೆ ಬುದ್ಧನಾಗಲಾರೆ ನಿನ್ನೊಲವೇ ನನಗೆ ಬೋಧಿವೃಕ್ಷವಾಗಿರುವಾಗ!! ಬಗೆಹರಿಯದ ಪ್ರಶ್ನೆಗಳಿಗೆ ಉತ್ತರ ಹುಡುಕ ಹೊರಡುವುದೆಂದರೇನು? ಸಿದ್ಧಾರ್ಥ ಮೋಕ್ಷವ ಹುಡುಕ ಹೊರಟಂತೆಯೇ ? ಗರ್ಭದಲ್ಲಿ ಕೋಶ ಬೆಳೆದಂತೆ ತನ್ನದೇ ಜೀವಕೋಶದ ಆಶ್ರಯದಿ ರಕ್ತಮಾಂಸವ ಪ್ರೀತಿಯ ತಾಯ್ತನವನುಂಡು ಬೆಳೆದಂತೆಯೇ? ಮೋಕ್ಷದ […]

ಬುದ್ಧ ಪೂರ್ಣಿಮೆಯ ವಿಶೇಷ -ಕವಿತೆ

ವಿಶ್ವವೇ….ಶರಣು.. ಶಿವಲೀಲಾ ಹುಣಸಗಿ ಯಾವ ಅಮೃತ ಗಳಿಗೆಯೋ ನಾ ಕಾಣೇ.. ಅರಿವಿನ ಕ್ಷೀತಿಜದೊಳು…                                                ಶಶಿಯುದಯಿಸಿದಾ ಕ್ಷಣದೊಳು ಹೊಸದೊಂದು ಹುರುಪು,ನವೋಲ್ಲಾಸದ ಸುಖ ತಾರೆಯದಿಪತಿಗೆ ಸವಾಲಾಗುವ ಕ್ಷಣಗಳು.. ಬಯಸಿದ್ದೊಂದು…ಆಗುವುದೊಂದು.. ಸುಖಾತೀತ ಭಾವಗಳೆಲ್ಲ..ಮರಿಚೀಕೆಯಾಗಿಂದು     ಮುಳ್ಳಿನ ಸೊಲ್ಲುಗಳಿಗೊಂದಂದು ಎಕ್ಕೆಹಾಲನೇರೆವಂತೆ…ಸೂಸಿದ ಹನಿಗಳು.. ಯ್ಯಾರು ಕಾಡಲಿಲ್ಲ,.ಬೇಡಲಿಲ್ಲ ನಿನ್ನೆದೆಗೆ ಇರಿಯಲಿಲ್ಲ ಆದರೂ ಹೃದಯ ಕೇಳಲಿಲ್ಲ..ಬಣ್ಣಗಳೆಲ್ಲ ಮಾಸಿದಂತೆ.. ಬರಸಿಡಿಲು ಬಡಿದಂತೆ..ಏಕಾಏಕೀ..ಚಿತ್ತ ಹೊರಟಂತೆ.. ಕಂಗಳಿಗೆ ಬರೀ….ಮಿಂಚುಗಳು ಆರ್ಭಟದಂತೆ.. ಯ್ಯಾರು ಕರೆದರೋ…? ಯ್ಯಾರು ಬಂದರೋ.?        ನಡುರಾತ್ರಿ ಶ್ವೇತಾಶ್ವಗಳ ರಥವೇರಿ ಮೌನ ನಡಿಗೆಯ ಬೀರಿ ಕಾಮದಮಲು ಕರಗಿತ?…ಕೂಸಿನ ಹಂಬಲ ತೀರಿತೇ.? ಎದೆಗಂಟಿದ ಬೆವರಹನಿಗಳು. […]

ಬುದ್ಧ ಪೂರ್ಣಿಮಾ ವಿಶೇಷ-ಕವಿತೆ

ಬುದ್ಧನಾಗದೇ ನಿನ್ನ ಗ್ರಹಿಸಲಾರೆ ಡಾ.ಗೋವಿಂದ ಹೆಗಡೆ ನಾನು ಕೇವಲ ಮನುಷ್ಯ. ಮಾನುಷ ಅನುಭವಗಳ ಬಗ್ಗೆ ಹೇಳಬಲ್ಲೆ ಅವ ಎತ್ತರ ಇವ ಕುಳ್ಳು ಇವ ಜಾಣ ಅವ ದಡ್ಡ ಅವನೋ ಕ್ರೂರಿ ಇವ ದಯಾಮಯಿ- ಹೀಗೆ ದೈವಿಕ ಅನುಭವಗಳ ಒರೆಗೆ ಹಚ್ಚಲಿ ಹೇಗೆ ‘ನಾವು ಮನುಷ್ಯರಾಗಿ ಬಂದಿಲ್ಲ ಮನುಷ್ಯರಾಗಲು ಬಂದಿದ್ದೇವೆ’ ಅನ್ನುತ್ತಾರೆ ‘ನಾವು ಮನುಷ್ಯರಾಗಿ ದೈವಿಕತೆಯನ್ನು ಹುಡುಕುತ್ತಿಲ್ಲ, ದಿವಿಜರೇ ಆಗಿದ್ದು ಮಾನುಷ ಅನುಭವ -ವನ್ನು ಹಾಯುತ್ತಿದ್ದೇವೆ’ ಎಂಬ ಮತವೂ ಇದೆ ನನಗೆ ಎರಡೂ ಅರಿವಿಗೆ ದಕ್ಕದೆ… ನೀನು ದೈವತ್ವದ […]

ಬುದ್ಧ ಪೂರ್ಣಿಮಾ ವಿಶೇಷ-ಕವಿತೆ

ಅರಿವೇ ಅಷ್ಟಾಂಗ ಶೃತಿ ಮೇಲುಸೀಮೆ ಅಜ್ಞಾನದ ಅಂಧಕಾರದಲ್ಲೊಂದು ಅರಿವಿನ ಅಂಕುರ ಅಮ್ಮನ ಕನಸಿನಲ್ಲೇ ಕರಿಯ ಹೂ ಮಾಲೆಯ ಪುರಸ್ಕಾರ ಅಶಿತ ಮುನಿಯ ಕಂಬನಿಯ ಕುಂಚ ಅಪ್ಪನ ಆಂತರಿಕ ತುಮುಲತೆಯ ಶುದ್ಧ ವೈಶಾಖದ ಪೂರ್ಣಮಿಯಲಿ ಅರಳಿದ ಅರಮನೆಯ ಕಮಲ ಯಶೋಧರೆಯ ಮ್ಲಾಮತೆ ರಾಹುಲನ ಪಿತ ಚೆನ್ನನ ಮಾಲೀಕ ಕಂಥಕನ ಕಾಂತಿಮತಿ ಈ ಸಿದ್ದಾರ್ಥ ದಿಕ್ಕನ್ನೇ ದರ್ಶಿಸಿದ ಬೀದಿ ಬದುಕು ಸತ್ಯ ಅನ್ವೇಷಣೆಯ ಪರಿತ್ಯಾಗಿ ಜ್ಞಾನಕ್ಕಾಗಿ ಪರಿತಪಿತ ವಿವೇಕಿ ಜಗಕೆ ಶಾಂತಿ ಬೋಧಿಸಿದ ಯೋಗಿ ಶುದ್ಧ ಚಾರಿತ್ರ್ಯದ ಮೂರ್ತಿ ಮಂದಸ್ಮಿತದ […]

ಬುದ್ಧ ಪೂಣಿಮಾ ವಿಶೇಷ-ಕವಿತೆ

ಯಶೋಧರೆಯ ಸ್ವಗತ ಶೋಭಾ ನಾಯ್ಕ ಬಾನ ಚೆಂದಿರನನ್ನೇ ಇಳಿಸಿಬಿಟ್ಟೆ ನಿನ್ನ ಪ್ರೀತಿಗೆ ಎಂದು ಕಂದನ ಕೈಗಿತ್ತವ ನೀನು ಜೊತೆ ಇರುವೆನೆಂದು ಜೊತೆ ಹೆಜ್ಜೆ ಇಟ್ಟು ನಕ್ಷತ್ರಗಳ ಜಾತ್ರೆಯನ್ನೆಲ್ಲ ಸುತ್ತಿಸಿ‌ ಬಂದವ ನೀನು ಬದುಕ ಸಿಹಿ ಕಡಲಿನಲ್ಲಿ ಈಜಾಡಿಸಿ ದಡ ಸೇರುವುದರೊಳಗೆ ಹೊರಟು ಹೋದೆಯಲ್ಲಾ ? ಹೊದೆದ ಹೊದಿಕೆಯನ್ನೂ ಅಲುಗಾಡಿಸದಂತೆ ರಥಬೀದಿಯ ಗುಟ್ಟು ಗೊತ್ತಿರದ ನೆಲ,ಗೋಡೆ ಕಿಡಕಿಗಳೆಲ್ಲ ನನ್ನನ್ನೇ ಜರಿದಂತೆ ಭಾಸವಾಗುತ್ತದೆ! ಒಣಗಿ ಹಾಕಿರುವೆ ಕಣ್ಣ ನೀರಲ್ಲೇ….ನೆಂದ ಚಾದರವ ಅದರದ್ದೂ….ದಿವ್ಯಮೌನ ಯಾರ ಬಳಿ ಹೇಳಲಿ ನನ್ನೊಡಲ ನೋವ? ಮಗನೀಗ‌ […]

ಬುದ್ಧ ಪೂರ್ಣಿಮಾ ವಿಶೇಷ

ಆಸೆಯೇ ದು:ಖಕ್ಕೆ ಮೂಲ ಚಂದ್ರು ಪಿ.ಹಾಸನ ಆಸೆಯೇ ದುಃಖಕ್ಕೆ ಮೂಲ ಎಂಬುದೇ ಜ್ಞಾನ಻ಯೋಗಿಯ ಪ್ರಸಿದ್ಧ ತತ್ವ ಏಕತೆಯು ನಿಸ್ವಾರ್ಥ ಗುಣಗಳನ್ನು ಎತ್ತಿ ಹಿಡಿಯುತ್ತದೆ. ಆಗ ಸ್ವಾರ್ಥತೆ ಕಡಿಮೆಯಾಗಿ ಮಾನವೀಯ ಮೌಲ್ಯಗಳು ಹೊರಹೊಮ್ಮುತ್ತದೆ. ಒಟ್ಟಾರೆಯಾಗಿ ಮಾನವ ತನ್ನ ಜೀವನದಲ್ಲಿ ಸ್ವಾರ್ಥತೆಯ ಬಿಟ್ಟು ನಿಸ್ವಾರ್ಥ ಸೇವೆ ಮಾಡುವುದಲ್ಲಾ ಮಾನವೀಯ ಮೌಲ್ಯಗಳಾಗುತ್ತವೆ. ಅದಕ್ಕಾಗಿ ಮಾನವ ಬೆಳೆಸಿಕೊಳ್ಳಬೇಕಾದ ಒಳ್ಳೆಯ ಗುಣಗಳೇ  ಮೌಲ್ಯಗಳು. ನಮ್ಮ ಸಮಾಜದಲ್ಲಿ ಅಂಧಕಾರ, ದಾರಿದ್ರ್ಯ, ಅನಾಚಾರಗಳು ತಾಂಡವ ಮಾಡುತ್ತಿದ್ದಾಗ ಈ ಮಾನವೀಯ ಮೌಲ್ಯಗಳು ತಲೆಎತ್ತಿದರೆ ಈ ಸಮಸ್ಯೆಗಳಿಗೆ ಭಹುಶಃ ಪರಿಹಾರ […]

ಬುದ್ಧ ಪೂರ್ಣಿಮಾ ವಿಶೇಷ

  ‘ಮುಟ್ಟಿದರೆ ಕೆಡುಕಿಲ್ಲ ಮುಟ್ಟದಿರೆ ಒಳಿತು’  ವಸುಂಧರಾ ಕದಲೂರು   ‘ಮುಟ್ಟಿದರೆ ಕೆಡುಕಿಲ್ಲ ಮುಟ್ಟದಿರೆ ಒಳಿತು’              ಈ ಸಾಲುಗಳು ಮಾಸ್ತಿಯವರ ‘ಯಶೋಧರ’ ನಾಟಕದಲ್ಲಿದೆ ಎಂಬ ನೆನಪು.            ರಾಜಕುಮಾರನಾಗಿದ್ದ ಸಿದ್ಧಾರ್ಥನು ಬುದ್ಧನಾಗಿ, ಜೀವನದ ಪರಮಸತ್ಯವನ್ನು ಕಂಡು, ಅದನ್ನು ಜಗತ್ತಿಗೆ ಬೋಧಿಸಿದ. ತನ್ನ ಉಪದೇಶ ಮಾತ್ರದಿಂದಲೇ ಲೋಕದ ಕಣ್ತೆರೆಸಿದವನು, ಜನರ ದುಃಖ ಮರೆಸಿದವನು, ಕಣ್ಣೀರನು ಒರೆಸಿದವನು ಹೀಗೆಲ್ಲಾ ಹೇಳುತ್ತಾರೆೆ. ಬುದ್ಧನ ವಿಚಾರದಲ್ಲಿ ಇದೆಲ್ಲಾ ನಿಜವಿರಬಹುದು.      […]

ಬುದ್ಧ ಪೂರ್ಣಿಮಾ ವಿಶೇಷ

ಜ್ಞಾನದ ದಿವ್ಯ ಬೆಳಕು ಚೆಲ್ಲುವ ‘ಬುದ್ಧ ಪೌರ್ಣಿಮೆ’ ಜ್ಞಾನದ ದಿವ್ಯ ಬೆಳಕು ಚೆಲ್ಲುವ ‘ಬುದ್ಧ ಪೌರ್ಣಿಮೆ’..! ಬುದ್ಧ ಪೌರ್ಣಿಮೆಯ ದಿನ ಇದೇ ದಿನಾಂಕ 7 ರಂದು ಇದೆ. ಆ ನೆಪದಲ್ಲಿ ಈ ಬುದ್ಧನ ನೆನೆದು ಈ ಲೇಖನ… ಬೆಳದಿಂಗಳ ತಂಪು, ಆಹ್ಲಾದ, ನಿರ್ಲಿಪ್ತತೆ, ಶಾಂತಿ, ಏಕಾಂತ, ಪ್ರೇಮ, ಪ್ರಶಾಂತತೆ, ತೇಜಸ್ಸು- ಇವೆಲ್ಲಕ್ಕೂ ಸಂಕೇತವಾಗಿದೆ ಬುದ್ಧ ಪೌರ್ಣಿಮೆ. ತನ್ನ ಅಂಗಳದಲ್ಲಿ ಚೆಲ್ಲಿರುವ ಬೆಳದಿಂಗಳು ತನ್ನದೆಂಬಂತೆ ಕಂಡರೂ ಅದು ತನ್ನದಲ್ಲ ಎಂಬುದು ಮನುಷ್ಯರಲ್ಲಿ ಅಂತರ್ಗತವಾದ ಎಚ್ಚರ. ಬದುಕಿನ ಪ್ರತಿ ಹೆಜ್ಜೆಯಲ್ಲೂ […]

Back To Top